ಪ್ರಧಾನ ಸುದ್ದಿ

ಬಡವರಿಗೆ ಅನುಕೂಲವಾಗುವ ಕೆಲಸ ಮಾಡಲು ಯಾರಿಗೂ ಕಾಯಬೇಕಿಲ್ಲ

Published On :

ಬೆಂಗಳೂರು: 'ಅಧಿಕಾರಕ್ಕೆ ಬಂದ ತಕ್ಷಣ ತಾವು ಘೋಷಿಸಿದ್ದು ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮ. ಬಡವರಿಗಾಗಿ ಮಾಡುವ ಕೆಲಸಕ್ಕೆ ಯಾರಿಗೂ ಕಾಯಬೇಕಾಗಿಲ್ಲ.'
ಅಧಿಕಾರಕ್ಕೆ ಬರುತ್ತಿದ್ದಂತೆ ತಾವು ಘೋಷಿಸಿದ ಕಾರ್ಯಕ್ರಮಗಳ ಕುರಿತು ಕೇಳಿ ಬಂದ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ತಾವು ಅಧಿಕಾರಕ್ಕೆ ಬಂದ ದಿನವೇ ಮಾಡಿರುವ ಘೋಷಣೆಗಳ ಬಗ್ಗೆ, 'ಸಿದ್ದರಾಮಯ್ಯ ಅವರು ಸಂಪುಟ ರಚನೆಗೂ ಮುಂಚೆ ಏಕಾಂಗಿಯಾಗಿ ತರಾತುರಿಯಲ್ಲಿ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ' ಎಂಬಿತ್ಯಾದಿ ಟೀಕೆಗಳು ಕೇಳಿ ಬಂದಿವೆ.
ಅಷ್ಟಕ್ಕೂ ತಾವು ಘೋಷಿಸಿದ್ದು ಬಡವರ ಕುರಿತಾದ ಕಾರ್ಯಕ್ರಮಗಳು. ಅವುಗಳಿಗಾಗಿ ಯಾರಿಗೂ ಕಾಯಬೇಕಾಗಿಲ್ಲ ಎಂದು ಅವರು ಟೀಕೆಗಳಿಗೆ ಪ್ರತಿಕ್ರಿಯಿಸಿದ್ದಲ್ಲದೇ, ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನಗರದಲ್ಲಿ ಗುರುವಾರ ಜಂಟಿಯಾಗಿ ಏರ್ಪಡಿಸಿದ್ದ 'ಪ್ರೊ.ಬಿ.ಕೃಷ್ಣಪ್ಪ ಅವರ 75ನೇ ಜನ್ಮ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದರು.
ದುರ್ಬಲ ವರ್ಗದವರಿಗೆ ರಕ್ಷಣೆ ನೀಡುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜತೆಗೆ, ಅವರ ಮೇಲೆ ಯಾರೂ ಅನ್ಯಾಯ ಎಸಗದಂತೆ ತಡೆಯಲಾಗುವುದು ಎಂದು ಭರವಸೆ ನೀಡಿದರು. ಬಡವರಿಗೆ ಕೆ.ಜಿ.ಗೆ 1 ರಂತೆ 30 ಕೆ.ಜಿ. ಅಕ್ಕಿ ನೀಡುವುದರಿಂದ ಸುಮಾರು 2.5 ಕೋಟಿ ಜನರಿಗೆ ಅನ್ನ ಸಿಗುವಂತಾಗಿದೆ ಎಂದರು.
ಕಂದಾಯ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಮಾತನಾಡಿ, ಶೋಷಿತರಿಗೆ ಸಮಾನತೆ ಹೇಳಿಕೆಯಾಗಿದೆ. ಅನುಭವಕ್ಕೆ ಸಿಗುತ್ತಿಲ್ಲ. ಅಂಬೇಡ್ಕರ್ ಅವರಿಗಿದ್ದಂತಹ ಹಠವನ್ನು ಪ್ರತೀ ದಲಿತರೂ ರೂಢಿಸಿಕೊಂಡು ತಮ್ಮ ಕನಸು ನನಸು ಮಾಡಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಸಚಿವ ಆಂಜನೇಯ ಅಸ್ಪೃಶ್ಯರನ್ನು ಮುಖ್ಯವಾಹಿನಿಗೆ ತರಲು ಅಹರ್ನಿಶಿ ಹೋರಾಡಿದ ಅಪ್ರತಿ ಮ ಹೋರಾಟಗಾರ ಪ್ರೊ.ಬಿ.ಕೃಷ್ಣಪ್ಪ ಎಂದರು.
ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಮಾತನಾಡಿ, ಪೌರಕಾರ್ಮಿಕರನ್ನು ಹೊರಗುತ್ತಿಗೆಯಿಂದ ಮುಕ್ತವಾಗಿಸಿ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟೀ ರುದ್ರಪ್ಪ ಹನಗವಾಡಿ, ಮ್ಯಾನೇಜಿಂಗ್ ಟ್ರಸ್ಟೀ ಇಂದಿರಾ ಕೃಷ್ಣಪ್ಪ, ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಮಿತಿ ಪದಾಧಿಕಾರಿಗಳಾದ ರಮೇಶ್ ಡಾಕುಳಗಿ, ಸುಂದರ ಮಾಸ್ತರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.