ಪ್ರೋ ಕಬಡ್ಡಿ ಲೀಗ್ ಸೀಸನ್ 10 ಫೈನಲ್: ಹರ್ಯಾಣ ಸ್ಟೀಲರ್ಸ್ ಮಣಿಸಿ ಚಾಂಪಿಯನ್ ಆದ ಪುಣೇರಿ ಪಲ್ಟನ್!

ಪ್ರೊ ಕಬಡ್ಡಿ ಲೀಗ್‌ 2024ರ ನೂತನ ಚಾಂಪಿಯನ್‌ ಆಗಿ ಪುಣೆರಿ ಪಲ್ಟನ್‌ ತಂಡ ಹೊರಹೊಮ್ಮಿದ್ದು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಚಾಂಪಿಯನ್ ಪುಣೇರಿ ಪಲ್ಟನ್
ಚಾಂಪಿಯನ್ ಪುಣೇರಿ ಪಲ್ಟನ್

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್‌ 2024ರ ನೂತನ ಚಾಂಪಿಯನ್‌ ಆಗಿ ಪುಣೆರಿ ಪಲ್ಟನ್‌ ತಂಡ ಹೊರಹೊಮ್ಮಿದ್ದು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಹರಿಯಾಣ ಸ್ಟೀಲರ್ಸ್‌ ವಿರುದ್ಧದ ರೋಚಕ ಫೈನಲ್‌ ಪಂದ್ಯದಲ್ಲಿ ಗೆದ್ದ ತಂಡವು ಪಿಕೆಎಲ್‌ ಇತಿಹಾಸದಲ್ಲೇ ಮೊಟ್ಟಮೊದಲ ಟ್ರೋಫಿ ಎತ್ತಿಹಿಡಿದಿದೆ. ಮಾರ್ಚ್ 1ರ ಶುಕ್ರವಾರ ರಾತ್ರಿ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಸ್ಲಾಮ್‌ ಇನಾಮ್ದಾರ್‌ ನೇತೃತ್ವದ ಪುಣೇರಿ ಪಲ್ಟನ್ ತಂಡ ಗೆದ್ದು ಚಾಂಪಿಯನ್‌ ಆಗಿದೆ.

ಚಾಂಪಿಯನ್ ಪುಣೇರಿ ಪಲ್ಟನ್
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್: ಇರಾನ್ ಮಣಿಸಿ 8ನೇ ಬಾರಿಗೆ ಏಷ್ಯನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ!

ಆರಂಭದಿಂದಲೂ ಲೀಡ್‌ ಕಾಯ್ದುಕೊಂಡಿಂದ್ದ ಪುಣೇರಿ ಪಲ್ಟನ್ ಒಂದು ಹಂತದಲ್ಲಿ ಭಾರಿ ಮುನ್ನಡೆ ಸಾಧಿಸಿತು. ಆದರೆ ತಿರುಗೇಟು ನೀಡಿದ ಹರ್ಯಾಣ ಸಮಬಲ ಸಾಧಿಸಿ ಪ್ರಬಲ ಪೈಪೋಟಿ ನೀಡಿತು. ಅಂತಿಮ ಹಂತದಲ್ಲಿ ಪುಣೆ ಲೀಡ್‌ ಕಾಯ್ದುಕೊಂಡಿದ್ದು ನೆರವಾಯಿತು. ಅಲ್ಲದೆ ಒಂದು ಬಾರಿ ಹರಿಯಾಣವನ್ನು ಆಲೌಟ್‌ ಮಾಡುವಲ್ಲಿ ಪುಣೆ ಯಶಸ್ವಿಯಾಗಿದ್ದು, ಅದಕ್ಕೆ ಹೆಚ್ಚುವರಿ ಅಂಕಗಳನ್ನು ತಂದಿತ್ತಿತ್ತು. ಅಂತಿಮವಾಗಿ 28-25 ಅಂಕಗಳ ಅಂತರದಿಂದ ತಂಡ ಫೈನಲ್ ಪಂದ್ಯ ಗೆದ್ದು ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

ಪಂಕಜ್‌ ಮೋಹಿತೆ ಒಟ್ಟು 9 ರೈಡ್‌ ಪಾಯಿಂಟ್‌ಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೋಹಿತ್‌ ಗೋಯತ್‌ ಕೂಡಾ 5 ಪಾಯಿಂಟ್‌ ಕಲೆ ಹಾಕಿದರು. ಟೂರ್ನಿಯಲ್ಲಿ ಅತಿ ಹೆಚ್ಚು ಟ್ಯಾಕಲ್‌ ಪಾಯಿಂಟ್‌ ಕಲೆ ಹಾಕಿದ ಮಹಮದ್ರೇಜಾ ಶಾಡ್ಲೋಯಿ 2 ಟ್ಯಾಕಲ್‌ ಪಾಯಿಂಟ್‌ ಗಳಿಸಿದರು. ನಾಯಕ ಅಸ್ಲಾಮ್‌ ಹಾಗೂ ಗೌರವ್‌ ತಲಾ 4 ಅಂಕ ತಂಡಕ್ಕೆ ತಂದರು. ಹರಿಯಾಣ ಪರ ಶಿವಂ ಪಟಾರೆ 6 ರೈಡ್‌ ಅಂಕ ಪಡೆದರೆ, ಸಿದ್ದಾರ್ಥ್‌ ದೇಸಾಯಿ 4 ಪಾಯಿಂಟ್‌ ಸಂಗ್ರಹಿಸಿದರು.

ಅತ್ಯುತ್ತಮ ರೈಡರ್‌ ಪ್ರಶಸ್ತಿ ಗೆದ್ದ ಅಶು ಮಲಿಕ್

ದಬಾಂಗ್ ದೆಹಲಿ ತಂಡದ ಅಶು ಮಲಿಕ್‌ ಟೂರ್ನಿಯ ಅತ್ಯುತ್ತಮ ರೈಡರ್‌ ಎನಿಸಿಕೊಂಡರು. ನವೀನ್‌ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಅಶು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಂತೆಯೇ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಪುಣೇರಿ ಪಲ್ಟನ್ ನ ಮೊಹಮ್ಮದ್ರೇಜಾ ಚಿಯಾನೆಹ್ ಶಾಡ್ಲೌಯಿ ಪಾಲಾಗಿದ್ದು, ಅತ್ಯುತ್ತಮ NYP ದಬಾಂಗ್ ದೆಹಲಿ ಯೋಗೇಶ್ ದಹಿಯಾಗೆ ಮತ್ತು ಅತ್ಯಮೂಲ್ಯ ಆಟಗಾರ ಪ್ರಶಸ್ತಿ ಇದೇ ಪುಣೇರಿ ಪಲ್ಟನ್ ನ ಅಸ್ಲಂ ಇನಾಮದಾರ್ ಪಾಲಾಯಿತು.

ಪುಣೇರಿ ಪಲ್ಟನ್ ಗೆ 3 ಕೋಟಿ

ಪಿಕೆಎಲ್ ಸೀಸನ್ 10 ಚಾಂಪಿಯನ್ ಪುಣೇರಿ ಪಲ್ಚನ್ ಗೆ 3 ಕೋಟಿ ರೂ ಬಹುಮಾನದ ಮೊತ್ತ ಲಭಿಸುತ್ತಿದ್ದು, ರನ್ನರ್ ಅಪ್ ಹರ್ಯಾಣ ಸ್ಟೀಲರ್ಸ್ ತಂಡ 1.8 ಕೋಟಿ ರೂ ಬಹುಮಾನದ ಹಣ ಪಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com