ನಾನು ಅತ್ಯಂತ ನಿರಾಸೆಯಾಗಿದೆ: ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕ ವಂಚಿತ ಭಾರತದ ಮಹಿಳಾ ಗಾಲ್ಫರ್ ಅದಿತಿ ಅಶೋಕ್
ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಆಟದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಪದಕವನ್ನು ಕಳೆದುಕೊಂಡಿದ್ದಕ್ಕೆ ನಿರುತ್ಸಾಹಗೊಂಡಿರುವುದಾಗಿ ಹೇಳಿದ್ದಾರೆ.
Published: 09th August 2021 12:59 PM | Last Updated: 26th December 2022 02:51 PM | A+A A-

ಅದಿತಿ ಅಶೋಕ್
ಟೋಕಿಯೊ: ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಆಟದಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ಪದಕವನ್ನು ಕಳೆದುಕೊಂಡಿದ್ದಕ್ಕೆ ನಿರುತ್ಸಾಹಗೊಂಡಿರುವುದಾಗಿ ಹೇಳಿದ್ದಾರೆ.
ಟೋಕಿಯೊ 2020 ರಲ್ಲಿ ತಮ್ಮ ಸ್ಮರಣೀಯ ನಾಲ್ಕನೇ ಸ್ಥಾನದಲ್ಲಿ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ನೂರಕ್ಕೆ ನೂರರಷ್ಟು ಪರಿಶ್ರಮ ವಹಿಸಿದ್ದರು. ಕೊನೆಯವರೆಗೂ ತಮ್ಮ ಅತ್ಯುತ್ತಮ ಪ್ರಯತ್ನ ಪಟ್ಟರು. ಆದರೆ ಪದಕ ಸಾಧಿಸಲಾಗಲಿಲ್ಲ. ಇದೇ ನೋವಿನಲ್ಲೇ ಕಹಿ ನೆನಪುಗಳೊಂದಿಗೆ ಅವರು ಟೋಕಿಯೊ ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
Leaving Tokyo with bittersweet memories. This is probably the most disheartened I have ever been after finishing 4th in a golf tournament I tried my best till the very end but golf is like that sometimes. You don’t always get what you deserve, but you do get what you work for. pic.twitter.com/EFUrHmKO60
— Aditi Ashok (@aditigolf) August 8, 2021