ಪ್ರಧಾನ ಸುದ್ದಿ

ದಕ್ಷಿಣ ರಾಜ್ಯಗಳಿಗೆ ಶಾಕ್!

Published On :

ನವದೆಹಲಿ: ಶೀಘ್ರದಲ್ಲೇ ವಿದ್ಯುತ್ ಶಾಕ್ ಎದುರಿಸಲು ಸಿದ್ಧರಾಗಿ!
ಹೌದು. ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳು 2013-14ನೇ ಅವಧಿಯಲ್ಲಿ ಭಾರಿ ವಿದ್ಯುತ್ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗೆಂದು ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ) ಅಂದಾಜಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಈ ಬಾರಿ ವಿದ್ಯುತ್‌ಗಾಗಿ ಪರದಾಡಬೇಕಾಗುತ್ತದೆ. ಇಲ್ಲಿ ಒಟ್ಟಾರೆ ಶೇ.19.1ರಷ್ಟು ವಿದ್ಯುತ್ ಕೊರತೆ ಎದುರಾಗಲಿದೆ. 2012-13ನೇ ಅವಧಿಯಲ್ಲಿ ಈ ಪ್ರಮಾಣ ಶೇ.15.5 ಆಗಿತ್ತು ಎಂದೂ ಸಿಇಎ ಹೇಳಿದೆ.
ರಾಜ್ಯದಲ್ಲಿ ಶೇ.23.2 ಕೊರತೆ: ಇಂಧನದ ಕೊರತೆ, ಡಿಸ್ಕಾಂ(ವಿದ್ಯುತ್ ವಿತರಣ ಕಂಪನಿಗಳು)ಗಳ ದುರ್ಬಲ ಹಣಕಾಸು ಪರಿಸ್ಥಿತಿ ಹಾಗೂ ಪ್ರಸರಣ ಸಮಸ್ಯೆಗಳಿಂದಾಗಿ ದೇಶಾದ್ಯಂತ ವಿದ್ಯುತ್‌ನ ಭಾರಿ ಕೊರತೆ ಉಂಟಾಗಿದೆ. ಇದರ ಪರಿಣಾಮ 2013-14ರಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ, ಶೇ. 26.5ರಷ್ಟು ವಿದ್ಯುತ್ ಕೊರತೆ, ಕೇರಳದಲ್ಲಿ ಶೇ.24.8, ಕರ್ನಾಟಕದಲ್ಲಿ ಶೇ.23.2, ಆಂಧ್ರದಲ್ಲಿ ಶೇ.9.1 ಹಾಗೂ ಪುದುಚೇರಿಯಲ್ಲಿ ಶೇ.9.9ರಷ್ಟು ಕೊರತೆ ಉಂಟಾಗಲಿದೆ ಎಂದೂ ಸಿಇಎ ಅಂದಾಜು ಮಾಡಿದೆ. ಇದೇ ವೇಳೆ, ಖುಷಿಯ ವಿಚಾರವೆಂದರೆ ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ದೇಶದ ಪೂರ್ವಭಾಗದಲ್ಲಿ ಶೇ.10.2ರಷ್ಟು ಹೆಚ್ಚು ವಿದ್ಯುತ್ ಪೂರೈಕೆಯಾಗಲಿದೆ ಎಂದೂ ಸಿಇಎ ಹೇಳಿದೆ.
ಏಪ್ರಿಲ್‌ನಲ್ಲಿ ಹೆಚ್ಚು ಕೊರತೆ: ಏತನ್ಮಧ್ಯೆ, ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ದೇಶದಲ್ಲಿ ಸುಮಾರು 9 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಸಿಇಎ ಹೇಳಿದೆ. ಕಲ್ಲಿದ್ದಲಿನ ಅಭಾವವು ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.25, ಬಿಹಾರದಲ್ಲಿ ಶೇ.20.8 ಹಾಗೂ ಕರ್ನಾಟಕದಲ್ಲಿ ಶೇ.18.7ರಷ್ಟು ವಿದ್ಯುತ್ ಅಭಾವ ತಲೆದೋರಿತ್ತು ಎಂದೂ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.