ವಿಶ್ವದ ಟಾಪ್ 3 ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್
ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಜಗತ್ತಿನ ಜನಮೆಚ್ಚಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಟಾಪ್ 3 ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯ ಟಾಪ್ 3ರಲ್ಲಿ ಸ್ಥಾನ ಪಡೆದ ಇತರೆ ಇಬ್ಬರೆಂದರೆ ಜಗತ್ಪ್ರಸಿದ್ಧ ಫುಟ್ಬಾಲಿಗರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ.
ಇದರ ಜೊತೆಗೆ ವಿಶ್ವದ ಜನಪ್ರಿಯ ಪುರುಷರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ ಸಚಿನ್ ತೆಂಡುಲ್ಕರ್. 38 ದೇಶಗಳಲ್ಲಿ ಈ ಕುರಿತು ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಸಚಿನ್ ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.
ಸಚಿನ್ ತೆಂಡುಲ್ಕರ್ ಅವರು ಯೂನಿಸೆಫ್ ಜೊತೆ ಗುರುತಿಸಿಕೊಂಡಿದ್ದು, ದಕ್ಷಿಣ ಏಷ್ಯಾ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ವಿಶೇಷ.
Related Article
ಟೆನಿಸ್ ಆಟಗಾರ ರಾಫೆಲ್ ನಡಾಲ್ ಗೆ ಕೋವಿಡ್-19 ದೃಢ
ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ
ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!
ಸ್ವದೇಶದಲ್ಲಿ ಕಾಣೆಯಾಗಿದ್ದ ಚೀನಾ ಟೆನ್ನಿಸ್ ಆಟಗಾರ್ತಿ ವಿಡಿಯೊ ಕಾಲ್ ನಲ್ಲಿ ಪ್ರತ್ಯಕ್ಷ: ಖಾಸಗಿತನ ಗೌರವಿಸುವಂತೆ ಮನವಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ