ಪ್ರಧಾನ ಸುದ್ದಿ

ಇಂದು ಗುಲ್ಬರ್ಗ ಹೈಕೋರ್ಟ್ ಕಾಯಂ ಪೀಠ ಲೋಕಾರ್ಪಣೆ

Published On :

ಗುಲ್ಬರ್ಗ: ಹೈದರಾಬಾದ್-ಕರ್ನಾಟಕ ಭಾಗದ ಬಹುದಿನಗಳ ಕನಸಾಗಿರುವ ಗುಲ್ಬರ್ಗ ಹೈಕೋರ್ಟ್ ಕಾಯಂ ಪೀಠವು ಶನಿವಾರ ಲೋಕಾರ್ಪಣೆಗೊಳ್ಳಲಿದೆ.  ಬೆಳಗ್ಗೆ 11.30ಕ್ಕೆ ಸುಪ್ರೀಂ ಕೋರ್ಟ್ ನ್ಯಾ.ಗೋಪಾಲಗೌಡ ಕಾಯಂ ಪೀಠವನ್ನು ಉದ್ಘಾಟಸಲಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಗುಲ್ಬರ್ಗದಲ್ಲಿ 1980ರ ದಶಕದಿಂದಲೇ ಹೋರಾಟಗಳು ಸಾಗಿದ್ದವು. 1992ರಲ್ಲಿ ಆಗಿನ ಸಿಎಂ ಬಂಗಾರಪ್ಪ ಗುಲ್ಬರ್ಗ- ಧಾರವಾಡಗಳಲ್ಲಿ ಸಂಚಾರಿ ಪೀಠದ ಅಗತ್ಯತೆ ಸಾರಿ ನಿರ್ಣಯ ಕೈಗೊಂಡಾಗ ವಕೀಲರ ಹೋರಾಟ ಮೊಟ್ಟಮೊದಲ ಬಾರಿಗೆ ಸಾರ್ವಜನಿಕವಾಗಿ ಗಮನ ಸೆಳೆದಿತ್ತು. ಗುಲ್ಬರ್ಗ ಸಂಚಾರಿ ಪೀಠದ ಅವಶ್ಯಕತೆ ಬಗ್ಗೆ ಸರ್ಕಾರ ಹಾಗೂ ಹೈಕೋರ್ಟ್ ಪಕ್ಕಾ ಮನಗಂಡಿದ್ದು 2001ರಲ್ಲಿ. ಇದಾದ ನಂತರ ಮಹತ್ವದ ನಿರ್ಣಯಗಳು ಸರ್ಕಾರ ಹಾಗೂ ನ್ಯಾಯಾಂಗದ ಹಂತದಲ್ಲಿ ಕೈಗೊಳ್ಳಲ್ಪಟ್ಟವಲ್ಲದೆ 2008ರ ಜುಲೈ 7ರಂದು ಗುಲ್ಬರ್ಗ ಸಂಚಾರಿ ಪೀಠ ಕಾರ್ಯಾರಂಭ ಮಾಡುವುದರೊಂದಿಗೆ ಈ ಭಾಗದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿತ್ತು. ಇದೀಗ ಸಂಚಾರಿ ಪೀಠಕ್ಕೆ ಪೂರ್ಣಪೀಠದ ಮಾನ- ಸಮ್ಮಾನ ದೊರಕಿದೆ. ಕೇಂದ್ರ ಸರ್ಕಾರದ ಸಂಪುಟ ಸಭೆ ಒಪ್ಪಿಗೆ ನೀಡಿದ ನಂತರ ರಾಷ್ಟ್ರಪತಿ ಕಾಯಂ ಪೀಠದ ಸಂಪುಟ ನಿರ್ಣಯಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.