

2026ರ ಏಷ್ಯನ್ ಗೇಮ್ಸ್‌ನ 13ನೇ ದಿನ ಭಾರತಕ್ಕೆ ಗಮನಾರ್ಹವಾಗಿದೆ. ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್‌ನಲ್ಲಿ ಚೀನಾವನ್ನು 1-0 ಅಂತರದಿಂದ ಸೋಲಿಸಿ ಏಷ್ಯನ್ ಗೇಮ್ಸ್ 2026ರ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.
2026ರ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಚೀನಾವನ್ನು 1-0 ಅಂತರದಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಲಾಲ್ರೆಮ್ಸಿಯಾಮಿ ಅವರ ಗೋಲು ಮತ್ತು ಸವಿತಾ ಪುನಿಯಾ ಅವರ ಅದ್ಭುತ ಸೇವ್‌ಗಳಿಂದಾಗಿ ಭಾರತವು 1982ರ ನಂತರ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಭಾರತವು 44 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ.
1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು ಚಿನ್ನದ ಪದಕವನ್ನು ಗೆದ್ದಿತು. ಆಗ ಮಹಿಳಾ ಹಾಕಿಯನ್ನು ಮೊದಲು ಕ್ರೀಡಾಕೂಟದಲ್ಲಿ ಸೇರಿಸಲಾಯಿತು. ಅಂದಿನಿಂದ, ಭಾರತವು 1998 ಮತ್ತು 2018 ರಲ್ಲಿ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ವಿರುದ್ಧ ಸೋತು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟುಕೊಂಡಿತು.
ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 16 ತಲುಪಿದ್ದು ಒಟ್ಟಾರೆ 76 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತಲುಪಿದೆ. ಭಾರತ ಒಟ್ಟಾರೆ 16 ಚಿನ್ನ, 25 ಬೆಳ್ಳಿ ಮತ್ತು 35 ಕಂಚಿನ ಪದಕ ಗೆದ್ದಿದೆ.