ಸರ್ಕಾರದ ಸಹಭಾಗಿತ್ವದೊಂದಿಗೆ ಜ.18 ರಿಂದ 26ರ ವರೆಗೆ ಬೆಂಗಳೂರಿನಲ್ಲಿ ಚೆಸ್ ಪಂದ್ಯವಳಿ ಆಯೋಜನೆ

ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ (ಬಿಯುಡಿಸಿಎ) ತನ್ನ ಮಹತ್ವಾಕಾಂಕ್ಷೆಯ ಯೋಜನೆ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿ 2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದೆ.
ಬೆಂಗಳೂರಿನಲ್ಲಿ ಚೆಸ್ ಪಂದ್ಯವಳಿ ಆಯೋಜನೆ
ಬೆಂಗಳೂರಿನಲ್ಲಿ ಚೆಸ್ ಪಂದ್ಯವಳಿ ಆಯೋಜನೆ

ಬೆಂಗಳೂರು: ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ (ಬಿಯುಡಿಸಿಎ) ತನ್ನ ಮಹತ್ವಾಕಾಂಕ್ಷೆಯ ಯೋಜನೆ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿ 2024ರ ಜನವರಿ 18 ರಿಂದ 26ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಸರ್ಕಾರದ ಸಹಭಾಗಿತ್ವದೊಂದಿಗೆ ಆಯೋಜನೆ ಮಾಡಲಾಗಿರುವ ಈ ಪಂದ್ಯಾವಳಿಯನ್ನು ಈ ಕಾರ್ಯಕ್ರಮವನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ವಿಶ್ವನಾಥ್ ಆನಂದ ಕಾರ್ಯಕ್ರಮ ಪ್ರತಿನಿಧಿಸಲಿದ್ದಾರೆ. 40ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳು ಸೇರಿದಂತೆ ಭಾರತ ಮತ್ತು 20 ಇತರ ದೇಶಗಳ 2 ಸಾವಿರಕ್ಕೂ ಹೆಚ್ಚು ಆಟಗಾರರ ಭಾಗವಹಿಸುವಿಕೆಯ ನಿರೀಕ್ಷೆ ಇದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆಓಎ ಮತ್ತು ಎಫ್ಐಬಿಎ ಏಷ್ಯಾ ಫೆಸಿಫಿಕ್ ಅಧ್ಯಕ್ಷ ಗೋವಿಂದರಾಜ್, ರಾಜ್ಯ ಸರ್ಕಾರ ಕ್ರೀಡಾ ಇಲಾಖೆ‌, ಕರ್ನಾಟಕ ಒಲಂಪಿಕ್ ಅಸೊಶಿಯೇಶನ್ ಹಾಗೂ ಚೆಸ್ ಅಸೊಶಿಯೇಶನ್ ಸಹಯೋಗದಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಪಂದ್ಯಾವಳಿಯು ಮೂರು ವಿಭಾಗಗಳಲ್ಲಿ ನಡೆಯುತ್ತದೆ. A, B ಮತ್ತು C 50 ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 2,250 ಭಾರತ ಮತ್ತು 20 ಇತರ ದೇಶಗಳ ಆಯ್ದ ಆಟಗಾರರನ್ನು ಆಯೋಜಿಸುತ್ತಿದೆ. BUDCA ಅಧ್ಯಕ್ಷೆ ಸೌಮ್ಯಾ ಅವರು ವಿಜೇತರಿಗೆ 50 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿದರು. ಹೊಸ ಪೀಳಿಗೆಯ ಚೆಸ್ ಉತ್ಸಾಹಿಗಳನ್ನು ಬೆಳೆಸುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಸುಮಾರು 100 ಶಾಲೆಗಳಲ್ಲಿ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸುವ ಸಂಘದ ಯೋಜನೆಗಳನ್ನು ಅವರು ತಿಳಿಸಿದರು. ಅಸೋಸಿಯೇಷನ್ ಜನವರಿ 22 ರಂದು ಎಲ್ಲಾ ವಯಸ್ಸಿನ ಆಟಗಾರರಿಗಾಗಿ ಬ್ಲಿಟ್ಜ್ ಪಂದ್ಯಾವಳಿಯನ್ನು ನಿಗದಿಪಡಿಸಿದೆ. 

ಚೆಸ್ ಕ್ರೀಡೆ ಅನ್ನೋದು ಇನ್ನೂ ಶಿಖರಕ್ಕೆ ಹೋಗಿಲ್ಲ. ಬೇರೆ ದೇಶಗಳಲ್ಲಿ ಶಿಖರಕ್ಕೆ ಹೋಗಿದೆ. ಕ್ರಿಕೆಟ್​ಗೆ ಕೊಡುವ ಮಹತ್ವ 10% ಕೊಡಿ. ಮಹಿಳೆಯರ ಶ್ರಮದಿಂದಲೆ ಅತ್ಯಂತ ಅಚ್ಚುಕಟ್ಟಾಗಿ ನಮ್ಮ ರಾಜ್ಯದಲ್ಲಿ ಚೆಸ್ ಅಸೊಶಿಯೇಶನ್ ಶ್ರಮ ಪಟ್ಟಿದೆ ಎಂದರು. ಇನ್ನೂ ಇದೇ ವೇಳೆ ಚೆಸ್ ಜೆಸ್ಸಿ‌ ಬಿಡುಗಡೆ ಮಾಡಲಾಗಿದೆ. ಈ ವೇಳೆ ಸಿ.ಎಂ ರಾಜಕೀಯ ಕಾರ್ಯದರ್ಶಿ, ಕೆಒಎ & ಎಫ್‌ಐ‌ಬಿಎ ಏಷ್ಯಾ ಪೆಸಿಫಿಕ್ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಕೆ‌ಎಸ್‌ಸಿ‌ಎ ಅಧ್ಯಕ್ಷ ಡಿಪಿ ಅನಂತ, ಬಿಯುಡಿಸಿಎ ಅಧ್ಯಕ್ಷೆ ಸೌಮ್ಯ. ಎಂ ಯು ಹಾಗೂ ಕರ್ನಾಟಕ ಮೊದಲ ಗ್ರ್ಯಾಂಡ್ ಮಾಸ್ಟರ್ ತೇಜಕುಮಾರ್ ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com