
ಸಂಗ್ರಹ ಚಿತ್ರ
ನವದೆಹಲಿ: ಎಎಫ್‌ಸಿ ಅಂಡರ್-17 ಫುಟ್ಬಾಲ್ ಏಷ್ಯನ್ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಕುವೈತ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
ಸೌದಿ ಅರೇಬಿಯಾದ ಅಲ್ ಖೊಬರ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, 3–0 ಗೋಲುಗಳಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು.
ಇದನ್ನೂ ಓದಿ: 2026 ರ ಕಾಮನ್ ವೆಲ್ತ್ ಗೇಮ್ಸ್ ಪಟ್ಟಿಗೆ ಶೂಟಿಂಗ್ ಇನ್; ಕುಸ್ತಿ, ಬಿಲ್ಲುಗಾರಿಕೆ ಔಟ್
ತಾಂಗ್‌ಲಾಲ್‌ಸುನ್ ಗಾಂಗ್ಟೆ (16 ಮತ್ತು 70ನೇ ನಿ.) ಅವರು ಎರಡು ಗೋಲುಗಳನ್ನು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದು ಗೋಲನ್ನು ಕೊರೊ ಸಿಂಗ್ ತಿಂಗುಜಮ್ (66ನೇ ನಿ.) ಗಳಿಸಿದರು. ಈ ಗೆಲುವಿನ ಮೂಲಕ ಬಿಬಿಯಾನೊ ಫೆರ್ನಾಂಡೆಸ್ ಬಳಗ ಮೂರು ಪಾಯಿಂಟ್ ಕಲೆಹಾಕಿತು. ಭಾರತ ತಂಡದ ಗೋಲ್‌ಕೀಪರ್ ಸಾಹಿಲ್ ಅವರು ಎದುರಾಳಿ ತಂಡದ ಗೋಲು ಗಳಿಸುವ ಹಲವು ಪ್ರಯತ್ನಗಳನ್ನು ತಡೆದು ಮಿಂಚಿದರು.
ಮೊದಲ ಪಂದ್ಯದಲ್ಲಿ ಭಾರತ 5–0 ರಲ್ಲಿ ಮಾಲ್ಡೀವ್ಸ್ ಎದುರು ಗೆದ್ದಿತ್ತು. ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಯನ್ಮಾರ್ ಎದುರು ಪೈಪೋಟಿ ನಡೆಸಲಿದೆ.