ಫುಟ್ಬಾಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ: ಭಾರತೀಯ ಫುಟ್ಬಾಲ್ ಕ್ಲಬ್‌ಗಳ ಸಹಕಾರ ಕೋರಿದ ಸಿಬಿಐ

ದೇಶದಲ್ಲಿ ನಡೆದ ಫುಟ್‌ಬಾಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ದಳ) ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ನಡೆದ ಫುಟ್‌ಬಾಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ದಳ) ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸುಮಾರು 15 ದಿನಗಳ ಹಿಂದೆಯೇ ಆರಂಭವಾಗಿದ್ದು, ವಿಚಾರಣೆಯ ಸಮಯದಲ್ಲಿ ಸಿಬಿಐ, ಹಲವಾರು ಭಾರತೀಯ ಫುಟ್ಬಾಲ್ ಕ್ಲಬ್‌ಗಳ ದಾಖಲೆಗಳನ್ನು ಒದಗಿಸುವಂತೆ  ದೆಹಲಿ ಮೂಲದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ ಅನ್ನು ಕೇಳಿದೆ ಮತ್ತು ಸಂಗ್ರಹಿಸಿದೆ ಎಂದು ಅವರು ಹೇಳಿದರು.

ಪಂದ್ಯಗಳ ಫಲಿತಾಂಶಗಳನ್ನು ಬದಲಿಸುವಲ್ಲಿ ಸಿಂಗಾಪುರ ಮೂಲದ ಆಪಾದಿತ ಮ್ಯಾಚ್ ಫಿಕ್ಸರ್ ಪಾತ್ರವಿದೆ ಎಂದು ಅವರು ಹೇಳಿದರು.

ಆರಂಭಿಕ ಹಂತದಲ್ಲಿರುವ ತನಿಖೆಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ, ಪ್ರಾಥಮಿಕ ತನಿಖೆಯಲ್ಲಿ ಹೆಸರಿಸಲಾದ ಶಂಕಿತರ ಬಗ್ಗೆ ಮತ್ತು ಆರೋಪಗಳ ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದರು. ತನಿಖಾ ಸಂಸ್ಥೆಯು ಕೆಲವು ದಾಖಲೆಗಳನ್ನು ಈಗಾಗಲೇ ಸ್ವೀಕರಿಸಿದ್ದು, ಇನ್ನು ಕೆಲವು ದಾಖಲೆಗಳಿಗಾಗಿ ಕಾಯುತ್ತಿದೆ ಎಂದು ಅವರು ಹೇಳಿದರು.

ಫುಟ್ಬಾಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿಚಾರದ ಬಗ್ಗೆ ತನಿಖೆಗೆ ನೆರವಾಗುವಂತೆ ಹಲವಾರು ಭಾರತೀಯ ಫುಟ್ಬಾಲ್ ಕ್ಲಬ್‌ಗಳ ಸಹಕಾರವನ್ನು ಸಂಸ್ಥೆ ಕೋರಿದೆ. ಪ್ರಾಥಮಿಕ ತನಿಖೆಯಲ್ಲಿ ಸಿಬಿಐ ಹುಡುಕಾಟ, ಬಂಧನ ಅಥವಾ ಸಮನ್ಸ್ ಮೂಲಕ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ  ಎಂದು ಅವರು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಯು ಪ್ರಾಥಮಿಕ ವಿಚಾರಣೆಯ ವೇಳೆ ಮಧ್ಯಸ್ಥಗಾರರ ಸಹಕಾರವನ್ನು ಅವಲಂಬಿಸಿರುತ್ತದೆ ಮತ್ತು ಅಪರಾಧವನ್ನು ಸೂಚಿಸುವ ಪ್ರಾಥಮಿಕ ವಿಚಾರಗಳನ್ನು ಹೊಂದಿದ್ದರೆ ಮಾತ್ರ ಎಫ್ಐಆರ್ ದಾಖಲಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com