ಭಾರತದ ಚಿನ್ನದ ಹುಡುಗನ ಮತ್ತೊಂದು ಅದ್ಭುತ ಸಾಧನೆ: ಉಸೇನ್ ಬೋಲ್ಟ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ನೀರಜ್ ಚೋಪ್ರಾ!

ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರಿಗೆ 2022 ಬಹಳ ವಿಶೇಷವಾಗಿತ್ತು. ಈ ವರ್ಷ ಅವರು ಅನೇಕ ಐತಿಹಾಸಿಕ ವಿಜಯಗಳನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚು ಬರೆಯಲ್ಪಟ್ಟ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. 
ಉಸೇನ್ ಬೋಲ್ಟ್-ನೀರಜ್ ಚೋಪ್ರಾ
ಉಸೇನ್ ಬೋಲ್ಟ್-ನೀರಜ್ ಚೋಪ್ರಾ
Updated on

ಭಾರತದ ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರಿಗೆ 2022 ಬಹಳ ವಿಶೇಷವಾಗಿತ್ತು. ಈ ವರ್ಷ ಅವರು ಅನೇಕ ಐತಿಹಾಸಿಕ ವಿಜಯಗಳನ್ನು ಸಾಧಿಸಿದ್ದಾರೆ. ಈ ಕಾರಣದಿಂದಾಗಿ ಅವರು ಹೆಚ್ಚು ಬರೆಯಲ್ಪಟ್ಟ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. 

ಪ್ರತಿ ವರ್ಷ ವಿಶ್ವ ಅಥ್ಲೆಟಿಕ್ಸ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಈ ವರ್ಷ ಮೊದಲ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಬಗ್ಗೆ 812 ಲೇಖನಗಳನ್ನು ಬರೆಯಲಾಗಿದೆ. ತದನಂತರ ಎರಡನೇ ಸ್ಥಾನದಲ್ಲಿ ಜಮೈಕಾದ ಅಥ್ಲೀಟ್ ಎಲೈನ್ ಥಾಂಪ್ಸನ್ ಹೆರ್ರಾ ಇದ್ದಾರೆ. ಹೆರ್ರಾ ಕುರಿತಾಗಿ 751 ಲೇಖನಗಳನ್ನು ಬರೆಯಲಾಗಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ಶೆಲ್ಲಿ ಆನ್ ಫ್ರೇಸರ್ ಕುರಿತು 698 ಲೇಖನಗಳನ್ನು ಬರೆಯಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಈ ವರ್ಷ ಐದನೇ ಸ್ಥಾನದಲ್ಲಿದ್ದಾರೆ. ಅವರ ಮೇಲೆ 574 ರನ್ ಲೇಖನಗಳನ್ನು ಬರೆಯಲಾಗಿದೆ. ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಸೆಬಾಸ್ಟಿಯನ್ ನೀರಜ್ ಚೋಪ್ರಾ ಅವರನ್ನು ಮೊದಲ ಸ್ಥಾನದಲ್ಲಿ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಈ ಪಟ್ಟಿಯ ಬಗ್ಗೆ ಸೆಬಾಸ್ಟಿಯನ್ ಕೋ, 'ಇದು ನನಗೆ ವಿಭಿನ್ನವಾಗಿದೆ. ಸಾಕಷ್ಟು ಆಸಕ್ತಿದಾಯಕವಾಗಿದೆ. ಮೊದಲ ಬಾರಿಗೆ ಉಸೇನ್ ಬೋಲ್ಟ್ ಹೆಚ್ಚು ಬರೆಯಲ್ಪಟ್ಟ ಕ್ರೀಡಾಪಟುವಾಗಿ ಉಳಿದಿಲ್ಲ. ನಾನು ಈ ಪಟ್ಟಿಯನ್ನು ಸಾಕಷ್ಟು ಅನನ್ಯವಾಗಿ ಕಂಡುಕೊಂಡಿದ್ದೇನೆ ಎಂದಿದ್ದಾರೆ.

ನೀರಜ್ ಚೋಪ್ರಾಗೆ ಈ ವರ್ಷ ತುಂಬಾ ವಿಶೇಷವಾಗಿದೆ. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಆಗಿದ್ದಾರೆ. ಅದೇ ಸಮಯದಲ್ಲಿ, ಅವರು ಈ ವರ್ಷ ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com