
ಟೋಕಿಯೊ: ಒಲಿಂಪಿಕ್ಸ್ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ರೀಡಾಗ್ರಾಮದಲ್ಲಿ ಇಬ್ಬರು ಅಥ್ಲೀಟ್‌ಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕ್ರೀಡಾಪಟುಗಳಿಗೆ ಸೋಂಕು ದೃಢಪಟ್ಟಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕ್ರೀಡಾ ಗ್ರಾಮದಲ್ಲಿರುವ ಇಬ್ಬರು ಅಥ್ಲೆಟ್ ಗಳಿಗೆ ಹಾಗೂ ಕ್ರೀಡಾ ಗ್ರಾಮದಿಂದ ಹೊರಗಿರುವ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಲಿಂಪಿಕ್ಸ್ ಸಂಘಟಕರು ಶನಿವಾರ ಕ್ರೀಡಾಪಟುಗಳ ಹಳ್ಳಿಯಲ್ಲಿ ಕೋವಿಡ್ -19 ರ ಮೊದಲ ಪ್ರಕರಣವನ್ನು ವರದಿ ಮಾಡಿದ್ದರು.
ಕ್ರೀಡಾಕೂಟದಲ್ಲಿ ಸಾವಿರಾರು ಆಟಗಾರರು ಸ್ಪರ್ಧಿಸುತ್ತಿದ್ದು, ಇದೀಗ ಕೋವಿಡ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇತರೆ ಆಟಗಾರರಲ್ಲಿ ಆತಂತ ಮೂಡಿಸಿದೆ.
Advertisement