ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು!

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಓಟಗಾರ ಎಂದು ಕರೆಯಲ್ಪಡುವ ಉಸೇನ್ ಬೋಲ್ಟ್, ತಮ್ಮ ಯಶಸ್ಸಿನ ಹಿಂದೆ ಕ್ರಿಕೆಟ್‌ನ ದೊಡ್ಡ ಪಾತ್ರ ಇತ್ತು ಅನ್ನೋದರ ಬಗ್ಗೆ ಹೇಳಿದ್ದಾರೆ. 
ಹುಸೇನ್ ಬೋಲ್ಟ್
ಹುಸೇನ್ ಬೋಲ್ಟ್

ಬೆಂಗಳೂರು: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಓಟಗಾರ ಎಂದು ಕರೆಯಲ್ಪಡುವ ಉಸೇನ್ ಬೋಲ್ಟ್, ತಮ್ಮ ಯಶಸ್ಸಿನ ಹಿಂದೆ ಕ್ರಿಕೆಟ್‌ನ ದೊಡ್ಡ ಪಾತ್ರ ಇತ್ತು ಅನ್ನೋದರ ಬಗ್ಗೆ ಹೇಳಿದ್ದಾರೆ. 

ಜಮೈಕಾದ ಈ ಜೀವಂತ ದಂತಕಥೆ ಸಂದರ್ಶನವೊಂದರಲ್ಲಿ, ಕ್ರಿಕೆಟ್ ಆಡುತ್ತಿದ್ದರಿಂದಲೇ ಅಥ್ಲೆಟಿಕ್ಸ್‌ಗೆ ಹೋಗಲು ಸಾಧ್ಯವಾಯಿತು ಅಂತಾ ತಮ್ಮ ಜೀವನದ ವೃತ್ತಿಯಲ್ಲಿ ಆದಂಥ ಬದಲಾವಣೆ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಒಬ್ಬ ಯೋಗ್ಯ ಗುರುವಿನಿಂದ ಆದ ಬದಲಾಣೆ. ಆ ಬದಲಾವಣೆಯನ್ನು ಇಷ್ಟು ಪಟ್ಟೇ.. ಅದು ತನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಕೋಚ್ ಹೇಳಿದ ಸಲಹೆಯಂತೆ ನಡೆದುಕೊಂಡೆ.. ಮೈಗೂಡಿಸಿಕೊಂಡೆ. ಅದರ ಪರಿವರ್ತನೆ ಈ ಜಗದ ಮುಂದೆ ಇದೆ ಅಂತಾ ವಿಶ್ವದ ಶ್ರೇಷ್ಠ ಅಥ್ಲಿಟ್ ಉಸೇನ್ ಬೋಲ್ಟ್ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: 'ವಿಶ್ವದ ವೇಗದ ಓಟಗಾರ': ಒಲಂಪಿಕ್ಸ್​ನಲ್ಲಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಮಾರ್ಸೆಲ್ ಜೇಕಬ್ಸ್
 
ಉಸೇನ್ ಬೋಲ್ಟ್ 8 ಒಲಿಂಪಿಕ್ ಮತ್ತು 11 ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಬೋಲ್ಟ್ ಇಲ್ಲಿಯವರೆಗೆ ಸಾಧಿಸಿರುವ ಯಶಸ್ಸು, ಭವಿಷ್ಯದಲ್ಲಿ ಯಾರಾದರೂ ತಲುಪುವುದು ತುಂಬಾನೆ ವಿರಳ. ಉಸೇನ್ ಬೋಲ್ಟ್ ಅವರ ತವರು ನೆಲ ಜಮೈಕಾದಲ್ಲಿ ಹೆಚ್ಚಿನ ಜನ ಕ್ರಿಕೆಟ್ ಅಥವಾ ಫುಟ್‌ಬಾಲ್ ಇಷ್ಟಪಡುತ್ತಾರೆ. ಇದರಲ್ಲಿ ಅವರ ತಂದೆ ಕ್ರಿಕೆಟ್ ಅಭಿಮಾನಿ. ಹುಟ್ಟುತ್ತಲೇ ಮಕ್ಕಳು, ತಂದೆ-ತಾಯಿಯನ್ನು ಪಾಲಿಸುತ್ತಾರೆ. ಅದರಂಥೆ ಉಸೇನ್ ಬೋಲ್ಟ್ ಗೂ ಕ್ರಿಕೆಟ್‌ ಮೇಲೆ ಹೆಚ್ಚು ಪ್ರೀತಿ ಮೂಡುವಂತೆ ಮಾಡಿತ್ತು. 

 
ಚಿಕ್ಕ ವಯಸ್ಸಿನಲ್ಲಿ ಉಸೇನ್ ಬೋಲ್ಟ್ ಕ್ರಿಕೆಟ್ ಆಡುತ್ತಿದ್ದಾಗ ಈತನ ಧಣಿವರಿಯದ ವೇಗ, ಮಿಂಚಿನ ಓಟ ನೋಡಿದ ಕೋಚ್, ನೀನು ಸ್ಪ್ರಿಂಟಿಂಗ್ (ಓಟದ ಸ್ಪರ್ಧೆ) ಮಾಡಲು ಸಲಹೆ ನೀಡಿದ್ರಂತೆ. ಇಲ್ಲಿಂದಲೆ ಉಸೇನ್ ಬೋಲ್ಟ್ ನ ಯುಗ ಆರಂಭವಾಯಿತು ಅನ್ನಬಹುದು. ತರಬೇತುದಾರನ ಮಾತಿನಂತೆ ಟ್ರ್ಯಾಕ್ ಗೆ ಇಳಿದ ಉಸೇನ್ ಬೋಲ್ಟ್, ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಸದ್ಯ ವಿಶ್ವ ಎಲ್ಲ ದಾಖಲೆಗಳನ್ನು ಈ ರನ್ನಿಂಗ್ ಮಾಂತ್ರಿಕ ಮುರಿದಿದ್ದು, ವಿಶ್ವದ ಸಾರ್ವಕಾಲಿಕ ಓಟಗಾರನಾಗಿ ಹೊರಹೊಮ್ಮಿದ್ದಾರೆ. 

ಇದನ್ನೂ ಓದಿ: ಮೂಡಬಿದಿರೆ: 'ಕಂಬಳದ ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ!
 
ಕುಟುಂಬಕ್ಕಾಗಿ ಏನಾದ್ರೂ ಮಾಡಿ... ಕೆಲವರು ದೇಶಕ್ಕಾಗಿ ಇನ್ನೂ ಏನನ್ನಾದ್ರು ಸಾಧಿಸಿ ಅಂತಾ ಬಯಸ್ತಾರೆ. ಆದರೆ, “ನನಗಾಗಿ ಏನನ್ನಾದರೂ ಮಾಡಬೇಕು ಅನ್ನೋದು ನನ್ನ ಹೆಬ್ಬಯಕೆ ಆಗಿದೆ” ಅಂತಾ ಬೋಲ್ಟ್ ತಿಳಿಸಿದ್ದಾರೆ. “ಮೊದಲಿನಿಂದಲೂ ತಾನು ಫಿಟ್ ಆಗಿದ್ದು, ಕಷ್ಟಪಟ್ಟು ಕೆಲಸ ಮಾಡಿದರೆ ಬಹಳಷ್ಟು ಸಾಧಿಸಬಹುದು ಅಂತಾ ಅರಿತುಕೊಂಡವನು. ನನಗಾಗಿ ಹಲವು ಗುರಿಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳಿಗೆ ತಕ್ಕಂತೆ ಬದುಕಲು ಪ್ರಯತ್ನಿಸಿತ್ತಿರುವೆ. ಇದು ನನಗೆ ತುಂಬಾ ಪ್ರೇರಣೆ ಕೊಟ್ಟಿದೆ” ಅಂತಾ ಬೋಲ್ಟ್ ತಿಳಿಸಿದರು. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಮ್ಗೆ ಯಾವಾಗ ಅರಿವಿಗೆ ಬಂತು ಅನ್ನೋದರ ಬಗ್ಗೆ ಬೋಲ್ಟ್ ಅವರನ್ನು ಕೇಳಿದ್ರೆ, ಇದಕ್ಕೆ ತುಂಬಾ ಕುತೂಹಲಕಾರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 2002ರಲ್ಲಿ ಕಿಂಗ್‌ಸ್ಟನ್‌ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮವರ ಮುಂದೆ ಹೇಗೆ ಆಡುವುದು. ಮುಂದೇನಾಗುತ್ತದೆ ಅನ್ನೋ ಆತಂಕ ಮನೆ ಮಾಡಿತ್ತು. ಆಗ ನನಗೆ ಇನ್ನು ಕೇವಲ 15 ವರ್ಷ. ಆದ್ರೆ, ಈ ಎಲ್ಲ ಗೊಂದಲಗಳ ಮಧ್ಯೆ ಓಟ ಆರಂಭಕ್ಕೂ ಮುನ್ನ ತಪ್ಪಾಗಿ ಎಡಗಾಲಿನ ಶೂ ಅನ್ನು ಬಲಗಾಲಿಗೆ ಮತ್ತು ಬಲಗಾಲಿನ ಶೂ ಅನ್ನು ಎಡಗಾಲಿಗೆ ಹಾಕಿಕೊಂಡಿದ್ದೆ. ಆದ್ರೂ ಸಹ ಮೊದಲ ಸ್ಥಾನ ಪಡೆದೆ. ತಪ್ಪಾಗಿ ಬೂಟ್ ಧರಿಸಿದ್ದರೂ ತನ್ನ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಅನ್ನೋದು ನಂಗೆ ಅಂದೆ ಅರಿವಿಗೆ ಬಂತು. ಆಗ ನನ್ನ ಸಾಮರ್ಥ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಅನ್ನೋದು ಗೊತ್ತಾಯಿತು ಅಂತಾ ಉಸೇನ್ ಬೋಲ್ಟ್ ತಿಳಿಸಿದ್ದಾರೆ. 

ಇದಲ್ಲದೇ ಅಥ್ಲಿಟ್ ಬಿಟ್ಟು ಬೇರೇ ಕ್ರೀಡೆ ಬಗ್ಗೆ ಹಾಗೂ ಆಟಗಾರರ ಬಗ್ಗೆ ಉಸೇನ್ ಬೋಲ್ಟ್ ಯಾವ ರೀತಿ ಅರ್ಥೈಸಿಕೊಂಡಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿರುವ ವಿಚಾರ. ಈ ಬಗ್ಗೆ ಯಾರಿಗೂ ಊಹಿಸಲಾಗದ ಉತ್ತರಗಳನ್ನು ರನ್ನಿಂಗ್ ಮಾಂತ್ರಿಕ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ನಡುವೆ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಅಂತಾ ಪ್ರಶ್ನೆ ಮಾಡಿದಾಗ, ಲಾರಾ ಅವರ ಸ್ವಂತ ಕೆರಿಬಿಯನ್ ತಾರೆ ಹಾಗಾಗಿ ಅವರನ್ನು ಆಯ್ಕೆ ಮಾಡುವುದಾಗಿ ಬೋಲ್ಟ್ ಹೇಳಿದ್ದಾರೆ. ಮೆಸ್ಸಿ ಮತ್ತು ರೊನಾಲ್ಡೊ ಇಬ್ಬರಲ್ಲಿ ಬೋಲ್ಟ್ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದರು. ಇನ್ನು ಅಮೆರಿಕದ ಪ್ರಸಿದ್ಧ ಈಜುಗಾರ ಮೈಕೆಲ್ ಫೆಲ್ಪ್ಸ್ ಹಾಗೂ ಉಸೇನ್ ಬೋಲ್ಟ್ ಇಬ್ಬರ ಹೋಲಿಕೆಯಲ್ಲಿ ಯಾರು ಉತ್ತಮ ಅಂತಾ ಕೇಳಿದ್ರೆ ಬೋಲ್ಟ್ ತಮಾಷೆಯಾಗಿ ಹೇಳಿದರು. 

ಉಸೇನ್ ಬೋಲ್ಟ್ ದೊಡ್ಡ ಸ್ಟಾರ್ ಅಂತಾ ಹೇಳಿದರು. ಏನೇ ಆದ್ರೂ ವಿಶ್ವ ಶ್ರೇಷ್ಠ ಆಟಗಾರರ ಸಾಗಿ ಬಂದ ಹಾದಿ, ಬದುಕು, ಬಡತನ, ಹಣಕಾಸು ಹೀಗೆ.. ಪ್ರತಿಯೊಂದು ಹಂತದಲ್ಲಿ ಏಳು-ಬೀಳು ಕಂಡಿರುತ್ತಾನೆ. ಅದೇ ರೀತಿ ಉಸೇನ್ ಬೋಲ್ಟ್ ಅವರ ಜೀವನದಲ್ಲಿ ತರಬೇತುದಾರ ಮುಖ್ಯ ಪಾತ್ರವಹಿಸಿದ್ದಾರೆ ಅನ್ನೋದು ಅವರ ಮಾತಿನಿಂದಲೇ ಗೊತ್ತಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com