'ನನ್ನ ಪಯಣ ಮುಗಿದಿದೆ.. ಇನ್ಮೇಲೆ ಜಗಳ ಮಾಡೋಕೆ ಇಷ್ಟ ಇಲ್ಲ' : ಅಂತಾರಾಷ್ಟ್ರೀಯ ಫುಟ್ಬಾಲ್ ಗೆ Neymar ನಿವೃತ್ತಿ ಘೋಷಣೆ, ಬ್ರೆಜಿಲ್‌ಗೆ ಭಾವನಾತ್ಮಕ ವಿದಾಯ!

ಕೋಪಾ ಸುಡಅಮೆರಿಕಾನಾ ಟೂರ್ನಿಯಲ್ಲಿ ಸ್ಯಾಂಟೋಸ್ ತಂಡವು ವೆನೆಜುವೆಲಾದ ಯೂನಿವರ್ಸಿದಾದ್ ಸೆಂಟ್ರಲ್ ವಿರುದ್ಧ 4-2 ಗೋಲುಗಳ ಜಯ ಸಾಧಿಸಿದ ಬಳಿಕ ನೇಮರ್ ತಮ್ಮ ನಿವೃತ್ತಿ ನಿರ್ಧಾರವನ್ನು ಬಹಿರಂಗಪಡಿಸಿದರು.
BrazilS Star Neymar Confirms International Football Retirement
ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನೇಮರ್ ನಿವೃತ್ತಿ ಘೋಷಣೆ
Updated on

ಸಾವೊ ಪೌಲೊ: ಬ್ರೆಜಿಲ್ ಫುಟ್‌ಬಾಲ್ ತಂಡದ ಸಾರ್ವಕಾಲಿಕ ಗರಿಷ್ಠ ಗೋಲುಗಳಿಸಿದ ಆಟಗಾರ ನೇಮರ್, ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಸುಮಾರು 16 ವರ್ಷಗಳ ಕಾಲ ಬ್ರೆಜಿಲ್ ಪರ ಆಡಿದ ನೇಮರ್, 2026ರ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ಹೊರಬಿದ್ದ ಬಳಿಕ ತಮ್ಮ ಅಂತರರಾಷ್ಟ್ರೀಯ ಭವಿಷ್ಯದ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕೋಪಾ ಸುಡಅಮೆರಿಕಾನಾ ಟೂರ್ನಿಯಲ್ಲಿ ಸ್ಯಾಂಟೋಸ್ ತಂಡವು ವೆನೆಜುವೆಲಾದ ಯೂನಿವರ್ಸಿದಾದ್ ಸೆಂಟ್ರಲ್ ವಿರುದ್ಧ 4-2 ಗೋಲುಗಳ ಜಯ ಸಾಧಿಸಿದ ಬಳಿಕ ನೇಮರ್ ತಮ್ಮ ನಿವೃತ್ತಿ ನಿರ್ಧಾರವನ್ನು ಬಹಿರಂಗಪಡಿಸಿದರು.

ಈ ವೇಳೆ ಮಾತನಾಡಿದ ನೇಮರ್, "ಹಳದಿ ಜೆರ್ಸಿಗಾಗಿ ನನ್ನ ರಕ್ತ, ಜೀವನ ಎಲ್ಲವನ್ನೂ ಕೊಟ್ಟಿದ್ದೇನೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ ದಿನಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದರು.

BrazilS Star Neymar Confirms International Football Retirement
Watch | CWG 2026: ಹ್ಯಾಟ್ರಿಕ್ ಸಾಧನೆ; ಬಂಗಾರ ಗೆದ್ದ ಮೀರಾಬಾಯಿ ಚಾನು ಹೇಳಿದ್ದಿಷ್ಟು...

ನನ್ನ ಪಯಣ ಮುಗಿದಿದೆ

"ರಾಷ್ಟ್ರೀಯ ತಂಡದೊಂದಿಗೆ ನನ್ನ ಪಯಣ ಇಲ್ಲಿಗೆ ಮುಗಿದಿದೆ. ನಾನು ಇತಿಹಾಸ ನಿರ್ಮಿಸಿದ್ದೇನೆ. ಬ್ರೆಜಿಲ್ ಪರ ಆಡುವಾಗ ನಾನು ತುಂಬಾ ಸಂತೋಷವಾಗಿದ್ದೆ. ಹಳದಿ ಜೆರ್ಸಿಗಾಗಿ ನನ್ನ ರಕ್ತ, ನನ್ನ ಜೀವನ ಎಲ್ಲವನ್ನೂ ಕೊಟ್ಟಿದ್ದೇನೆ. ಯಾವಾಗಲೂ ಸಂಪೂರ್ಣ ಸಮರ್ಪಣೆಯಿಂದ ಆಡಿದ್ದೇನೆ. ಆದರೆ ಈಗ ಮತ್ತಷ್ಟು ಮುಂದುವರಿಯಲು ಬಯಸುವುದಿಲ್ಲ" ಎಂದು ನೇಮರ್ ಭಾವನಾತ್ಮಕವಾಗಿ ಹೇಳಿದರು.

ಡ್ರೆಸ್ಸಿಂಗ್ ರೂಂ ವಿವಾದಕ್ಕೂ ಸ್ಪಷ್ಟನೆ

ಇತ್ತೀಚೆಗೆ ಸ್ಯಾಂಟೋಸ್ ತಂಡದ ಕಿರಿಯ ಆಟಗಾರರನ್ನು ಡ್ರೆಸ್ಸಿಂಗ್ ರೂಂನಲ್ಲಿ ಬೆದರಿಸಿ ಟೀಕಿಸಿದ್ದಾರೆ ಎಂಬ ವರದಿಗಳಿಗೂ ನೇಮರ್ ಸ್ಪಷ್ಟನೆ ನೀಡಿದರು.

"ಇಂತಹ ಸುದ್ದಿಗಳು ನೋವು ಮತ್ತು ಕಿರಿಕಿರಿ ಉಂಟುಮಾಡುತ್ತವೆ. ಆದರೆ ಅದಕ್ಕೆ ನಾನು ಕಾರಣನಲ್ಲ. ಪಂದ್ಯ ಮುಗಿದ ಬಳಿಕ ತಂಡ ಇನ್ನಷ್ಟು ಉತ್ತಮವಾಗಿ ಆಡಬೇಕೆಂದು ಮಾತ್ರ ಹೇಳಿದ್ದೆ. ನಾಯಕನಾಗಿ ಅದನ್ನು ಹೇಳುವ ಹಕ್ಕು ನನಗಿದೆ. ಲೂಕಾಸ್ ವೆರಿಸ್ಸಿಮೊ ಮತ್ತು ಗ್ಯಾಬಿಗೋಲ್ ಕೂಡ ಆಟಗಾರರೊಂದಿಗೆ ಮಾತನಾಡಿದ್ದರು" ಎಂದು ಹೇಳಿದರು.

ಬ್ರೆಜಿಲ್‌ನ ಸಾರ್ವಕಾಲಿಕ ಗರಿಷ್ಠ ಗೋಲುಗಾರ

ಅಂದಹಾಗೆ 34 ವರ್ಷದ ನೇಮರ್ ತಮ್ಮ ವೃತ್ತಿಜೀವನದಲ್ಲಿ ಬ್ರೆಜಿಲ್ ಪರ ಹಲವು ಫಿಫಾ ವಿಶ್ವಕಪ್, ಕೋಪಾ ಅಮೆರಿಕಾ ಹಾಗೂ ಒಲಿಂಪಿಕ್ಸ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಬ್ರೆಜಿಲ್‌ನ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ಅವರು ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

2026 ವಿಶ್ವಕಪ್‌ನಲ್ಲಿ ಕೊನೆಯ ಪಂದ್ಯ

2026ರ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ರೌಂಡ್ ಆಫ್ 16 ಹಂತದಲ್ಲಿ ನಾರ್ವೆ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಅದೇ ಪಂದ್ಯ ನೇಮರ್ ಅವರ ಬ್ರೆಜಿಲ್ ಪರ ಕೊನೆಯ ಪಂದ್ಯವಾಗಿ ಉಳಿಯಿತು.

ಸ್ಯಾಂಟೋಸ್‌ಗೆ ಗೆಲುವಿನ ಕೊಡುಗೆ

ಎಲ್ಲಾ ಊಹಾಪೋಹಗಳ ನಡುವೆಯೂ ನೇಮರ್, ಯೂನಿವರ್ಸಿದಾದ್ ಸೆಂಟ್ರಲ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಸ್ಯಾಂಟೋಸ್ ತಂಡವನ್ನು ಕೋಪಾ ಸುಡಅಮೆರಿಕಾನಾ ಟೂರ್ನಿಯ ರೌಂಡ್ ಆಫ್ 16ಕ್ಕೆ ಮುನ್ನಡೆಸಿದರು. ಮುಂದಿನ ಸುತ್ತಿನಲ್ಲಿ ಸ್ಯಾಂಟೋಸ್ ತಂಡ ಈಕ್ವೆಡಾರ್‌ನ ಮಕಾರಾ ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com