ಎಂದೆದಿಗೂ ನನ್ನ ಬೆಂಬಲ ಭಾರತಕ್ಕೆ: ಗಂಡನ ಮುಂದೆ ಸೋಲದ ಸಾನಿಯಾ ಮಿರ್ಜಾ!

ಭಾರತದ ಅಗ್ರ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರೊಂದಿಗೆ ವಿವಾಹವಾಗಿದ್ದರು. ಟೆನಿಸ್ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಅತ್ಯುತ್ತಮ ಹೆಸರು ಮಾಡಿರುವ ಹೈದರಾಬಾದ್ ಆಟಗಾರ್ತಿ, ಮದುವೆಗೂ ಮುನ್ನ ಶೋಯೆಬ್ ಮಲ್ಲಿಕ್ ಅವರೊಂದಿಗೆ ಹೇಗೆ ಸಂಬಂಧ ಆರಂಭವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ
Updated on: 

ನವದೆಹಲಿ: ಭಾರತದ ಅಗ್ರ ಮಹಿಳಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರೊಂದಿಗೆ ವಿವಾಹವಾಗಿದ್ದರು. ಟೆನಿಸ್ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಅತ್ಯುತ್ತಮ ಹೆಸರು ಮಾಡಿರುವ ಹೈದರಾಬಾದ್ ಆಟಗಾರ್ತಿ, ಮದುವೆಗೂ ಮುನ್ನ ಶೋಯೆಬ್ ಮಲ್ಲಿಕ್ ಅವರೊಂದಿಗೆ ಹೇಗೆ ಸಂಬಂಧ ಆರಂಭವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸ್ಪೋರ್ಟ್ಸ್ ಕೀಡಾದ ಫೇಸ್ ಬುಕ್ ಲೈವ್ ಚಾಟ್ ನಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, ನಮ್ಮಿಬ್ಬರ ನಡುವಿನ ಸಂಬಂಧ ಬಹಳ ಮೋಜಿನಿಂದ ಕೂಡಿತ್ತು. ನಮ್ಮ ನಡುವೆ ಏನಾಯಿತು ಎಂಬುದನ್ನು ಮೊದಲ ಬಾರಿ ಜನರು ವೀಕ್ಷಿಸಿದ್ದರು ಮತ್ತು ನನಗಿಂತ ಅವರು ಹೆಚ್ಚು ಮಾತನಾಡುತ್ತಾರೆ ಎಂಬುದನ್ನು ಪ್ರತಿಯೊಬ್ಬರು ನೋಡಿದ್ದರು. ಇದು ಪ್ರಪಂಚದ ನಂಬಿಕೆಗೆ ವಿರುದ್ಧವಾಗಿತ್ತು ಎಂದು ಮಿರ್ಜಾ ಹೇಳಿದರು. 

ಇಬ್ಬರೂ ಆಯಾ ದೇಶಗಳನ್ನು ಪ್ರತಿನಿಧಿಸುವಲ್ಲಿ ಸಾಕಷ್ಟು ಹೆಮ್ಮೆ ಪಡುವ ಕ್ರೀಡಾಪಟುಗಳು. ಸಾನಿಯಾ ಅವರು ಮಲಿಕ್ ಅವರೊಂದಿಗೆ ಡೇಟಿಂಗ್ ಮಾಡುವಾಗ, ಭಾರತವನ್ನು ಬೆಂಬಲಿಸುವ ಬಗ್ಗೆ ಮಾತನಾಡುತ್ತಿದ್ದರು. 

ಕೆಲವು ಕಾರಣಗಳಿಂದ ಅವರು ಭಾರತದ ವಿರುದ್ಧ ಆಡುವುದನ್ನು ಇಷ್ಟಪಡುತ್ತಿದ್ದರು. ನಾವಿಬ್ಬರೂ ಡೇಟಿಂಗ್ ಮಾಡಿದಾಗಲೆಲ್ಲಾ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಆ ವೇಳೆ ನಾನು ಯಾವಾಗಲೂ ಭಾರತ ತಂಡಕ್ಕೆ ಮಾತ್ರ ಬೆಂಬಲ ಸೂಚಿಸುತ್ತೇನೆ, ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಹೇಳುತ್ತಿದ್ದೆ. ನಂತರ ಅವರು ಮಾತನಾಡಿ, 'ಭಾರತದ ವಿರುದ್ಧದ ನನ್ನ ದಾಖಲೆ ಅತ್ಯುತ್ತಮವಾಗಿದೆ ಎಂಬುದನ್ನು ನಿನಗೆ ಹೇಳಲು ಇಷ್ಟಪಡುತ್ತೇನೆ.' ಶೋಯೆಬ್ ಮಲ್ಲಿಕ್ ಅವರ ದೀರ್ಘಕಾಲದ ವೃತ್ತಿ ಜೀವನ ಅದ್ಭುತವಾಗಿದೆ. ಈ ಬಗ್ಗೆ ಅವರ ಮೇಲೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಸಾನಿಯಾ ಮಿರ್ಜಾ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com