ಪ್ರಧಾನ ಸುದ್ದಿ

ಹುಳು ಮಿಶ್ರಿತ ಅಕ್ಕಿ ನೋಡಿ ಅಧಿಕಾರಿಗಳೇ ತಬ್ಬಿಬ್ಬು!

Published On :

ಉಪ್ಪಿನ ಬೆಟಗೇರಿ (ಧಾರವಾಡ): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಹಳ್ಳ ಹಿಡಿದಿದ್ದು, ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಅಕ್ಕಿಯ ಗುಣಮಟ್ಟದ ಪರಿಶೀಲನೆಗೆ ಬಂದ ಆಹಾರ ಇಲಾಖೆ ಅಧಿಕಾರಿಗಳೇ ತಬ್ಬಿಬ್ಬಾದ ಘಟನೆ ನಡೆಯಿತು.
'ಬಡವರ ಅಗ್ಗದ ಅಕ್ಕಿಗೆ ಹುಳು ಭಾಗ್ಯ' ಎಂಬ ಶೀರ್ಷಿಕೆ ಅಡಿ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವಿಶೇಷ ವರದಿ ಗಮನಿಸಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕಲ್ಲನಗೌಡರ, ಆಹಾರ ನಿರೀಕ್ಷಕ ಎಸ್.ಜೆ. ಹಿರೇಮಠ, ಇಲಾಖೆ ಅಧಿಕಾರಿಗಳಾದ ಎಂ.ಜಿ. ಹಳಪೇಟಿ, ಪಿ.ಎಸ್. ಮ್ಯಾಗೇರಿ ಗುರುವಾರ ಗ್ರಾಮದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಅಕ್ಕಿ ಗುಣಮಟ್ಟ ಪರೀಕ್ಷಿಸಿದರು.
ನ್ಯಾಯಬೆಲೆ ಅಂಗಡಿಗಳ ಗೋದಾಮಿನಲ್ಲಿದ್ದ ಅಕ್ಕಿಯ ಚೀಲಗಳನ್ನು ನೆಲಕ್ಕೆ ಸುರಿಯುತ್ತಿದ್ದಂತೆ ಗಂಟುಗಂಟಾದ ಹುಳು ಮಿಶ್ರಿತ ಅಕ್ಕಿ ಕಂಡರು. ಚೀಲದ ಒಳಭಾಗವಂತೂ ಹುಳು ಮಿಶ್ರಿತ ಗಂಟಿಕ್ಕಿದ ಅಕ್ಕಿಯು ದಪ್ಪನೆ ಪದರಿನಿಂದ ಮೆತ್ತಿಕೊಂಡಿತ್ತು. ಏನು ಹೇಳಬೇಕೆಂದು ತೋಚದಾದರು. ಗ್ರಾಮಸ್ಥರು ಆಕ್ರೋಶಕ್ಕೆ ಸ್ಪಂದಿಸಿದ ಅಧಿಕಾರಿಗಳು ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಧಾರವಾಡ ಜಿಲ್ಲೆಯ ಕೆಲವು ಕಡೆ ಕಳಪೆ ಗುಣಮಟ್ಟದ, ಹುಳು ಮಿಶ್ರಿತ ಅಕ್ಕಿ ವಿತರಣೆಯಾದ ಬಗ್ಗೆ 'ಕನ್ನಡಪ್ರಭ'ದಿಂದ ಗೊತ್ತಾಯಿತು. ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
- ದಿನೇಶ ಗುಂಡೂರಾವ್,
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.