ಅಮೆರಿಕಾದದಲ್ಲಿ ಲಾಕ್ ಡೌನ್ ಆದ ಹಾಕಿ ಚಾಂಪಿಯನ್: ತಕ್ಷಣದ ವೈದ್ಯಕೀಯ ನೆರವಿಗಾಗಿ ಅಶೋಕ್ ದಿವಾನ್ ಗೆ ಕೇಂದ್ರದ ಸಹಾಯ

ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸಿಲುಕಿರುವ  ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್ ಅವರಿಗೆ "ತಕ್ಷಣದ ವೈದ್ಯಕೀಯ ಚಿಕಿತ್ಸೆ" ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಅಶೋಕ್ ದಿವಾನ್
ಅಶೋಕ್ ದಿವಾನ್

ನವದೆಹಲಿ: ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸಿಲುಕಿರುವ  ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್ ಅವರಿಗೆ "ತಕ್ಷಣದ ವೈದ್ಯಕೀಯ ಚಿಕಿತ್ಸೆ" ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

"ಹಾಕಿ ಒಲಿಂಪಿಯನ್ ಅಶೋಕ್ ದಿವಾನ್ ಯುಎಸ್ ಎನಲ್ಲಿ  ಸಿಲುಕಿದ್ದಾರೆ.ನಾರೋಗ್ಯದಿಂದ ಬಳಲುತ್ತಿರುವ ಅವರೀಗ  ಐಒಎ ಮೂಲಕ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ತಲುಪಿದ್ದಾರೆ" ಕಿರಣ್ ರಿಜಿಜು ಅವರ ಕಚೇರಿ  ಗುರುವಾರ ಟ್ವೀಟ್ ಮಾಡಿದೆ.

"ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದ್ದು ಅಲ್ಲಿನ ಅಧಿಕಾರಿಗಳು ಹಾಕಿ ಆಟಹ್ಗಾರ ದಿವಾನ್ ಅವರಿಗೆ  ತಕ್ಷಣದ ವೈದ್ಯಕೀಯ ಚಿಕಿತ್ಸೆ ಸಿಗುವುದನ್ನು  ಖಚಿತಪಡಿಸಿಕೊಳ್ಳಲು ವೈದ್ಯರನ್ನು ಕಳುಹಿಸುತ್ತಿದ್ದಾರೆ." ಅದು ಹೇಳಿದೆ.

ಆರೋಗ್ಯ ಸಮಸ್ಯೆ ಹೆಚ್ಚಾದ ನಂತರ ದಿವಾನ್ ಕ್ರೀಡಾ ಸಚಿವಾಲಯದ ಸಹಾಯವನ್ನು ಕೋರಿದ್ದರು. ಅವರು ಏಪ್ರಿಲ್ 20 ರಂದು ಭಾರತಕ್ಕೆ ಹಿಂತಿರುಗಲು ಬಯಸಿದ್ದರು.ಆದಾಗ್ಯೂ ಕೊರೋನಾ ಬಿಕ್ಕಟ್ಟಿನ ಕಾರಣ ಅವರ ಪ್ರಯಾಣವನ್ನು ಮುಂದೂಡಲಾಗಿದೆ.

ಅಶೋಕ್ ದಿವಾನ್ 1975 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com