ಫುಟ್‌ಬಾಲ್ ಪಂದ್ಯದ ವೇಳೆ ಸ್ಪೈಡರ್‌ಕ್ಯಾಮ್ ಗೆ ಬೆಂಕಿ, ಕ್ಯಾಮೆರಾಮನ್ ಬಚಾವ್, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ! Video

ಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್‌ಕ್ಯಾಮ್ ಮೈದಾನಕ್ಕೆ ಬಿದ್ದಿದೆ.
Disaster Averted As Spidercam Catches Fire
ಫುಟ್ಬಾಲ್ ಪಂದ್ಯದ ವೇಳೆ ಸ್ಪೈಡರ್ ಕ್ಯಾಮ್ ಗೆ ಬೆಂಕಿ
Updated on

ಡೆಬ್ರೆಸನ್: ಫುಟ್‌ಬಾಲ್ ಪಂದ್ಯದ ವೇಳೆ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು, ಪಂದ್ಯದ ಲೈವ್ ಸ್ಟ್ರೀಮ್ ಮಾಡುತ್ತಿದ್ದ ಸ್ಪೈಡರ್ ಕ್ಯಾಮೆರಾವೊಂದು ಬೆಂಕಿ ತಗುಲಿ ಮೈದಾನದಲ್ಲಿ ಬಿದ್ದ ಘಟನೆ ವರದಿಯಾಗಿದೆ.

ಹಂಗೇರಿಯ ಡೆಬ್ರೆಸೆನ್ ನಗರದ Nagyerdei Stadium ನಲ್ಲಿ ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಫ್ರೆಂಡ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ತಗುಲಿ ಸ್ಪೈಡರ್‌ಕ್ಯಾಮ್ (Spidercam) ಮೈದಾನಕ್ಕೆ ಬಿದ್ದಿದೆ.

ಪಂದ್ಯದ ವೇಳೆ ಮೈದಾನದ ಹಲವು ಮೀಟರ್ ಎತ್ತರದಲ್ಲಿ ತೂಗಾಡುತ್ತಿದ್ದ ಕ್ಯಾಮೆರಾದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದರಿಂದ ಬೆಂಕಿಯ ಕಿಡಿಗಳು ಹೊರಬರುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.

Disaster Averted As Spidercam Catches Fire
ಅಮೆರಿಕ ಐಸ್ ಹಾಕಿ ತಂಡಕ್ಕೆ ಸೇರ್ಪಡೆಯಾದ ಮೈಸೂರು ಮೂಲದ ಸಹೋದರರು!

ಕ್ಯಾಮೆರಾಮನ್ ಬಚಾವ್

ಇನ್ನು ಪಂದ್ಯದ ವೇಳೆ ಟಚ್‌ಲೈನ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಕ್ಯಾಮೆರಾಮ್ಯಾನ್‌ ಮೇಲೆ ಸ್ಪೈಡರ್ ಕ್ಯಾಮ್ ಬೀಳುವ ಸಾಧ್ಯತೆ ಇತ್ತು. ಸ್ಪೈಡರ್‌ಕ್ಯಾಮ್ ಅವರು ನಿಂತಿದ್ದ ಸ್ಥಳದಿಂದ ಕೇವಲ ಕೆಲ ಮೀಟರ್ ದೂರದಲ್ಲಿ ನೆಲಕ್ಕೆ ಬಿದ್ದಿತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ.

ಘಟನೆಯ ನಂತರ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಿ, ಮೈದಾನದಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಲಾಯಿತು.

ಬಳಿಕ ಪಂದ್ಯವನ್ನು ಪುನರಾರಂಭಿಸಲಾಯಿತು. ಪಂದ್ಯದಲ್ಲಿ ಹಂಗೇರಿ 3-1 ಅಂತರದಲ್ಲಿ ಜಯ ಸಾಧಿಸಿತು.

ನಾಯಕ ಡೊಮಿನಿಕ್ ಸ್ಜೋಬೋಸ್ಜ್ಲೈ, ಆಂಡ್ರಾಸ್ ಸ್ಕಾಫರ್ ಮತ್ತು ರಾಜ್ಮಂಡ್ ಟೋಥ್ ಹಂಗೇರಿಯ ಪರ ಗೋಲುಗಳನ್ನು ದಾಖಲಿಸಿದರು.

ಅಂದಹಾಗೆ ಹಂಗೇರಿ ಮತ್ತು ಕಝಾಕಿಸ್ತಾನ್ ಎರಡೂ ತಂಡಗಳು ಜೂನ್ 11ರಿಂದ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೋ ದೇಶಗಳಲ್ಲಿ ಆರಂಭವಾಗಲಿರುವ FIFA ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com