ಶೂಟ್‌ಔಟ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಭಾರತ

ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.
ಹಾಕಿ ಇಂಡಿಯಾ
ಹಾಕಿ ಇಂಡಿಯಾ

ಬ್ಯೂನಸ್ ಐರಿಸ್: ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

ನಿಜಕ್ಕೂ ಕೊನೆಯ ಕ್ಷಣದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದ ಪರಿಣಾಮ ಗೆಲುವು ದಾಖಲಿಸಿತು. ಪಂದ್ಯದ ಕೊನೆಯ ಅವಧಿಯ ಅಂತಿಮ ಕ್ಷಣದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ಈ ಅವಧಿಯಲ್ಲಿ ಅರ್ಜೆಂಟೀನಾ ತಂಡ 2-1 ರಿಂದ ಮುನ್ನಡೆ ಸಾಧಿಸಿತ್ತು. 

ಹರ್ಮನ್‌ಪ್ರೀತ್ ಸಿಂಗ್ ಅವರ ಮಿಂಚಿನ ಡ್ರ್ಯಾಗ್ ಫ್ಲಿಕ್ ಸಹಾಯದಿಂದ, ಭಾರತವು ಗೋಲು ಗಳಿಕೆಯಲ್ಲಿ ಸಮಬಲ ಸಾಧಿಸಿತು. ಪರಿಣಾಮ ಪಂದ್ಯದ ಫಲಿತಾಂಶ ತಿಳಿಯಲು ಶೂಟೌಟ್ ಮೊರೆ ಹೋಗಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com