ಸಾಲ ಮರುಪಾವತಿಸಿದರೆ ಮಾತ್ರ ಜಾಮೀನು: ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಸಾಲ ಮರುಪಾವತಿ ಮಾಡದೆ ಜೈಲು ಸೇರಿರುವ ಉದ್ಯಮಿಗೆ ಪಡೆದಿರುವ ಸಾಲ ಮರುಪಾವತಿ ಮಾಡಿದ ನಂತರವಷ್ಟೇ ಜಾಮೀನು ನೀಡಲು ಸಾಧ್ಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವೆಂಕಟಾಚಲಪತಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಮುಂಬಯಿ ಮೂಲದ ವ್ಯಕ್ತಿಯೋರ್ವನಿಂದ 3.5 ಕೋಟಿ ಸಾಲ ಪಡೆದಿದ್ದ ವೆಂಕಟಾಚಲಪತಿ ಅದನ್ನು ಹಿಂದಿರುಗಿಸಿರಲಿಲ್ಲ. ಅಲ್ಲದೆ, ಅದನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೂಡ ಬಳಸಿಕೊಂಡಿರಲಿಲ್ಲ. ತಮಗೆ ಹಣ ಹಿಂದಿರುಗಿಸಿಲ್ಲ ಎಂದು ಸಾಲ ನೀಡಿದ ವ್ಯಕ್ತಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೆಂಕಟಾಚಲಪತಿಯನ್ನು ಬಂಧಿಸಿದ್ದರು.
ಜಾಮೀನು ಕೋರಿ ವೆಂಕಟಾಚಲಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ನೀವು ಹಣ ಪಡೆದಿದ್ದು ಸತ್ಯವೇ ಎಂದು ಪ್ರಶ್ನಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ವೆಂಕಟಾಚಲಪತಿ, ಅದನ್ನು ಹಿಂದಿರುಗಿಸುವ ಭರವಸೆ ನೀಡಿದರು.
ಇದನ್ನೊಪ್ಪದ ಪೀಠ, ಮೊದಲು ಹಣ ಪಾವತಿಸಿ ನಂತರ ಜಾಮೀನಿನ ಪ್ರಶ್ನೆ ಎಂದರು. ಅದಕ್ಕೆ ಅರ್ಜಿದಾರರು ಎಂಟು ತಿಂಗಳ ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಒಂದು ವಾರದಲ್ಲಿ ಸಾಲ ಮರುಪಾವತಿ ಕುರಿತು ಬ್ಯಾಂಕ್ ದಾಖಲೆಗಳನ್ನು ಒದಗಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

