ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಸೋತರು ರೆಪಿಚೇಜ್ ಸುತ್ತಿಗೆ ವಿನೇಶ್ ಪೋಗಟ್ ಪ್ರವೇಶ; ಕಂಚು ಗೆಲ್ಲಲು ಅವಕಾಶ!

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2022ರಲ್ಲಿ ಭಾರತೀಯ ಮಹಿಳಾ ಕುಸ್ತಿಪಟುಗಳ ನಿರಾಶಾದಾಯಕ ಪ್ರದರ್ಶನ ಮುಂದುವರೆದಿದೆ.
ವಿನೇಶ್ ಪೋಗಟ್
ವಿನೇಶ್ ಪೋಗಟ್

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2022ರಲ್ಲಿ ಭಾರತೀಯ ಮಹಿಳಾ ಕುಸ್ತಿಪಟುಗಳ ನಿರಾಶಾದಾಯಕ ಪ್ರದರ್ಶನ ಮುಂದುವರೆದಿದೆ. ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ವಿನೇಶ್ ಫೋಗಟ್ 53 ಕೆಜಿ ವಿಭಾಗದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. 

2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿನೇಶ್, ಮಂಗೋಲಿಯನ್ ಕುಸ್ತಿಪಟು ಖುಲಾನ್ ಬತ್ಖುಯಾಗ್ ವಿರುದ್ಧ 7-0 ಅಂತರದಿಂದ ಸೋಲು ಕಂಡಿದ್ದರು.

ಇನ್ನು ಖುಲಾನ್ ಬತ್ಖುಯಾಗ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಸೆಪ್ಟೆಂಬರ್ 14ರ ಬುಧವಾರದ ರಿಪಿಚೇಜ್ ಸುತ್ತಿನಲ್ಲಿ ವಿನೇಶ್ ಪದಕ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ವಿನೇಶ್ ಬುಧವಾರ ನಡೆಯಲಿರುವ ರಿಪೆಚೇಜ್ ಸುತ್ತಿನಲ್ಲಿ ಕಜಕಿಸ್ತಾನದ ಜುಲ್ದಿಜ್ ಅಶಿಮೊವಾ ಅವರನ್ನು ಎದುರಿಸಲಿದ್ದಾರೆ. ರೆಪೆಚೇಜ್ ಸುತ್ತಿನ ಪಂದ್ಯದಲ್ಲಿ ವಿನೇಶ್ ಗೆದ್ದರೆ ಕಂಚಿನ ಪದಕ ತನ್ನ ಪಾಲಿಗೆ ಬರಲಿದೆ.

#ರಿಪಿಚೇಜ್ ರೌಂಡ್ ಎಂದರೇನು?
ರೆಪಿಚೇಜ್ ಸುತ್ತಿನ ಮೂಲಕ ಪ್ರಾಥಮಿಕ ಸುತ್ತಿನಲ್ಲಿ ಸೋತ ಕುಸ್ತಿಪಟುಗಳು ಕಂಚಿನ ಪದಕ ಗೆಲ್ಲುವ ಮತ್ತೊಂದು ಅವಕಾಶವನ್ನು ಪಡೆಯುತ್ತಾರೆ. ಆದರೆ, ಕುಸ್ತಿಪಟುವಿಗೆ ತಾನು ಸೋತಿರುವ ಕುಸ್ತಿಪಟು ಫೈನಲ್‌ಗೆ ತಲುಪಿದಾಗ ಮಾತ್ರ ಇದು ಸಾಧ್ಯ.

ಸರಳ ಭಾಷೆಯಲ್ಲಿ ಹೇಳುವುದಾದರೆ, ಫೈನಲ್ ತಲುಪಿದ ಆಟಗಾರರು, ನಾಕೌಟ್ ಸುತ್ತಿನಲ್ಲಿ ಸೋತವರು, ಆ ಆಟಗಾರರು ರೆಪಿಚೇಜ್ ಸುತ್ತಿನ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ. ಇದೀಗ ವಿನೇಶ್ ಅವರನ್ನು ಸೋಲಿಸಿದ ಕುಸ್ತಿಪಟು ಫೈನಲ್ ತಲುಪಿರುವುದರಿಂದ ಭಾರತದ ಕುಸ್ತಿಪಟು ಕಂಚು ಗೆಲ್ಲುವ ಅವಕಾಶ ಪಡೆಯಲಿದ್ದಾರೆ.

2022ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇನ್ನೂ ಒಂದು ಪದಕ ಗೆದ್ದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com