ಬಂದೂಕಿನ ಗುಂಡು ನನ್ನನ್ನು ಸುಮ್ಮನಾಗಿಸಲಿಲ್ಲ: ಮಲಾಲ
ವಿಶ್ವಸಂಸ್ಥೆ: ಬಂದೂಕಿನಿಂದ ಹೊರಬಂದ ಗುಂಡು ನಮ್ಮನ್ನು ಸುಮ್ಮನಿರಿಸಬಹುದೆಂದು ತಾಲಿಬಾನಿಗಳು ನಂಬಿದ್ದರು. ಆದರೆ ಅವರ ಯೋಚನೆ ವಿಫಲವಾಯಿತು...!
ಇದು ತಾಲಿಬಾನಿಗಳ ಗುಂಡೇಟಿಗೆ ತುತ್ತಾಗಿ, ಬದುಕಿಬಂದ ಧೈರ್ಯವಂತ ಬಾಲಕಿ ಮಲಾಲಾ ಯೂಸುಫ್ಝಾಯ್ ಅವರ ಮಾತು.
16ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಮಲಾಲ, ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಕಲಿಯಬೇಕು ಎಂಬ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜು.12 ಅನ್ನು ಮಲಾಲ ದಿನವೆಂದು ಕರೆದು ಆಕೆಗೆ ಗೌರವ ನೀಡಿತು.
ಭಯೋತ್ಪಾದಕರು ನನ್ನ ಗುರಿ ಮತ್ತು ಆಕಾಂಕ್ಷೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದರು. ಆದರೆ ನನ್ನಲ್ಲಿ ಏನನ್ನೂ ಬದಲಾಯಿಸಲು ಆಗಲಿಲ್ಲ. ಬದಲಾಗಿ, ನನ್ನಲ್ಲಿದ್ದ ದೌರ್ಬಲ್ಯ, ಭಯ ಮತ್ತು ಹತಾಶಮನೋಭಾವ ಹೋಗಿಸುವಲ್ಲಿ ನೆರವಾದರು. ಒಂದು ಮಗು, ಒಬ್ಬ ಶಿಕ್ಷಕ, ಒಂದು ಪುಸ್ತಕ ಮತ್ತು ಒಂದು ಪೆನ್ ಇಡೀ ಜಗತ್ತನ್ನೇ ಬದಲಾಯಿಸಬಲ್ಲದು. ಭಯೋತ್ಪಾದನೆ ಸೇರಿದಂತೆ ಇಂದಿನ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯಲ್ಲಿ ಸೇರಿದ್ದ ಹಲವಾರು ರಾಷ್ಟ್ರಗಳ ಪ್ರತಿನಿಧಿಗಳ ಪಾಲಿಗೆ ಕಣ್ಮಣಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

