Paralympics 2024: ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಸಾಹಸ, ಭಾರತಕ್ಕೆ ದಾಖಲೆಯ 6ನೇ ಚಿನ್ನ

ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ದಾಖಲೆಯ 2.08 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕಕ್ಕೆ ಭಾಜನರಾದರು.
Praveen Kumar produced a season-best jump of 2.08m in a six-jumper field to finish on top of the podium
ಚಿನ್ನ ಗೆದ್ದ ಪ್ರವೀಣ್ ಕುಮಾರ್(Photo | X)
Updated on

ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದಕ್ಕಿದ್ದು, ಹೈ ಜಂಪ್ ನಲ್ಲಿ ಭಾರತದ ಅಥ್ಲೀಟ್ ಪ್ರವೀಣ್ ಕುಮಾರ್ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಹೌದು.. ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆದ ಹೈ ಜಂಪ್ ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ದಾಖಲೆಯ 2.08 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಅಗ್ರ ಸ್ಥಾನಕ್ಕೇರಿ ಚಿನ್ನದ ಪದಕಕ್ಕೆ ಭಾಜನರಾದರು.

ಅಲ್ಲದೆ ಈ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪ್ರವೀಣ್ ಕುಮಾರ್ ತಮ್ಮದೇ ಸಾಧನೆಯನ್ನು ಅತ್ಯುತ್ತಮ ಪಡಿಸಿಕೊಂಡರು.

Praveen Kumar produced a season-best jump of 2.08m in a six-jumper field to finish on top of the podium
World Para Athletics Championships 2024: ಮರಿಯಪ್ಪನ್ ತಂಗವೇಲು, ಸುಮಿತ್ ಆಂಟಿಲ್, ಏಕ್ತಾ ಭಯಾನ್ ಗೆ ಚಿನ್ನ

ಈ ಸ್ಪರ್ಧೆಯಲ್ಲಿ ಅಮೆರಿಕದ ಡೆರೆಕ್ ಲೊಸಿಡೆಂಟ್ 2.06 ಮೀ ಜಿಗಿತದೊಂದಿಗೆ ಬೆಳ್ಳಿ ಗೆದ್ದರೆ, ಉಜ್ಬೇಕಿಸ್ತಾನ್‌ನ ಟೆಮುರ್ಬೆಕ್ ಗಿಯಾಜೊವ್, ವೈಯಕ್ತಿಕ ಅತ್ಯುತ್ತಮ 2.03 ಮೀಟರ್ ಗಳಿಸಿ ಮೂರನೇ ಸ್ಥಾನ ಪಡೆದರು.

ನೊಯ್ಡಾದ 21ರ ಹರೆಯದ ಪ್ರವೀಣ್ ಕುಮಾರು ಹುಟ್ಟಿನಿಂದಲೇ ಕುಬ್ಜ ಕಾಲುಗಳನ್ನು ಹೊಂದಿದ್ದಾರೆ. ಆದಾಗ್ಯೂ ತಮ್ಮ ಅಂಗವೈಕಲ್ಯವನ್ನು ಮೀರಿದ ಸಾಧನೆ ಮಾಡಿದ್ದಾರೆ.

ಇನ್ನು ಹಾಲಿ ಕ್ರೀಡಾಕೂಟದಲ್ಲಿ ಭಾರತ ಒಟ್ಟು 26 ಪದಕಗಳನ್ನು ಜಯಿಸಿದ್ದು, ಈ ಪೈಕಿ 6 ಚಿನ್ನ, 9 ಬೆಳ್ಳಿ, 11 ಕಂಚಿನ ಪದಕಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com