ಹಾಕಿ: ಭಾರತ-ಅರ್ಜೆಂಟೀನಾ ಪಂದ್ಯ 4-4 ಗೋಲುಗಳಿಂದ ಡ್ರಾ
ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ 3-4 ಗೋಲುಗಳಿಂದ ಸೋತ ನಂತರ, ಒಲಿಂಪಿಕ್ ಚಾಂಪಿಯನ್ಸ್ ಅರ್ಜೆಂಟೀನಾ ಎರಡನೇ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೋಮಾಂಚಕ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ 4-4 ಗೋಲುಗಳಿಂದ ಡ್ರಾ ಮಾಡಿಕೊಂಡಿದೆ.
Published: 08th April 2021 10:58 PM | Last Updated: 08th April 2021 11:00 PM | A+A A-

ನವದೆಹಲಿ: ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ 3-4 ಗೋಲುಗಳಿಂದ ಸೋತ ನಂತರ, ಒಲಿಂಪಿಕ್ ಚಾಂಪಿಯನ್ಸ್ ಅರ್ಜೆಂಟೀನಾ ಎರಡನೇ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ರೋಮಾಂಚಕ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ 4-4 ಗೋಲುಗಳಿಂದ ಡ್ರಾ ಮಾಡಿಕೊಂಡಿದೆ.
ಭಾರತ ಪರ ವರುಣ್ ಕುಮಾರ್ (7 'ಮತ್ತು 44ನೇ ನಿಮಿಷ), ರಾಜ್‌ಕುಮಾರ್ ಪಾಲ್ (13 ನೇ ನಿಮಿಷ '), ರೂಪಿಂದರ್ ಪಾಲ್ ಸಿಂಗ್ (14ನೇ ನಿಮಿಷ') ಗೋಲು ಗಳಿಸಿದರೆ, ಅರ್ಜೆಂಟೀನಾ ಪರ ಲಿಯಾಂಡ್ರೊ ಟೋಲಿನಿ (10ನೇ ನಿಮಿಷ '), ಲ್ಯೂಕಾಸ್ ಟೊಸ್ಕಾನಿ (23ನೇ ನಿಮಿಷ'), ಇಗ್ನಾಸಿಯೊ ಒರ್ಟಿಜ್ (42ನೇ ನಿಮಿಷ ' ), ಲ್ಯೂಕಾಸ್ ಮಾರ್ಟಿನೆಜ್ (57ನೇ ನಿಮಿಷ ') ಗೋಲು ಗಳಿಸಿದ್ದರು.
ಏಪ್ರಿಲ್ 11 ರಂದು ನಡೆಯಲಿರುವ ಎಫ್‌ಐಹೆಚ್ ಹಾಕಿ ಪ್ರೊ ಲೀಗ್ ಪಂದ್ಯದಲ್ಲಿ ಭಾರತ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.