ವಿಸಿಗೆ ಜೀವ ಬೆದರಿಕೆ: ವಿವಿಗೆ ಸಿಸಿ ಕ್ಯಾಮೆರಾ ಅಳವಡಿಕೆ
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಈಗ ಸಿಸಿ ಕ್ಯಾಮೆರಾಗಳು ಕಣ್ಗಾವಲಾಗಿವೆ. ವಿವಿ ಆವರಣದಲ್ಲಿ 5 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿವಿಯಲ್ಲಿ ಅವ್ಯವಹಾರಗಳು ನಡೆಯುತ್ತವೆ ಎಂಬ ಕಾರಣಕ್ಕೆ ಇವುಗಳನ್ನು ಅಳವಡಿಸಿಲ್ಲ. ಬದಲಾಗಿ ಕುಲಪತಿ, ಕುಲಸಚಿವರ ಆಂತರಿಕ ಕಚ್ಚಾಟದಿಂದ ಯಾವುದೇ ಕಿಡಿಗೇಡಿಗಳು ಅನಗತ್ಯ ಕಿರುಕುಳ ನೀಡದಿರಲಿ ಎನ್ನುವ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಲವು ದಿನಗಳಿಂದ ಕುಲಪತಿ, ಕುಲಸಚಿವರ ನಡುವೆ ಗೊಂದಲ ಹೆಚ್ಚಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಸಚಿವರನ್ನು ಮಾತೃ ವಿವಿ ಗುಲ್ಬರ್ಗ ವಿವಿಗೆ ವರ್ಗಾವಣೆ ಮಾಡುವ ನಿರ್ಧರಿಸುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದರು. ವರ್ಗಾವಣೆಯ ಆದೇಶ ಹೊರಡಿಸಿದ ಮೇಲೆ ಕುಲಸಚಿವರ ಕಚೇರಿಗೆ ಬೀಗ ಹಾಕಲಾಗಿತ್ತು. ಸಿಂಡಿಕೇಟ್ ಸಭೆಯ ನಿರ್ಧಾರಗಳನ್ನು ಬಾಗಿಲಿಗೆ ಅಂಟಿಸಲಾಗಿತ್ತು, ಆದರೆ ಕುಲಸಚಿವ ವಿಜಯಕುಮಾರ್ ಅವರು ಇಂತಹ ನಿರ್ಧಾರದಿಂದ ಬೇಸತ್ತು, ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಇದೀಗ ಕಾನೂನು ಹೋರಾಟದ ಚಿಂತನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
5 ಕ್ಯಾಮೆರಾ ಅಳವಡಿಕೆ: ಇಂತಹ ಬೆಳವಣಿಗೆ ಮಧ್ಯೆ ಕುಲಪತಿ ಮಂಜಪ್ಪ ಹೊಸಮನಿ ಅವರು ವಿವಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕುಲಪತಿ ಕಚೇರಿ, ವಿಸಿ ಕಚೇರಿ ಮುಂಭಾಗ, ಕುಲಸಚಿವರ ಕಚೇರಿ, ಕಚೇರಿಯ ಮುಂಭಾಗ ಹಾಗೂ ವಿವಿ ಮುಂಭಾಗದಲ್ಲಿ 5 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇನ್ನೊಂದು ಕಡೆ ಕುಲಸಚಿವ ವಿಜಯ್ಕುಮಾರ್ ಅವರು ಉನ್ನತ ಶಿಕ್ಷಣ ಇಲಾಖೆಯ ಸಚಿವರ ಅಧೀನ ಕಾರ್ಯದರ್ಶಿಗಳ ಮುಂದೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ಸಿಂಗ್ ರಾಥೋಡ್ ಅವರಿಗೆ ಮನವಿ ಮಾಡಿದ್ದೇನೆ. ಇತ್ತೀಚೆಗೆ ಕೆಲವೊಂದು ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿತ್ತು. ಇನ್ನು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ವಿವಿಯಲ್ಲಿ ನಡೆಯಬಾರದು ಎನ್ನುವ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
- ಮಂಜಪ್ಪ ಹೊಸಮನಿ,
ವಿಎಸ್ಕೆ ವಿವಿ ಕುಲಪತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

