ಮೂರು ತಿಂಗಳಿಂದ ಜರ್ಮನಿಯಲ್ಲಿ ಸಿಲುಕಿದ್ದ ವಿಶ್ವನಾಥನ್ ಆನಂದ್ ಇಂದು ಭಾರತಕ್ಕೆ ಆಗಮನ

ಕಳೆದ ಮೂರು ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದ ವಿಶ್ವ ಪ್ರಸಿದ್ದ ಚೆಸ್ ಚ್ಯಾಂಪಿಯನ್ ವಿಶ್ವನಾಥನ್ ಆನಂದ್ ಶನಿವಾರ ಭಾರತಕ್ಕೆ ಬರಲಿದ್ದಾರೆ.

Published: 30th May 2020 02:11 PM  |   Last Updated: 30th May 2020 02:11 PM   |  A+A-


vishwanathan anand

ವಿಶ್ವನಾಥನ್ ಆನಂದ್

Posted By : Shilpa D
Source : PTI

ಚೆನ್ನೈ: ಕಳೆದ ಮೂರು ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದ ವಿಶ್ವ ಪ್ರಸಿದ್ದ ಚೆಸ್ ಚ್ಯಾಂಪಿಯನ್ ವಿಶ್ವನಾಥನ್ ಆನಂದ್ ಶನಿವಾರ ಭಾರತಕ್ಕೆ ಬರಲಿದ್ದಾರೆ.

ಕೊರೋನಾದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ವಿಶ್ವನಾಥನ್ ಆನಂದ್ ಜರ್ಮನಿಯಲ್ಲಿ ಸಿಲುಕಿಕೊಂಡಿದ್ದರು. ಆನಂದ್ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಆನಂದ್ ಪತ್ನಿ ಅರುಣಾ ಹೇಳಿದ್ದಾರೆ.

ಶುಕ್ರವಾರ ರಾತ್ರಿ  ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದಾರೆ. ಇಂದು ರಾತ್ರಿ 1,15 ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ.

ಕರ್ನಾಟಕ ಸರ್ಕಾರದ ನಿಯಮದಂತೆ ಬೆಂಗಳೂರಿಗೆ ಆಮಿಸುವ ವಿಶ್ವನಾಥನ್ ಆನಂದ್ ಅವರನ್ನು 14 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ. ಶಿಷ್ಟಾಚಾರದಂತೆ ಕ್ವಾರಂಟೈನ್ ನ ಎಲ್ಲಾ ನಿಯಮಗಳನ್ನು ಪಾಲಿಸಿದ ನಂತರ ಚೆನ್ನೈ ಗೆ ಆಗಮಿಸಲಿದ್ದಾರೆ ಎಂದು ಅರುಣಾ ತಿಳಿಸಿದ್ದಾರೆ,

Stay up to date on all the latest ಕ್ರೀಡೆ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp