ಆಹಾರಕ್ಕೆ ಸುಗ್ರೀವಾಜ್ಞೆ

ನವದೆಹಲಿ: ಸೋನಿಯಾ ಗಾಂಧಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಆಹಾರ ಭದ್ರತಾ ಕಾಯ್ದೆ ಜಾರಿಗೆ ಯುಪಿಎ ಸರ್ಕಾರ ಬುದ್ಧಿವಂತಿಕೆಯ ಕ್ರಮ ಅನುಸರಿಸಿದೆ. ಬುಧವಾರ ನಡೆದ ಕೇಂದ್ರ ಸಂಪುಟ ಸಭೆ ಯೋಜನೆ ಅನುಷ್ಠಾನಕ್ಕೆ ಸುಗ್ರೀವಾಜ್ಞೆ ತರುವ ಬಗ್ಗೆ ಅನುಮೋದನೆ ನೀಡಿತು. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳ ವಿಧಾನಸಭೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮತಗಳಿಕೆಯ ಲೆಕ್ಕಾಚಾರದಿಂದಲೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಕರಡು ಪ್ರತಿಯನ್ನು ಗುರುವಾರ ರಾಷ್ಟ್ರಪತಿ ಪ್ರಣಬ್ಗೆ ಸಲ್ಲಿಸಲಾಗುತ್ತದೆ.
ಏನೇನು?
ಪ್ರತಿ ಕುಟುಂಬಕ್ಕೆ 5 ಕಿಲೋ ಅಕ್ಕಿ, ಗೋದಿ ಮತ್ತು ಬೇಳೆ ಕಾಳುಗಳು
ದರವೆಷ್ಟು?
ಪ್ರತಿ ಕಿಲೋ ಅಕ್ಕಿಗೆ 3, 2 ಗೋಧಿ ಮತ್ತು 1 ಬೇಳೆ ಕಾಳುಗಳು
ಯಾವಾಗ ಜಾರಿ?
- ದೇಶಾದ್ಯಂತ ಯೋಜನೆ ಜಾರಿಗೊಳ್ಳಲು 6 ತಿಂಗಳು ಬೇಕು
- ವಿವಿಧ ರಾಜ್ಯಗಳು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ ಬಳಿಕ ಆಗಸ್ಟ್ನಿಂದ ಜಾರಿ.
ಎಷ್ಟು ವೆಚ್ಚ?
- ಯೋಜನೆ ಜಾರಿಯ ಮೊದಲ ವರ್ಷವೇ ಕೇಂದ್ರ ಬೊಕ್ಕಸಕ್ಕೆ 1.3 ಲಕ್ಷ ಕೋಟಿ ಹೊರೆ. ಈ ಮೊತ್ತದಲ್ಲಿ ಇತರ ಖರ್ಚುಗಳು ಸೇರಿಲ್ಲ. ಒಟ್ಟಾರೆ ಲೆಕ್ಕಾಚಾರ ಪ್ರಕಾರ ಒಟ್ಟು ರು. 2 ಲಕ್ಷ ಕೋಟಿ ಯೋಜನೆ ಜಾರಿಗೆ ಬೇಕು.
- ಸದ್ಯ ಕೇಂದ್ರ ಸರ್ಕಾರ ಆಹಾರ ಸಬ್ಸಿಡಿಗಾಗಿ ಮಾಡುತ್ತಿರುವ ವೆಚ್ಚ 67, 310 ಕೋಟಿ
- ಸುಗ್ರೀವಾಜ್ಞೆ ಜಾರಿಯಾದ ಬಳಿಕ ಬೊಕ್ಕಸಕ್ಕೆ ತಗಲುವ ಹೆಚ್ಚುವರಿ ವೆಚ್ಚ ರು. 30,000 ಕೋಟಿ
ಉದ್ದೇಶವೇನು?
- ದೇಶದ 3/2 ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರ ಒದಗಿಸುವುದು
- ಆದ್ಯತಾ ವರ್ಗದಲ್ಲಿರುವ ಪ್ರತಿ ಕುಟುಂಬದ ವ್ಯಕ್ತಿಗೆ ಪ್ರತಿ ತಿಂಗಳು 7 ಕೆಜಿ ಆಹಾರ
- ಜನರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿ ಹಸಿವಿನಿಂದ ಪಾರು ಮಾಡುವುದು.
ಸುಗ್ರೀವಾಜ್ಞೆ ಅವಧಿ
ಸುಗ್ರೀವಾಜ್ಞೆ ಜಾರಿಯಾದ 6 ವಾರದ ಅವಧಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಒಂದರಷ್ಟು ಸರಳ ಬಹುಮತದಿಂದ ಅಂಗೀಕಾರವಾಗಬೇಕು.
ಆಹಾರ ಭದ್ರತೆ ಎಂದರೇನು?
ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭೌತಿಕ, ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆ ನಡೆಸುವ ಹಕ್ಕು ಇರುತ್ತದೆ. ಅದರಂತೆ ಉತ್ತಮ ಹಾಗೂ ಆರೋಗ್ಯವಂತ ಜೀವನಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ.
ಯಾರಿಗೆ ಸಿಗುತ್ತದೆ?
- ಒಟ್ಟು 81 ಕೋಟಿ ಜನರಿಗೆ ಆಹಾರ ನೀಡಿಕೆ
- ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ 35 ಕೆಜಿಯಷ್ಟು ಆಹಾರ ಧಾನ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


