ಟೋಕಿಯೊ ಪ್ಯಾರಾಲಿಂಪಿಕ್ಸ್: ಚಿನ್ನ, ಬೆಳ್ಳಿ ಪದಕ ಗೆದ್ದ ಮನೀಶ್ ನರ್ವಾಲ್, ಸಿಂಗರಾಜ್ ಗೆ ನಗದು ಬಹುಮಾನ ಘೋಷಿಸಿದ ಹರ್ಯಾಣ ಸರ್ಕಾರ
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ತಂದುಕೊಟ್ಟ ಶೂಟಿಂಗ್ ಜೋಡಿ ಮನೀಶ್ ನರ್ವಾಲ್, ಸಿಂಗರಾಜ್ ಗೆ ಹರ್ಯಾಣ ಸರ್ಕಾರ ನಗದು ಬಹುಮಾನ ಘೋಷಿಸಿದೆ.
Published: 04th September 2021 12:31 PM | Last Updated: 04th September 2021 12:31 PM | A+A A-

ಮನೀಶ್ ನರ್ವಾಲ್-ಸಿಂಗರಾಜ್ (ಸಾಯಿ ಮೀಡಿಯಾ ಚಿತ್ರ)
ಚಂಡೀಘಡ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕ ತಂದುಕೊಟ್ಟ ಶೂಟಿಂಗ್ ಜೋಡಿ ಮನೀಶ್ ನರ್ವಾಲ್, ಸಿಂಗರಾಜ್ ಗೆ ಹರ್ಯಾಣ ಸರ್ಕಾರ ನಗದು ಬಹುಮಾನ ಘೋಷಿಸಿದೆ.
ಚಿನ್ದ ಪದಕ ಗೆದ್ದ ಮನೀಶ್ ನರ್ವಾಲ್ ಗೆ 6 ಕೋಟಿ ರೂ ಮತ್ತು ಬೆಳ್ಳಿ ಪದಕ ಗೆದ್ದ ಸಿಂಗರಾಜ್ ಗೆ 4 ಕೋಟಿ ರೂ ನಗದು ಬಹುಮಾನ ನೀಡುವುದಾಗಿ ಹರ್ಯಾಣ ಸರ್ಕಾರ ಘೋಷಣೆ ಮಾಡಿದೆ.
#TokyoParalympics | Haryana government announces a reward of Rs 6 crores for gold medalist Manish Narwal and Rs 4 Crores for silver medal winner Singhraj Adhana in Shooting P4 Mixed 50m Pistol SH1
— ANI (@ANI) September 4, 2021
(Pics courtesy: Screengrab via Paralympics YouTube) pic.twitter.com/l5yobJI38C
ಇಂದು ನಡೆದ ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಭಾರತದ ಮನೀಶ್ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಟ್ಟರೆ, ಸಿಂಗರಾಜ್ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಭಾರತದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದಿದ್ದು, ಇದು ಭಾರತದ ಪರ ಗರಿಷ್ಠ ದಾಖಲೆ ಕೂಡ ಆಗಿದೆ. ಅದೇ ಪಂದ್ಯದಲ್ಲಿ ಭಾರತದ ಮತ್ತೋರ್ವ ಶೂಟರ್ ಅಧನ ಸಿಂಗರಾಜ್ ಅವರು 216.7 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆ ಮೂಲಕ ಒಂದೇ ಪೈನಲ್ ಪಂದ್ಯದಲ್ಲಿ ಉಭಯ ಆಟಗಾರರು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್: ಇತಿಹಾಸ ಬರೆದ ಭಾರತದ ಶೂಟರ್ ಗಳು, ಮನೀಶ್ ನರ್ವಾಲ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ ಪದಕ
ಈ ಪದಕಗಳ ಮೂಲಕ ಹಾಲಿ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಚಿನ್ನ 3, ಬೆಳ್ಳಿ 7 ಮತ್ತು 5 ಕಂಚಿನ ಪದಕಗಳು ಸೇರಿವೆ.