ಆಗಸ್ಟಾ ಹಗರಣ ಮಾಹಿತಿ ನೀಡಲ್ಲ

ನವದೆಹಲಿ: ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಸಂಬಂಧಿಸಿ ಭಾರತಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಡೀಲ್ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕೆಂಬ ಭಾರತದ ಮನವಿಯನ್ನು ಇಟಲಿ ನ್ಯಾಯಾಲಯ ಶನಿವಾರ ತಳ್ಳಿಹಾಕಿದೆ. ಹಗರಣ ಕುರಿತು ಮಾಹಿತಿ ನೀಡಲು ಗೌಪ್ಯತೆ ಕಾನೂನು ಅಡ್ಡಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟನೆ ನೀಡಿದೆ.
ಫಿನ್ಮೆಕಾನಿಕ ಸಂಸ್ಥೆಯ ಮುಖ್ಯಸ್ಥ ಗಿಸೆಪ್ಪಿ ಬಂಧನದ ಬಳಿಕ ರೋಮ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಒದಗಿಸುವಂತೆ ಇಟಲಿಯನ್ನು ಕೋರಿತ್ತು.
ಅದರಂತೆ ದೂತಾವಾಸ ಕಚೇರಿಗೆ ಪತ್ರಬರೆದಿರುವ ನ್ಯಾಯಾಧೀಶ ಬುಸ್ಟೋ ಅರ್ಸಿಝಿಯೋ ಲುಕಾ ಲಬಯಾನ್ಕ, ಸದ್ಯ ಭಾರತದ ಬೇಡಿಕೆಯನ್ನು ಮನ್ನಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹಗರಣದ ಕುರಿತ ತನಿಖೆ ಪ್ರಾಥಮಿಕ ಹಂತದಲ್ಲಿದೆ.
ಅಪರಾಧಸಂಹಿತೆಯ 329ನೇ ವಿಧಿ ಪ್ರಕಾರ ಈ ಕುರಿತ ಮಾಹಿತಿಯನ್ನು ನೀಡುವುದು ಅಸಾಧ್ಯ. ಕೇವಲ ವಾದಿ ಮತ್ತು ಪ್ರತಿವಾದಿಗಳು ಮಾತ್ರ ತಮ್ಮ ವಕೀಲರ ಮೂಲಕ ಈ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಗೌಪ್ಯತೆ ಅಡ್ಡಿ ನಿವಾರಣೆಯಾದ ಬಳಿಕ ಭಾರತ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ನ್ಯಾಯಾಲಯ ಅದನ್ನು ಪರಿಶೀಲಿಸಲಿದೆ ಎಂದು ಅವರು ಹೇಳಿದ್ದಾರೆ.
ಒಪ್ಪಂದ ರದ್ದಾಗಿಲ್ಲ ಆಗಸ್ಟಾ ವೆಸ್ಟ್ಲ್ಯಾಂಡ್
ಭಾರತ ಸರ್ಕಾರ ಒಪ್ಪಂದವನ್ನು ರದ್ದುಮಾಡುವುದಾಗಿ ತಿಳಿಸಿಲ್ಲ. ಬದಲಾಗಿ ಕೆಲ ವಿವರಣೆ ಕೇಳಿದೆ. ಅದನ್ನು ನಾವು ಏಳು ದಿನಗಳೊಳಗೆ ಕಳುಹಿಸಿಕೊಡುತ್ತೇವೆ ಎಂದು ಆಗಸ್ಟಾ ವೆಸ್ಟ್ಲ್ಯಾಂಡ್ ಸ್ಪಷ್ಪಪಡಿಸಿದೆ. ಲಂಚದ ಆರೋಪದ ಹಿನ್ನೆಲೆಯಲ್ಲಿ 3600 ಕೋಟಿ ಡೀಲ್ ಅನ್ನು ಯಾಕೆ ರದ್ದುಮಾಡಬಾರದು ಎಂದು ರಕ್ಷಣಾ ಸಚಿವಾಲಯ ಶುಕ್ರವಾರವಷ್ಟೇ ಆಗಸ್ಟವೆಸ್ಟ್ಲ್ಯಾಂಡ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಒಪ್ಪಂದ ರದ್ದಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ತಮಗಿದೆ ಎಂದು ಸಂಸ್ಥೆ ತಿಳಿಸಿದೆ.
ಭಾರತ ಸರ್ಕಾರ ಒಪ್ಪಂದವನ್ನು ರದ್ದುಮಾಡುವುದಾಗಿ ತಿಳಿಸಿಲ್ಲ. ಬದಲಾಗಿ ಕೆಲ ವಿವರಣೆ ಕೇಳಿದೆ. ಅದನ್ನು ನಾವು ಏಳು ದಿನಗಳೊಳಗೆ ಕಳುಹಿಸಿಕೊಡುತ್ತೇವೆ ಎಂದು ಆಗಸ್ಟಾ ವೆಸ್ಟ್ಲ್ಯಾಂಡ್ ಸ್ಪಷ್ಪಪಡಿಸಿದೆ. ಲಂಚದ ಆರೋಪದ ಹಿನ್ನೆಲೆಯಲ್ಲಿ 3600 ಕೋಟಿ ಡೀಲ್ ಅನ್ನು ಯಾಕೆ ರದ್ದುಮಾಡಬಾರದು ಎಂದು ರಕ್ಷಣಾ ಸಚಿವಾಲಯ ಶುಕ್ರವಾರವಷ್ಟೇ ಆಗಸ್ಟವೆಸ್ಟ್ಲ್ಯಾಂಡ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಒಪ್ಪಂದ ರದ್ದಾಗಲಿಕ್ಕಿಲ್ಲ ಎನ್ನುವ ವಿಶ್ವಾಸ ತಮಗಿದೆ ಎಂದು ಸಂಸ್ಥೆ ತಿಳಿಸಿದೆ.
ತ್ಯಾಗಿ ಕುಟುಂಬದ ಪರಿಚಯವಿಲ್ಲ
ರಕ್ಷಣಾ ಒಪ್ಪಂದದ ಪ್ರಮುಖ ಸೂತ್ರದಾರ ಫಿನ್ಮೆಕಾನಿಕ ಸಂಸ್ಥೆಯ ಮಾಜಿ ಸಿಇಒ ಗಿಸೆಪ್ಪಿ ಅವರು ತಮಗೂ ನಿವೃತ್ತ ಏರ್ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ ಕುಟುಂಬಕ್ಕೂ ಪರಿಚಯವೇ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ತ್ಯಾಗಿ ಕುಟುಂಬವನ್ನು ಭೇಟಿಯೇ ಆಗಿಲ್ಲ ಎಂದು ವಿಚಾರಣೆ ವೇಳೆ ಅವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿವಿಐಪಿ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಅಂತಿಮಗೊಳಿಸಿದ್ದು, ಒಪ್ಪಂದಕ್ಕೆ ಸಹಿಹಾಕಿದ್ದು, ಲಂಚ ಪಡೆದದ್ದು ಯಾರು? ಇಟಲಿಯ ಚಾರ್ಜ್ಶೀಟ್ 72 ಲಕ್ಷವನ್ನು 'ಕುಟುಂಬ'ವೊಂದಕ್ಕೆ ಪಾವತಿಸಲಾಗಿದೆ ಎಂದು ಹೇಳುತ್ತಿದೆ. ಹಾಗಿದ್ದರೆ ಆ 'ಕುಟುಂಬ' ಯಾವುದು ಎನ್ನುವುದನ್ನು ಇಡೀ ದೇಶ ತಿಳಿಯಬಯಸುತ್ತದೆ.
- ಪ್ರಕಾಶ್ ಜಾವಡೇಕರ್, ಬಿಜೆಪಿ ವಕ್ತಾರ
ಮಧ್ಯವರ್ತಿಗಳು ಮಾಫಿ ಸಾಕ್ಷಿ ಆಗುವ ಸಾಧ್ಯತೆ
ಭಾರತ ಮತ್ತು ಇಟಲಿಯಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ಹೆಲಿಕಾಪ್ಟರ್ ಪೂರೈಕೆ ಹಗರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಗಿಡೋ ಹಷ್ಕೆ ಮತ್ತು ಕ್ರಿಶ್ಚಿಯನ್ ಮೆಕೆಲ್ ಮಾಫಿ ಸಾಕ್ಷಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಅವರು ಈ ನಿಟ್ಟಿನಲ್ಲಿ ಇಟಲಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಈ ಇಬ್ಬರಿಂದ ಆಗಸ್ಟಾ ವೆಸ್ಟ್ಲ್ಯಾಂಡ್ ಡೀಲ್ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ನಡೆಯಲಿರುವ ಇನ್ನಷ್ಟು ಅಂತಾರಾಷ್ಟ್ರೀಯ ರಕ್ಷಣಾ ಒಪ್ಪಂದಗಳ ಕುರಿತೂ ಮಾಹಿತಿ ಸಿಗಲಿದೆ ಎನ್ನುವ ವಿಶ್ವಾಸ ಇಟಲಿಗಿದೆ. ಅಲ್ಲದೆ, ಈ ಪ್ರಕರಣ ಇಂಗ್ಲೆಂಡ್, ಸ್ವಿಜರ್ಲೆಂಡ್ ಮತ್ತು ದುಬೈವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


