ಆಲ್-ಇಂಗ್ಲೆಂಡ್ ಸೀನಿಯರ್ ಬ್ಯಾಡ್ಮಿಂಟನ್ ಪ್ರಶಸ್ತಿ: ಇತಿಹಾಸ ನಿರ್ಮಿಸಿದ ಬೆಂಗಳೂರಿನ ಯಾಸ್ಮೀನ್ ಶೇಖ್

ಆಲ್-ಇಂಗ್ಲೆಂಡ್ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದ ಬೆಂಗಳೂರು ಮೂಲದ ಅಥ್ಲೀಟ್ ಯಾಸ್ಮೀನ್ ಶೇಖ್.
ಪದಕಗಳೊಂದಿಗೆ ಯಾಸ್ಮೀನ್ ಶೇಖ್ (Photo | Nagaraga Gadekal, EPS)
ಪದಕಗಳೊಂದಿಗೆ ಯಾಸ್ಮೀನ್ ಶೇಖ್ (Photo | Nagaraga Gadekal, EPS)

ಬೆಂಗಳೂರು: ಕೆಲವರಿಗೆ ವಯಸ್ಸು ಒಂದು ತಡೆಗೋಡೆಯಂತೆ ಕಾಣಿಸಬಹುದು, ಅವರ ಮನಸ್ಸಿನಲ್ಲಿ ಅನಿಯಂತ್ರಿತ ಮಿತಿಗಳನ್ನು ಸೃಷ್ಟಿಸುತ್ತದೆ. ಆದರೆ ಉತ್ಸಾಹ ಮತ್ತು ಮನೋಸ್ಥೈರ್ಯವಿದ್ದರೆ ಈ ಮಿತಿಗಳನ್ನು ಧೈರ್ಯದಿಂದ ಎದುರಿಸುವವರೂ ಇದ್ದಾರೆ.

ಅದಕ್ಕೆ ಉದಾಹರಣೆಯೆಂಬಂತೆ ಆಲ್-ಇಂಗ್ಲೆಂಡ್ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದ ಬೆಂಗಳೂರು ಮೂಲದ ಅಥ್ಲೀಟ್ ಯಾಸ್ಮೀನ್ ಶೇಖ್.

ಪದಕಗಳೊಂದಿಗೆ ಯಾಸ್ಮೀನ್ ಶೇಖ್ (Photo | Nagaraga Gadekal, EPS)
IPL 2024: RCB ವಿರುದ್ಧ ಗುಜರಾತ್ ಟೈಟಾನ್ಸ್ 147 ರನ್‌ಗಳಿಗೆ ಆಲೌಟ್! ಹ್ಯಾಟ್ರಿಕ್ ವಿಕೆಟ್ ಸಾಧನೆ!

ಯಾಸ್ಮೀನ್ ಶೇಖ್ ಅವರು ತಮ್ಮ ಕೌಶಲ ಮತ್ತು ನಿರ್ಣಯದ ಅದ್ಭುತ ಪ್ರದರ್ಶನ ಮೂಲಕ ಫೈನಲ್‌ನಲ್ಲಿ 21-15 ಮತ್ತು 21-16 ಅಂಕಗಳೊಂದಿಗೆ ಅಗ್ರ ಶ್ರೇಯಾಂಕದ ಜಪಾನ್ ಮೂಲದ ಆಟಗಾರ ಮಿಟ್ಸುಯೊ ಕೊಂಡೊ ಅವರನ್ನು ಸೋಲಿಸಿದರು. 21-17, 14-21, 21-17 ರಲ್ಲಿ ಕೊನೆಗೊಂಡ ಹಿಡಿತದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ರೊಮೇನಿಯಾದ ಅಲೀನಾ ಮಿಹೇಲಾ ಪೊಪಾ ಅವರನ್ನು ಸೋಲಿಸಿ ಯಾಸ್ಮೀನ್ ಮಹಿಳೆಯರ ಸಿಂಗಲ್ಸ್ 45+ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಆಲ್ ಇಂಗ್ಲೆಂಡ್ ಅತ್ಯಂತ ಪ್ರತಿಷ್ಠಿತ ಪಂದ್ಯಾವಳಿಯಾಗಿದ್ದು, ಪ್ರಕಾಶ್ ಪಡುಕೋಣೆ, ಗೋಪಿಚಂದ್ ಮೊದಲಾದವರು ಇದನ್ನು ಗೆದ್ದಿದ್ದಾರೆ. ಇದು ಅಗ್ರಮಾನ್ಯ ಆಟಗಾರರನ್ನು ಆಕರ್ಷಿಸುತ್ತದೆ. ನಾನು ಹಿಂದೆಂದೂ ಆಡಿರಲಿಲ್ಲ, ಪಂದ್ಯಕ್ಕೆ ಅರ್ಹತೆ ಪಡೆಯುವುದೇ ಸವಾಲಿನದಾಗಿದ್ದು ಮೊದಲ ಸುತ್ತಿನಲ್ಲಿ ಸೋತರೂ ನನಗೆ ನಿರಾಶೆಯಾಗುತ್ತಿರಲಿಲ್ಲ. ಈಗ ಚಿನ್ನ ಗೆದ್ದಿರುವುದು ಸಂತಸ ತಂದಿದೆ ಎನ್ನುತ್ತಾರೆ.

ಮಾಜಿ ಬ್ಯಾಡ್ಮಿಂಟನ್ ವಿಶ್ವ ನಂ. 1 ಪ್ರಕಾಶ್ ಪಡುಕೋಣೆ, ಶೇಖ್ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಅತ್ಯಂತ ಶ್ರೇಷ್ಠ ಗೆಲುವು. ಭಾರತದಲ್ಲಿನ ಮಾಸ್ಟರ್ಸ್ ಬ್ಯಾಡ್ಮಿಂಟನ್‌ಗೆ ಒಂದು ಕಿರೀಟವಾಗಿದೆ ಎಂದರು.

ಪ್ರಗತಿಪರ ಕುಟುಂಬದಲ್ಲಿ ಜನಿಸಿದ ಶೇಖ್ ಜೀವನದ ಆರಂಭದಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡಿಕೊಂಡರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಯಶಸ್ಸನ್ನು ಗಳಿಸಿದರು. ಭಾರತದ ಹೊಸ ಕ್ರೀಡಾ ಪ್ರಾಧಿಕಾರದಿಂದ ಆಯ್ಕೆಯಾದ ಆರಂಭಿಕ ಕ್ರೀಡಾಪಟುಗಳಲ್ಲಿ ಒಬ್ಬರಾದ ಶೇಖ್ ಸುಮಾರು ಒಂದು ದಶಕದ ಆಟದ ನಂತರ ಸ್ಪರ್ಧೆಯಿಂದ ದೂರ ಸರಿದಿದ್ದರು.

ಆದರೆ ತಮ್ಮ ಇಚ್ಛೆಯ ಬ್ಯಾಡ್ಮಿಂಟನ್ ಆಡುವುದನ್ನು ಶೇಖ್ ನಿಲ್ಲಿಸಲಿಲ್ಲ, ಕೋವಿಡ್ ಸಾಂಕ್ರಾಮಿಕ ನಂತರ ಮತ್ತೊಮ್ಮೆ ಸ್ಪರ್ಧಾತ್ಮಕ ವಿಷಯಗಳ ಬಗ್ಗೆ ಉತ್ಸಾಹವನ್ನು ತೋರಿಸಿದರು. 20 ವರ್ಷಗಳ ವಿರಾಮದ ನಂತರ ಮತ್ತೆ ಪುನರಾಗಮನ ಮಾಡಿದರು. 2022 ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಚಾಂಪಿಯನ್‌ಶಿಪ್ ನ್ನು ಗೆದ್ದರು. ಇತ್ತೀಚೆಗೆ ಆಲ್-ಇಂಗ್ಲೆಂಡ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಸಿಂಗಲ್ಸ್ 45+ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com