ಪ್ರೊ ಲೀಗ್ ಹಾಕಿ: ನೇದರ್‌ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ

ವಿಶ್ವದ ಮೂರನೇ ಶ್ರೇಯಾಂಕದ ನೇದರ್‌ಲೆಂಡ್ ವಿರುದ್ಧ ಭಾರತ ಹಾಕಿ ತಂಡ ಇಂದಿಲ್ಲಿ ಆರಂಭವಾದ ಪ್ರೊ ಲೀಗ್ ಮೊದಲನೇ ಪಂದ್ಯದಲ್ಲಿ 5-2 ಅಂತರದಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ಪ್ರೊ ಲೀಗ್ ಹಾಕಿ: ನೇದರ್‌ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ
ಪ್ರೊ ಲೀಗ್ ಹಾಕಿ: ನೇದರ್‌ಲೆಂಡ್ ವಿರುದ್ಧ ಭಾರತಕ್ಕೆೆ 5-2 ಅಂತರದಲ್ಲಿ ಭರ್ಜರಿ ಜಯ

ಭುವನೇಶ್ವರ್: ವಿಶ್ವದ ಮೂರನೇ ಶ್ರೇಯಾಂಕದ ನೇದರ್‌ಲೆಂಡ್ ವಿರುದ್ಧ ಭಾರತ ಹಾಕಿ ತಂಡ ಇಂದಿಲ್ಲಿ ಆರಂಭವಾದ ಪ್ರೊ ಲೀಗ್ ಮೊದಲನೇ ಪಂದ್ಯದಲ್ಲಿ 5-2 ಅಂತರದಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜ್ರಂತ್ ಸಿಂಗ್ (1ನೇ ನಿ.), ರೂಪಿಂದರ್ ಪಾಲ್ ಸಿಂಗ್ (12 ಮತ್ತು 46ನೇ ನಿ.), ಮಂದೀಪ್ ಸಿಂಗ್ (34ನೇ ನಿ.) ಹಾಗೂ ಲಲಿತ್ ಉಪಾಧ್ಯಾಯ (36ನೇ ನಿ.) ಅವರು ಗಳಿಸಿದ ಗೋಲುಗಳ ಸಹಾಯದಿಂದ ಭಾರತ ಶನಿವಾರ ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು. ನೇದರ್‌ಲೆಂಡ್ ಪರ ಜಿಪ್ ಜಾನ್ಸೆೆನ್ (14ನೇ ನಿ.) ಹಾಗೂ ಜೆರೊಯಿನ್ ಹಾರ್ಟರ‌್ಜರ್ (28ನೇ ನಿ.) ಅವರ ಗಳಿಸಿದ ಎರಡು ಗೋಲು ಗಳಿಸಿದರು.

ಪಂದ್ಯದ ಮೊದಲನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳೂ ಗೋಲು ಗಳಿಸಿದವು. ಗುಜ್ರಂತ್ ಸಿಂಗ್ ಭಾರತಕ್ಕೆೆ 26ನೇ ಸೆಕೆಂಡ್‌ಗಳಲ್ಲಿಯೇ ಖಾತೆ ತೆರೆದರು. ಇದಾದ ಬಳಿಕ 12ನೇ ನಿಮಿಷದಲ್ಲಿ ರೂಪಿಂದರ್ ಭಾರತಕ್ಕೆೆ ಎರಡನೇ ಗೋಲು ತಂದು ಕೊಟ್ಟರು. ನಂತರ, ತಕ್ಷಣ ಪೆನಾಲ್ಟಿ ಕಾರ್ನರ್ ಪಡೆದ ಪ್ರವಾಸಿ ತಂಡದ ಪರ ಜಿಪ್ ಜಾನ್ಸೆೆನ್ 14ನೇ ನಿಮಿಷದಲ್ಲಿ ಗೋಲು ಸಿಡಿಸಿ 1-2 ಅಂತರವನ್ನು ಕಡಿಮೆಗೊಳಿಸಿದರು.

ಎರಡನೇ ಕ್ವಾರ್ಟರ್ ಆರಂಭವಾದ ಎಂಟು ನಿಮಿಷಗಳ ಬಳಿಕ ಜೆರೊಯಿನ್ ಹಾರ್ಟರ‌್ಜರ್ (28ನೇ ನಿ.) ನೇದರ್‌ಲೆಂಡ್ ಗೆ ಎರಡನೇ ಗೋಲು ತಂದುಕೊಟ್ಟರು. ಆ ಮೂಲಕ ಮೊದಲಾರ್ಧ ಅವಧಿ ಮುಕ್ತಾಯಕ್ಕೆೆ ಉಭಯ ತಂಡಗಳು 2-2 ಸಮಬಲ ಸಾಧಿಸಿದವು.

ಎರಡನೇ ಅವಧಿಯ ಬಳಿಕ ಗೋಲು ಗಳಿಸುವಲ್ಲಿ ಪ್ರವಾಸಿಗರು ವಿಫಲರಾದರು. ಆದರೆ, 34ನೇ ನಿಮಿಷದಲ್ಲಿ ನಾಯಕ ಮಂದೀಪ್ ಸಿಂಗ್ ಅತ್ಯುತ್ತಮ ಪ್ರದರ್ಶನ ತೋರಿ ಭಾರತಕ್ಕೆೆ 3-2 ಮುನ್ನಡೆ ತಂದಿತ್ತರು. ಇದಾದ ಎರಡೇ ನಿಮಿಷಗಳ ಅಂತರದಲ್ಲಿ ಲಲಿತ್ ಉಪಾಧ್ಯಾಾಯ (36ನೇ ನಿ.) ಭಾರತದ ಮುನ್ನಡೆಯನ್ನು 4-2ಕ್ಕೆೆ ವಿಸ್ತರಿಸಿದರು.

ಇದರ ನಡುವೆ ಒತ್ತಡಕ್ಕೆೆ ಒಳಗಾದ ಡಚ್ಚರು ಗೋಲು ಗಳಿಸಲು ಸಾಕಷ್ಟು ಪರದಾಡಿದರು. ಆದರೆ, ಭಾರತದ ರಕ್ಷಣಾ ಕೋಟೆ ಇದಕ್ಕೆೆ ಅವಕಾಶ ನೀಡಲಿಲ್ಲ.

ರೂಪಿಂದರ್ ಪಾಲ್ ಸಿಂಗ್ ಎರಡನೇ ಗೋಲು ಗಳಿಸಿ ಭಾರತಕ್ಕೆೆ 5-2 ಅಂತರದಲ್ಲಿ ಜಯದಲ್ಲಿ ಮಹತ್ತರ ಪಾತ್ರವಹಿಸಿದರು. ಎರಡನೇ ಪಂದ್ಯ ನಾಳೆ ಸಂಜೆ 5 ಗಂಟೆಗೆ ಇದೇ ಅಂಗಳದಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com