ಮೂರು ವರ್ಷ ಹೇಗೆ ಕಳೆಯಿತಲ್ವಾ..? ಗೆಳೆಯರದೊಂದು ದೊಡ್ಡ ಗುಂಪು ಕಟ್ಟಿಕೊಂಡದ್ದು, ತರಗತಿ ಇಲ್ಲದಾಗ ಕಾಲೇಜು ಕ್ಯಾಂಪಸ್ನೊಳಗೆ ಓಡಾಡಿದ್ದು... ಆ ಕ್ಷಣಗಳನ್ನು ನೆನಪಿಸಿಕೊಳ್ಳೋದು ಯಾವತ್ತಿಗೂ ಖುಷಿ. ಛೇ.. ಮೂರು ವರ್ಷ ಎಷ್ಟು ಬೇಗ ಮುಗಿದು ಹೋಯ್ತಲ್ಲಾ...?
ಪಾಠ ಬೋರೊಡೆದರೆ ಕ್ಲಾಸ್ಗೆ ಚಕ್ಕರ್ ಹಾಕಿ ಕಾಲೇಜು ಮುಂದಿನ ಆಲದ ಮರದಡಿ ಹಾಜರ್ ಆಗುತ್ತಿದ್ದೆವು. ಇಲ್ಲೇ ಕೂತು ಎಷ್ಟೊಂದು ವಿದ್ಯಾರ್ಥಿನಿಯರನ್ನು ಕಾಡುತ್ತಿದ್ದೆವಲ್ವಾ? ತರಗತಿಯಲ್ಲಿ ಉಪನ್ಯಾಸಕರಿಗೆ ತರ್ಲೆ ಪ್ರಶ್ನೆಗಳನ್ನು ಕೇಳುವುದು, ಇಡೀ ತರಗತಿ ನಗೆಗಡಲಲ್ಲಿ ತೇಲುವುದು, ಮೊದಲ ದಿನದ ಮೊದಲ ಶೋಗೆ ಥಿಯೇಟರ್ಗೆ ನುಗ್ಗೋದು, ಕ್ಲಾಸಿಗೆ ಬಂದು ನಾವು ನೋಡಿದ ಸಿನಿಮಾ ಹೆಸರು ಬೋರ್ಡಲ್ಲಿ ದೊಡ್ಡದಾಗಿ ಬರೆಯೋದು, ಗೆಳೆಯ, ಗೆಳತಿಯರ ಜತೆಗೆ ಸಣ್ಣ ಸಣ್ಣ ವಿಚಾರಕ್ಕೆ ಜಗಳ ತೆಗೆಯೋದು, ಕೆಲ ದಿನ ಟೂ ಬಿಟ್ಟು ಪರಿಚಯವೇ ಇಲ್ಲದಂತೆ ಇದ್ದುಬಿಡೋದು... ಒಂದು ದಿನ ಸಾರಿ ಕೇಳಿ ಮತ್ತೆ ನಗ್ತಾ ನಗ್ತಾ ಓಡಾಡೋದು... ಎಲ್ಲಾ ಇನ್ನು ಮುಂದೆ ಬರಿಯ ನೆನಪು ಅಲ್ವಾ? ಛೇ.. ಮೂರು ವರ್ಷ ಎಷ್ಟು ಬೇಗ ಮುಗಿದು ಬಿಡ್ತಲ್ವಾ?
-ರಂಜಿತ್ ರಣಸಿಂಗೆ, ಅಥಣಿ