ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮಂಗಳೂರಿನ ಪ್ರದೀಪ್ ಗೆ 2 ರಜತ ಪದಕ

ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಎರಡು ಬೆಳ್ಳಿ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ.

Published: 24th April 2019 12:00 PM  |   Last Updated: 24th April 2019 11:43 AM   |  A+A-


Mangaluru: Pradeep Acharya bags 2 silver medals in power-lifting in Hong Kong

ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮಂಗಳೂರಿನ ಪ್ರದೀಪ್ ಗೆ 2 ರಜತ ಪದಕ

Posted By : RHN RHN
Source : Online Desk
ಮಂಗಳೂರು: ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಎರಡು ಬೆಳ್ಳಿ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ.

ಪ್ರದೀಪ್ ಆಚಾರಯ ಪವರ್ ಲಿಫ್ಟಿಂಗ್ ಚಾಂಪಿಯನ್​ಶಿಪ್ ನ 74 ಕೆಜಿ ಸೀನಿಯರ್ ವಿಭಾಗದಲ್ಲಿ (ಸ್ಕ್ವಾಟ್ 260 ಕೆಜಿ, ಬೆಂಚ್ ಪ್ರೆಸ್ 190 ಕೆಜಿ, ಡೆಡ್ ಲಿಫ್ಟ್ ನಲ್ಲಿ 260 ಕೆಜಿ) ವಿಭಾಗಗಳಲ್ಲಿ ಎರಡು ಬೆಳ್ಳಿ ಪದಕಗಳನ್ನು ಗಳಿಸಿಕೊಂಡಿದ್ದಾರೆ.

ಮಂಗಳೂರಿನ ಉರ್ವ ಸ್ಟೋರ್ ನಿವಾಸಿಯಾಗಿರುವ ಪ್ರದೀಪ್ ಸತೀಶ್ ಕುಮಾರ್ ಕುದ್ರೋಳಿಯವರ ಮಾರ್ಗದರ್ಶನದಲ್ಲಿ ಬಾಲಾಂಜನೇಯ ಜಿಮ್ನಾಷಿಯಮ್ ಸಂಸ್ಥೆಯಲ್ಲಿ ಪವರ್ ಲಿಫ್ಟಿಂಗ್ ತರಬೇತಿ ಪಡೆದಿದ್ದಾರೆ.

ಕಳೆದ ತಿಂಗಳು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಏಷ್ಯಾ ಫೆಸಿಪಿಕ್ ಈಕ್ವಿಪ್ಪಡ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರದೀಪ್ ಎರಡು ಬಂಗಾರದ ಪದಕಗಳನ್ನು ಗಳಿಸಿದ್ದರು.2017ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಇದ್ದ ಕಾಮನ್ವೆಲ್ತ್ ಪಂದ್ಯಾವಳಿಯಲ್ಲಿ ಸಹ ಪ್ರದೀಪ್ ಚಿನ್ನದ ಪದಕ ಜಯಿಸಿದ್ದರು.ಹೀಗೆ ಇವರು ಇದುವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 8 ಕ್ಕೂ ಅಧಿಕ ಚಿನ್ನದ ಪದಕಗಳ ಒಡೆಯರೆನಿಸಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp