ಏಷ್ಯನ್ ಗೇಮ್ಸ್
ಏಷ್ಯನ್ ಗೇಮ್ಸ್

ಏಷ್ಯನ್ ಗೇಮ್ಸ್ 2023: ವಿಂಡ್ ಸರ್ಫರ್ ನಲ್ಲಿ ಈಬಾದ್ ಅಲಿಗೆ ಕಂಚು, ಸೇಲಿಂಗ್ ನಲ್ಲಿ ನೇಹಾ ಠಾಕೂರ್ ಗೆ ಬೆಳ್ಳಿ

ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಇಂದು ಪುರುಷರ ವಿಂಡ್ ಸರ್ಫರ್ ವಿಭಾಗದಲ್ಲಿ ಭಾರತದ ಈಬಾದ್ ಅಲಿಗೆ ಕಂಚಿನ ಪದಕ ಗೆದ್ದರೆ, ಮಹಿಳೆಯರ ಡಿಂಗಿ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಇಂದು ಪುರುಷರ ವಿಂಡ್ ಸರ್ಫರ್ ವಿಭಾಗದಲ್ಲಿ ಭಾರತದ ಈಬಾದ್ ಅಲಿಗೆ ಕಂಚಿನ ಪದಕ ಗೆದ್ದರೆ, ಮಹಿಳೆಯರ ಡಿಂಗಿ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸೇಲಿಂಗ್‌ ವಿಭಾಗದಲ್ಲಿ ಮಹಿಳೆಯರ ಡಿಂಘಿ ಐಎಲ್‌ಸಿಎ-4 ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಜಯಿಸಿದ್ದಾರೆ. ಭೋಪಾಲ್‌ನ ನ್ಯಾಷನಲ್ ಸೇಲಿಂಗ್ ಸ್ಕೂಲ್‌ನ ಉದಯೋನ್ಮುಖ ಸೇಲಿಂಗ್ ಪಟು ನೇಹಾ ಒಟ್ಟು 32 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದರು. ಅವರ ನೆಟ್ ಸ್ಕೋರ್ 27 ಆಗಿದ್ದರಿಂದ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. 16 ನೆಟ್ ಸ್ಕೋರ್ ಇದ್ದ ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್‌ ಚಿನ್ನ ಗೆದ್ದರು. 28 ನೆಟ್ ಸ್ಕೋರ್ ಇದ್ದ ಸಿಂಗಪುರದ ಕೀರಾ ಮೇರಿ ಕಾರ್ಲೈಲ್ ನೆಟ್ಸ್ಕೋರ್ ಕಂಚಿನ ಪದಕ ಗೆದ್ದರು.

ಸೇಲಿಂಗ್‌ನಲ್ಲಿ ನೆಟ್ ಸ್ಕೋರ್ ಅನ್ನು ನಿರ್ಧರಿಸಲು ಎಲ್ಲಾ ರೇಸ್‌ಗಳಿಂದ ಸ್ಪರ್ಧಿಯ ಕೆಟ್ಟ ಸ್ಕೋರ್ ಅನ್ನು ಒಟ್ಟು ಅಂಕಗಳಿಂದ ಕಳೆಯಲಾಗುತ್ತದೆ. ಕಡಿಮೆ ನೆಟ್ ಸ್ಕೋರ್ ಹೊಂದಿರುವವರನ್ನು ವಿಜೇತ ಎಂದು ನಿರ್ಣಯಿಸಲಾಗುತ್ತದೆ. ಮಹಿಳೆಯರ ಡಿಂಘಿ ILCA-4 ವಿಭಾಗವು 11 ರೇಸ್‌ಗಳನ್ನು ಒಳಗೊಂಡಿದೆ. ನೇಹಾ ಒಟ್ಟು 32 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದರು. ಐದನೇ ರೇಸ್‌ನಲ್ಲಿ ಕೇವಲ 5 ಅಂಕ ಗಳಿಸುವ ಮೂಲಕ ಕೆಟ್ಟ ಪ್ರದರ್ಶನ ನೀಡಿದ ನೇಹಾ, 27 ನೆಟ್ ಸ್ಕೋರ್‌ನೊಂದಿಗೆ ಆಟ ಮುಗಿಸಿದರು.

ವಿಂಡ್ ಸರ್ಫರ್ ನಲ್ಲಿ ಈಬಾದ್ ಅಲಿಗೆ ಕಂಚು
ಇತ್ತ ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ ಭಾರತದ ಈಬಾದ್ ಅಲಿ ಕಂಚಿನ ಪದಕವನ್ನು ಪಡೆಯುವ ಮೂಲಕ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಂಟ್ಟರು. ಅಲಿ 57 ಅಂಕಗಳೊಂದಿಗೆ (ನೆಟ್ ಪಾಯಿಂಟ್‌ಗಳು: 50) ಕಂಚಿನ ಪದಕವನ್ನು ಪಡೆದಿದ್ದು, ದಕ್ಷಿಣ ಕೊರಿಯಾದ ವೊನ್ವೂ ಚೋ ಚಿನ್ನ [14 ಅಂಕಗಳು] ಗೆದ್ದರು, ಥಾಯ್ಲೆಂಡ್‌ನ ನಟ್ಟಾಫೊಂಗ್ ಫೋನೊಫ್ಫರಟ್ ಬೆಳ್ಳಿ [29 ಅಂಕಗಳು] ಪಡೆದರು. ಆರನೇ ಮತ್ತು 14ನೇ ರೇಸ್‌ಗಳಲ್ಲಿ ಅಲಿ ಎರಡನೇ ಸ್ಥಾನ ಪಡೆದರು, ಇದು ಹ್ಯಾಂಗ್‌ಝೌ ಆಟಗಳಲ್ಲಿ ಅವರ ಅತ್ಯುತ್ತಮ ವಿಭಾಗದಲ್ಲಿಯೂ ಆಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com