ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಟೋಕಿಯೋ ಒಲಂಪಿಕ್ ಅರ್ಹತೆ ಪಡೆದ ಭಾರತದ ಮಿಶ್ರ ರಿಲೇ ತಂಡ

ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿರುವ ಭಾರತ ತಂಡ ಟೋಕಿಯೋ ಒಲಂಪಿಕ್ಸ್ ಅರ್ಹತೆ ಪಡೆದು ನೂತನ ಇತಿಹಾಸ ಸೃಷ್ಟಿಸಿದೆ.
ಟೋಕಿಯೋ ಒಲಂಪಿಕ್ ಅರ್ಹತೆ ಪಡೆದ ಬಾರತದ ಮಿಶ್ರ ರಿಲೇ ತಂಡ
ಟೋಕಿಯೋ ಒಲಂಪಿಕ್ ಅರ್ಹತೆ ಪಡೆದ ಬಾರತದ ಮಿಶ್ರ ರಿಲೇ ತಂಡ

ದೋಹಾ: ದೋಹಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 4*400 ಮಿಶ್ರ ರಿಲೇ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿರುವ ಭಾರತ ತಂಡ ಟೋಕಿಯೋ ಒಲಂಪಿಕ್ಸ್ ಅರ್ಹತೆ ಪಡೆದು ನೂತನ ಇತಿಹಾಸ ಸೃಷ್ಟಿಸಿದೆ.

ಮೊಹಮ್ಮದ್ ಅನಾಸ್, ವಿ.ಕೆ. ವಿಸ್ಮಯ, ಜಿಸ್ನಾ ಮ್ಯಾಥ್ಯೂ, ನಿರ್ಮಲ್ ತೋಮ್ ರಿದ್ದ ಭಾರತದ ರಿಲೇ ತಂಡ 3.16.14 ಸೆಕಂಡ್ಸ್ ನಲ್ಲಿ ಗುರಿ ಮುಟ್ಟಿ ತೃತೀಯ ಸ್ಥಾನ ಗಳಿಸಿತ್ತು.

ಫೈನಲ್ಸ್ ಗೆ ಪ್ರವೇಶಿಸುವ ಮೊದಲ ಎಂಟು ತಂಡಗಳು ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಹೊಂದಲಿದ್ದು ಭಾರತ ಮೂರನೇ ತಂಡವಾಗಿ ಒಲಂಪಿಕ್ ಕ್ರೀಡಾಕೂಟಕ್ಕೆ ಎಂಟ್ರಿ ಕೊಡುತ್ತಿದೆ.

ಇನ್ನು 100 ಮೀ. ಹೀಟ್ಸ್ ನಲ್ಲಿ ಭಾರತೀಯರಾದ ತಾರಾ ಸ್ಪ್ರಿಂಟರ್ ದ್ಯುತಿ ಚಂದ್ ಕಳಪೆ ಪ್ರದರ್ಶನ ನೀಡುವ ಮೂಲಕ ಫೈನಲ್ಸ್ ಪ್ರವೇಶದಿಂದ ಅನರ್ಹಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com