ಭಾರತದ ಮೊದಲ ಮಹಿಳಾ ಹಾಕಿ ಅಂಪೈರ್ ಅನುಪಮಾ ಕೊರೋನಾದಿಂದ ನಿಧನ

ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಕೊಡಗು ಮೂಲದ ಅನುಪಮಾ ಪುಚ್ಚಿಮಂಡ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಅನುಪಮಾ ಪುಚ್ಚಿಮಂಡ
ಅನುಪಮಾ ಪುಚ್ಚಿಮಂಡ

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಕೊಡಗು ಮೂಲದ ಅನುಪಮಾ ಪುಚ್ಚಿಮಂಡ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ಅನುಪಮಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಮೂಲದವರಾದ ಅನುಪಮಾ ರಾಜ್ಯದ ಮೊದಲ ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಹಾಗೂ 50 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದ ದೇಶದ ಮೊದಲ ಮಹಿಳಾ ಅಂಪೈರ್ ಎನಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com