ಹಾಕಿ ನೇಷನ್ಸ್ ಕಪ್: ಚಿಲಿ ವಿರುದ್ಧ ಭಾರತಕ್ಕೆ 3-1 ಜಯ, ಟೀಂ ಇಂಡಿಯಾ ಶುಭಾರಂಭ
ಸ್ಪೇನ್‌ನ ವೆಲೆನ್ಸಿಯಾದಲ್ಲಿ ಭಾನುವಾರ ನಡೆದ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ 2022 ರಲ್ಲಿ ಚಿಲಿಯನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
Published: 12th December 2022 01:19 AM | Last Updated: 12th December 2022 01:19 AM | A+A A-

ಹಾಕಿ ನೇಷನ್ಸ್ ಕಪ್
ವೆಲೆನ್ಸಿಯಾ: ಸ್ಪೇನ್‌ನ ವೆಲೆನ್ಸಿಯಾದಲ್ಲಿ ಭಾನುವಾರ ನಡೆದ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ 2022 ರಲ್ಲಿ ಚಿಲಿಯನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
ಭಾರತದ ಫಾರ್ವರ್ಡ್ ಆಟಗಾರ್ತಿ ಸಂಗೀತಾ ಕುಮಾರಿ (2 ನೇ ನಿಮಿಷ) ಮತ್ತು ಮಿಡ್‌ಫೀಲ್ಡರ್ ಸೋನಿಕಾ (10 ನಿಮಿಷ) ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು ಮತ್ತು ನವನೀತ್ ಕೌರ್ (31 ನಿಮಿಷ) 3-0 ಅಂತರದಲ್ಲಿ ಮುನ್ನಡೆ ಸಾಧಿಸಿದರು. 43ನೇ ನಿಮಿಷದಲ್ಲಿ ಫರ್ನಾಂಡ ವಿಲಗ್ರಾನ್ ಚಿಲಿ ಪರ ಗೋಲು ಸಾಧಿಸಿದರು. ಭಾರತೀಯ ಮಹಿಳಾ ಹಾಕಿ ತಂಡವು ವೇಗದ ಆರಂಭ ಪಡೆದುಕೊಂಡಿತು. ದಾಳಿ ಮತ್ತು ರಕ್ಷಣೆ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು.
ಇದನ್ನೂ ಓದಿ: 2ನೇ ಟಿ20: ಸೂಪರ್ ಓವರ್ ನಲ್ಲಿ ಭಾರತದ ಮಹಿಳೆಯರಿಗೆ ಸೂಪರ್ ವಿನ್, ಆಸ್ಟ್ರೇಲಿಯಾ ವಿರುದ್ಧ 4 ರನ್ ವಿರೋಚಿತ ಜಯ
ಮಹಿಳಾ ಹಾಕಿ ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಭಾರತ ತಂಡ, 10ನೇ ನಿಮಿಷದಲ್ಲಿ ಮತ್ತೊಂದು ತಂಡದ ಗೋಲ್‌ನೊಂದಿಗೆ ವಿಶ್ವದ ನಂ.14 ಚಿಲಿ ವಿರುದ್ಧ ಮುನ್ನಡೆಯನ್ನು ಹೆಚ್ಚಿಸಿತು. ನವನೀತ್ ಕೌರ್ ಚಿಲಿಯನ್ ರಕ್ಷಣೆಯನ್ನು ಭೇದಿಸಿ ಸೋನಿಕಾಗೆ ಚಿಪ್ ಪಾಸ್ ಅನ್ನು ಫಾರ್ ಪೋಸ್ಟ್‌ನಲ್ಲಿ ಕಳುಹಿಸಿದರು, ಅವರು ತೆರೆದ ಗೋಲಿನ ಮುಂದೆ ಯಾವುದೇ ತಪ್ಪು ಮಾಡದೆ ಅದನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಗೆ ಮುನ್ನಡೆ ತಂದರು. ಭಾರತ ವಿರಾಮದ ವೇಳೆಗೆ 2-0 ಮುನ್ನಡೆ ಸಾಧಿಸಿತು.
ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಮತ್ತು ಚಿಲಿ ತಲಾ ಗೋಲು ಗಳಿಸಿದವು. 31ನೇ ನಿಮಿಷದಲ್ಲಿ ನವನೀತ್ ಕೌರ್ ಟಾಪ್ ಕಾರ್ನರ್‌ನಲ್ಲಿ ಗೋಲು ಗಳಿಸಿ ಅಂತರವನ್ನು 3-0ಗೆ ಏರಿಸಿದರು. 43ನೇ ನಿಮಿಷದಲ್ಲಿ ಭಾರತದ ಡಿಫೆಂಡರ್ ಉದಿತಾ ಅವರು ಫೆರ್ನಾಂಡ ವಿಲ್ಲಾಗ್ರಾನ್ ಅವರ ಡ್ರ್ಯಾಗ್-ಫ್ಲಿಕ್‌ನಲ್ಲಿ ಭಾರತದ ಗೋಲ್‌ಕೀಪರ್ ಮತ್ತು ನಾಯಕಿ ಸವಿತಾ ಪುನಿಯಾ ಅವರನ್ನು ವಂಚಿಸಿ ಗೋಲು ಗಳಿಸಿದರು.
ಇದನ್ನೂ ಓದಿ: ಫಿಫಾ ವಿಶ್ವಕಪ್: ರೊನಾಲ್ಡೊ ವಿಶ್ವಕಪ್ ಕನಸು ಭಗ್ನ; ಮೊರಾಕೊ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಪೋರ್ಚುಗಲ್
ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ ಗೋಲ್‌ನಿಂದ ಉತ್ತೇಜಿತರಾದ ಚಿಲಿ, ನಾಲ್ಕನೇ ಕ್ವಾರ್ಟರ್‌ನಲ್ಲಿ ತನ್ನ ಪ್ರಯತ್ನವನ್ನು ಹೆಚ್ಚಿಸಿತು, ಆದರೆ ಭಾರತ ಪೆನಾಲ್ಟಿ ಕಾರ್ನರ್‌ಗಳನ್ನು ವ್ಯರ್ಥ ಮಾಡುವುದನ್ನು ಮುಂದುವರೆಸಿದವು. ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಪರಿಣಾಮ ಫುಲ್ ಟೈಮ್ ವೇಳೆಗೆ ಭಾರತವು 3-1 ರಿಂದ ಪಂದ್ಯವನ್ನು ಗೆದ್ದುಕೊಂಡಿತು.