ಟೋಕಿಯೋ: 2 ಬಾರಿಯ ಚಾಂಪಿಯನ್ ಭಾರತದ ಅತನು ದಾಸ್ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದ ಆರ್ಚರಿ ಕ್ರೀಡೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು, ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್, ವಿಶ್ವದ ನಂ.3 ರ‍್ಯಾಂಕ್‌ನ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ದಾಖಲಿಸಿದರು.
ಈ ಹಿಂದೆ ಅತನು ದಾಸ್, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಗೆಲುವು ದಾಖಲಿಸಿ ಬಳಿಕ ಜಿನ್ ಹಿಯೆಕ್ ವಿರುದ್ಧವೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಸಾಧನೆ ಮಾಡಿರುವ ಜಿನ್ ಜಿಯೆಕ್, ಪ್ರಸ್ತುತ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ.
ನಿನ್ನೆಯಷ್ಟೇ ದೀಪಿಕಾ ಕುಮಾರಿ, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ವಿಶ್ವದ ಅಗ್ರ ಶ್ರೇಯಾಂಕಿತೆ ದೀಪಿಕಾ ಕುಮಾರಿ ಭಾರತದ ಭರವಸೆಯಾಗಿದ್ದಾರೆ.
Advertisement