ಪ್ರಧಾನ ಸುದ್ದಿ

ಕ್ಷಮಾದಾನವಿಲ್ಲದಿದ್ದರೂ 9 ಪಾತಕಿಗಳಿಗೆ ಜೀವದಾನ

Published On :

ಕ.ಪ್ರ.ವಾರ್ತೆ ,  ಬೆಳಗಾವಿ ,  ಆ. 22
ಮರಣ ದಂಡನೆ ಶಿಕ್ಷೆಯ ಬಗ್ಗೆಯೇ ವ್ಯಾಪಕ ಚರ್ಚೆ, ಜಿಜ್ಞಾಸೆ, ಬೇಕು- ಬೇಡವೆಂಬ ವಾದ ಒಂದು ಕಡೆ ನಡೆದಿದ್ದರೆ ಕಳೆದ 8 ತಿಂಗಳಲ್ಲಿ ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ನೇಣುಕುಣಿಕೆ ಏರಬೇಕಿದ್ದ 9 ಆರೋಪಿಗಳು ಕಾನೂನಿನ ಅಂತಿಮ ಹೋರಾಟದಿಂದ ತಾತ್ಕಾಲಿಕ ಜೀವದಾನ ಪಡೆದುಕೊಂಡಿದ್ದಾರೆ.
ಇನ್ನೇನು ಗಲ್ಲಿಗೇರಿಸಬೇಕೆನ್ನುವಾಗ ಕೊನೆ ಕ್ಷಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ, ತಮ್ಮ ಸಾವನ್ನು ಮುಂದೂಡಿಕೊಂಡಿರುವವರು ಇವರು.
ಈ ಒಂಬತ್ತು ಮಂದಿಯಲ್ಲಿ ವೀರಪ್ಪನ್ ಸಹಚರರಾದ ಮೀಸೆಕಾರ ಮಾದಂ್ಯು, ಜ್ಞಾನಪ್ರಕಾಶ, ಬಿಲ್ವೇಂದ್ರ ಮತ್ತು ಸೈಮನ್ ಇವರು ಪಾಲಾರ ಬಳಿ ನೆಲ ಬಾಂಬ್ ಸ್ಫೋಟಿಸಿ, 22 ಜನರ ಸಾವಿಗೆ ಕಾರಣರಾಗಿ ಗಲ್ಲು ಶಿಕ್ಷೆಗೆ ಗುರಿಂಾಗಿದ್ದಾರೆ. ಸಾಯಿಬಣ್ಣ ನಾಟೇಕರ ಅಮಾನುಷ ಕೊಲೆ ಪ್ರಕರಣದ ಅಪರಾಧಿಯಾಗಿ ಫಾಶಿ ಶಿಕ್ಷೆಗೆ ಗುರಿಯಾಗಿದ್ದಾನೆ. ಮಂಗಳೂರಿನ ಪ್ರವೀಣಕುಮಾರ್ ಹಾಗೂ ವಿಕೃತ ಕಾಮಿ ಉಮೇಶ ರೆಡ್ಡಿ ಹಾಗೂ ಇತ್ತೀಚೆಗೆ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ಶಿವು ಮುನಿಶೆಟ್ಟಿ ಹಾಗೂ ಜಡೇಸ್ವಾಮಿ ರಂಗಶೆಟ್ಟಿ ಅತ್ಯಾಚಾರ ನಡೆಸಿ, ಹತ್ಯೆಗೈದಿದ್ದು ಗಲ್ಲು ಶಿಕ್ಷೆಯಾಗಬೇಕಿದೆ.
ದೇಶದಲ್ಲಿ ಈ ರೀತಿಯ (ರಾಷ್ಟ್ರಪತಿ ಕ್ಷಮಾದಾನದ ಅರ್ಜಿ ತಿರಸ್ಕರಿಸಿದ) 15 ಪ್ರಕರಣಗಳಿವೆ. ಈ ಎಲ್ಲ ಪ್ರಕರಣಗಳ ಮರುಪರಿಶೀಲನಾ ಅರ್ಜಿ ಸುಪ್ರೀಂ ಕೋರ್ಟ್ ಮುಂದಿದ್ದು, ಎಲ್ಲವೂ ಸೆ.22 ರಂದು ವಿಚಾರಣೆಗೆ ಬರಲಿದೆ. ಅಂದೇ ಅಂತಿಮ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.
1455 ಜನ ಗಲ್ಲು ಶಿಕ್ಷೆ: ಕೇಂದ್ರ ಸರ್ಕಾರದ ಗೃಹ ಇಲಾಖೆಂು ರಾಷ್ಟ್ರೀಂು ಅಪರಾಧ ದಾಖಲೆಗಳ ವಿಭಾಗದ ದಾಖಲೆಗಳ ಪ್ರಕಾರ ದೇಶದಲ್ಲಿ ಒಟ್ಟು 1455 ಜನ ಗಲ್ಲು ಶಿಕ್ಷೆಗೆ ಗುರಿಂಾಗಿರುವ ಕೈದಿಗಳಿದ್ದಾರೆ. 2001 ರಿಂದ 2011ರವರೆಗಿನ ಸರಾಸರಿಂುನ್ನು ತೆಗೆದುಕೊಂಡಾಗ ಪ್ರತಿವರ್ಷ 132 ಜನ ಗಲ್ಲು ಶಿಕ್ಷೆಗೆ ಗುರಿಂಾಗುತ್ತಿದ್ದಾರೆ.
ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಅತಿ ಹೆಚ್ಚು ಉತ್ತರ ಪ್ರದೇಶದಲ್ಲಿ 370 ಕೈದಿಗಳಿದ್ದರೆ, ಗೋವಾದಲ್ಲಿ ಒಬ್ಬ ಗಲ್ಲು ಶಿಕ್ಷೆಗೆ ಗುರಿಯಾದವನಿದ್ದಾನೆ.
ಬಿಹಾರ-132, ಮಹಾರಾಷ್ಟ್ರದಲ್ಲಿ-125, ಕರ್ನಾಟಕ-95 ತಮಿಳುನಾಡಿನಲ್ಲಿ-95, ಮಧ್ಯಪ್ರದೇಶದಲ್ಲಿ-87, ಜಾರ್ಖಂಡ್‌ನಲ್ಲಿ-81, ಪಶ್ಚಿಮ ಬಂಗಾಳದಲ್ಲಿ-79, ದೆಹಲಿ-71, ಗುಜರಾತ್‌ನಲ್ಲಿ-57, ರಾಜಸ್ಥಾನದಲ್ಲಿ-38, ಕೇರಳದಲ್ಲಿ-34, ಒಡಿಶಾ-33, ಹರ್ಯಾಣ-31, ಅಸ್ಸಾಂ-31, ಜಮ್ಮು ಮತ್ತು ಕಾಶ್ಮೀರದಲ್ಲಿ-20, ಪಂಜಾಬ್-19, ಛತ್ತೀಸ್‌ಘಡ-18, ಉತ್ತರಾಂಚಲ-16, ಆಂಧ್ರಪ್ರದೇಶ-8, ಮೇಘಾಲಂು-6, ಚಡೀಘಡ-4, ದಿಯು ಮತ್ತು ದಮನ್-4, ಮಣಿಪುರ-3, ಹಿಮಾಚಲಪ್ರದೇಶ-3, ತ್ರಿಪುರಾ-2 ಮತ್ತು ಪಾಂಡಿಚೆರಿಂುಲ್ಲಿ-2 ಅಪರಾಧಿಗಳಿಗೆ ಗಲ್ಲು ಕಾಯಂ ಆಗಿದ್ದು, ಒಟ್ಟು 1455 ಜನರಿದ್ದಾರೆ.
ಹಿಂಡಲಗಾ ಕಾರಾಗೃಹಕ್ಕೆ ಬಂದೀಖಾನೆ ಡಿಐಜಿ ಭೇಟಿ
ಬೆಳಗಾವಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶಿವು ಮುನಿಶೆಟ್ಟಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧೀಖಾನೆ ಇಲಾಖೆಯ ಕೇಂದ್ರ ಕಚೇರಿಯ ಡಿಐಜಿ ಎಂ. ವಿಶ್ವನಾಥಯ್ಯ ಗುರುವಾರ ಬೆಳಗ್ಗೆ ಹಿಂಡಲಗಾ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು.  ಸುದೀರ್ಘ ಪರಿಶೀಲನೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬುಧವಾರ ನಡೆದ ಆತ್ಮಹತ್ಯೆ ಘಟನೆ ಕುರಿತು ಜೈಲಾಧಿಕಾರಿಗಳು ಮತ್ತು ಆತ್ಮಹತ್ಯೆಗೆ ಯತ್ನಿಸಿದ ಶಿವು ಮುನಿಶೆಟ್ಟಿಯ ವಿಚಾರಣೆ ನಡೆಸಿದ್ದೇನೆ. ಈ ಕುರಿತು ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಡಿಐಜಿ ವೀರಭದ್ರಸ್ವಾಮಿ ಇದ್ದರು.
ರಾಷ್ಟ್ತ್ರಪತಿ ದೇಶದ ಪ್ರಥಮ ಪ್ರಜೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಂುಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವವರೂ ಅವರೇ. ಅವರೇ ಸುಪ್ರಿಂ. ಅವರು ಕ್ಷಮಾದಾನ ತಿರಸ್ಕರಿಸಿದ ಬಳಿಕ ಅಪರಾಧಿ ನೇಣುಗಂಬ ಏರುವಂತಾಗಬೇಕು. ಕಾನೂನಿನಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅವಶ್ಯಕತೆ ಇದೆ.
- ಕಾಡೇಶ ಬೀಳಗಿ, ನ್ಯಾಂುವಾದಿ

-ರಾಯಣ್ಣ ಆರ್.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.