ಸಂಗ್ರಹ ಚಿತ್ರ
ಕ್ರೀಡೆ
ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ: ಕ್ರೀಡಾಂಗಣದಲ್ಲೇ ಗದ್ಗದಿತರಾದ ಮರ್ರೆ
ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ ಎಂದು ಹೇಳುವ ಮೂಲಕ ಬ್ರಿಟೀಷ್ ಟೆನ್ನಿಸ್ ದಂತಕಥೆ ಆ್ಯಂಡಿ ಮರ್ರೆ ಹೇಳಿದ್ದಾರೆ.
ಸಿಡ್ನಿ: ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ ಎಂದು ಹೇಳುವ ಮೂಲಕ ಬ್ರಿಟೀಷ್ ಟೆನ್ನಿಸ್ ದಂತಕಥೆ ಆ್ಯಂಡಿ ಮರ್ರೆ ಹೇಳಿದ್ದಾರೆ.
ಮೆಸ್ಬೋರ್ನ್ ನಲ್ಲಿ ಇಂದು ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯದಲ್ಲೇ ಗಾಯದ ಸಮಸ್ಯೆಯಿಂದ ಬಳಲಿ ಸ್ಪೈನ್ ನ ರಾಬರ್ಟೊ ಬಟಿಸ್ಟಾ ಅಗಟ್ ವಿರುದ್ಧ 6-4, 6-4, 6-7 (5), 6-7 (4), 6-2 ನೇರ ಸೆಟ್ ಗಳ ಅಂತರದಲ್ಲಿ ಸೋಲು ಕಂಡರು. ಪಂದ್ಯದ ಆರಂಭದಲ್ಲೇ ಸೊಂಟದ ನೋವಿಗೆ ತುತ್ತಾದ ಮರ್ರೆ ಯಾವುದೇ ಕಾರಣಕ್ಕೂ ಅಂತಿಮ ಕ್ಷಣದವರೆಗೂ ಸೋಲೊಪ್ಪಿಕೊಳ್ಳಲ್ಲಿಲ್ಲ, ಮೊದಲೆರಡು ಸೆಟ್ ಗಳಲ್ಲಿ ಹಿನ್ನಡೆ ಅನುಭವಿಸಿದರೂ ಆ ಬಳಿಕ ಮೂರು ಮತ್ತು ನಾಲ್ಕನೇ ಸೆಟ್ ಗಳಲ್ಲಿ ತಿರುಗೇಟು ನೀಡಿದರು. ಆದರೆ ಅಂತಿಮ ಸೆಟ್ ನಲ್ಲಿ ಮತ್ತೆ ನೋವಿಗೆ ತುತ್ತಾದ ಮರ್ರೆ 6-2 ಅಂತರದಲ್ಲಿ ಹಿನ್ನಡೆ ಅನುಭವಿಸಿದರು.
ಆ ಮೂಲಕ ತಮ್ಮ 11 ವರ್ಷಗಳ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲೇ ಮೊದಲ ಬಾರಿಗೆ ಮರ್ರೆ ಮೊದಲ ಪಂದ್ಯದಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಅತ್ತ ಅಂತಿಮ ಸೆಟ್ ನಲ್ಲಿ ಮರ್ರೆ ಸೋಲು ಕಾಣುತ್ತಿತ್ತಂತೆಯೇ ಇಡೀ ಕ್ರೀಡಾಂಗಣ ಕ್ಷಣಕಾಲ ಸ್ಛಬ್ಧವಾಗಿತ್ತು. ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲ ಪ್ರೇಕ್ಷಕರು ಮರ್ರೆ ಹೆಸರನ್ನು ಕೂಗುವ ಮೂಲಕ ಬ್ರಿಟೀಷ್ ಲೆಜೆಂಡ್ ಆಟಗಾರನಿಗೆ ಗೌರವ ಸಲ್ಲಿಕೆ ಮಾಡಿದರು. ಬಳಿಕ ಮಾತನಾಡಿದ ಮರ್ರೆ, ಇಂದು ನಾನು ಏನೇ ಸಂಪಾದಿಸಿದ್ದರೂ ಅದು ಟೆನ್ನಿಸ್ ನಿಂದಲೇ.. ಎಂದು ಹೇಳಿ ಗದ್ಗದಿತರಾದರು. ಬಳಿಕ ಮಾತನಾಡಿದ ಸ್ಪೈನ್ ನ ರಾಬರ್ಟೊ ಬಟಿಸ್ಟಾ ಅಗಟ್ ಅವರು, ಇಂದು ಕ್ರೀಡಾಂಗಣದಲ್ಲಿ ಮರ್ರೆ ಪರ ಕೇಳಿಬರುತ್ತಿರುವ ಘೋಷಣೆ ಮತ್ತು ಬೆಂಬಲಕ್ಕೆ ಅವರು ಅರ್ಹರು. ನಾನು ನನ್ನ ವೃತ್ತಿಜೀವನದಲ್ಲೇ ಕಂಡ ಅತ್ಯಂತ ಕಠಿಣ ಎದುರಾಳಿ ಮರ್ರೆ. ಕೊನೆಯ ಕ್ಷಣದವರೆಗೂ ಅವರು ಸೋಲೊಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

