ಅನ್ನಭಾಗ್ಯ ಅಕ್ಕಿ ಬೇಕಾದ್ರೆ ಸೋಪ್ ತಗೊಳ್ಳಿ!
ದಾವಣಗೆರೆ: ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಆರಂಭಗೊಂಡು ಇನ್ನೂ 3-4 ದಿನಗಳೂ ಆಗಿಲ್ಲ. ಆಗಲೇ ಯೋಜನೆಯಡಿ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅಕ್ಕಿ ಪಡೆಯಲು 1 ಜತೆ ಹೆಚ್ಚುವರಿಯಾಗಿ 30 ಪೈಸೆ ಸಂಗ್ರಹಿಸಲು ಮುಂದಾಗಿದ್ದು, ಸೋಪ್ ಖರೀದಿ ಕಡ್ಡಾಯವೆಂಬ ಲಿಂಕ್ ಪದ್ಧತಿ ಹೇರಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರ ಈ ವರ್ತನೆ ಖಂಡಿಸಿ ಸಾರ್ವಜನಿಕರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆಯೂ ನಗರದಲ್ಲಿ ಶನಿವಾರ ನಡೆಯಿತು. ನಗರದ ಬೇತೂರು ರಸ್ತೆಯ ಅರಳೀಮರ ವೃತ್ತದ ಬಳಿ ಭಾರತ್ ಮೈನ್ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಗೆ ನಿಗದಿತ ದರ ಕೆ.ಜಿ.ಗೆ 1ಕ್ಕೆ ಹೆಚ್ಚುವರಿಯಾಗಿ 30 ಪೈಸೆ ಪಡೆಯಲಾಗಿದೆ. ಜತೆಗೆ ಸೋಪ್ ಖರೀದಿ ಕಡ್ಡಾಯ ಮಾಡಿರುವುದಕ್ಕೆ ಪಡಿತರದಾರರು ಆಕ್ಷೇಪ ವ್ಯಕ್ತಪಡಿಸಿದರು.
ಸೋಪ್ ಕಡ್ಡಾಯ: 50 ಕೊಟ್ಟರೆ 1.30ನಂತೆ 30 ಕೆ.ಜಿ. ಅಕ್ಕಿ ಜತೆಗೆ ಬಲವಂತವಾಗಿ 10 ಮೌಲ್ಯದ ಒಂದು ಸೋಪು ನೀಡುತ್ತಿರುವ ವಿರುದ್ಧ ನಡೆಸಿದ ಪ್ರತಿಭಟನೆಗೆ ಸತ್ಯ ಮೇವ ಜಯತೆ ಹಿತಾಸಕ್ತಿ ವೇದಿಕೆ ಅಧ್ಯಕ್ಷ ಆಜಾದ್ ಇಸಾಕ್ ಹಾಗೂ ಇತರರು ಬೆಂಬಲ ವ್ಯಕ್ತಪಡಿಸಿದರು.
ಅನ್ನಭಾಗ್ಯವನ್ನೇ ಹಾದಿ ತಪ್ಪಿಸುವ ಕೆಲಸಕ್ಕೆ ಮುಂದಾದ ಸೊಸೈಟಿ ಮಾಲೀಕರ ವರ್ತನೆಯನ್ನು ಖಂಡಿಸಲಾಯಿತು. ಕೆ.ಜಿ. ಅಕ್ಕಿಗೆ 1ಕ್ಕಿಂತ ನಯಾ ಪೈಸೆಯನ್ನೂ ಹೆಚ್ಚಿಗೆ ಪಡೆಯುವಂತಿಲ್ಲ. ಈ ಯೋಜನೆಯಡಿ ಸೋಪನ್ನು ಕಡ್ಡಾಯ ಖರೀದಿಸಬೇಕೆಂಬ ಷರತ್ತು ಕಾನೂನು ಬಾಹಿರ ಎಂದು ಆಕ್ಷೇಪಿಸಿದರು.
ಕ್ರಮಕ್ಕೆ ಆಗ್ರಹ: ಕೆಲವು ಪಡಿತರ ಅಂಗಡಿಗಳಲ್ಲಿ ಧಾನ್ಯ, ಕಾಳನ್ನು ದುರ್ಬಳಕೆ ಮಾಡಿ, ಜನರಿಗೆ ವಂಚಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ಕಿಗೆ ಸೋಪ್ ಲಿಂಕ್ ಮಾಡುವ, 1ಕ್ಕಿಂತ ಹೆಚ್ಚು ಹಣ ಪಡೆಯುವ ಸೊಸೈಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

