ನಾಗಭೂಷಣ್ ನಿಧನ

ಬೆಂಗಳೂರು: ನಟ, ನಿರ್ದೇಶಕ, ಖ್ಯಾತ ಸಂಭಾಷಣೆಕಾರ ಕುಣಿಗಲ್ ನಾಗಭೂಷಣ್ ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗಷ್ಟೆ ಚೇತರಿಸಿಕೊಂಡಿದ್ದರು. ಆದರೆ, ಹೃದಯಾಘಾತಕ್ಕೀಡಾಗಿ ಅಸುನೀಗಿರುವುದು ಚಿತ್ರರಂಗಕ್ಕೆ ಆಘಾತದ ಜತೆಗೆ, ತುಂಬಲಾಗದ ನಷ್ಟ ಉಂಟು ಮಾಡಿದೆ. ಕನ್ನಡದ 250ಕ್ಕೂ ಅಧಿಕ ಚಲನಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ನೀಡಿರುವ ನಾಗಭೂಷಣ್ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
'ನಾಂದಿ'ಯೇ ನಾಂದಿ: ಎಸ್.ಲಕ್ಷ್ಮೀನಾರಾಯಣ್ ನಿರ್ದೇಶನದ 'ನಾಂದಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗುವ ಮೂಲಕ ನಾಗಭೂಷಣ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.
ತಮ್ಮ ಆರಂಭಿಕ ದಿನಗಳಲ್ಲಿ ಮೂರ್ನಾಲ್ಕು ಪಾಳಿಗಳಲ್ಲಿ ಕೆಲಸ ಮಾಡಿದ್ದ ಅವರು ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ಬಳಿಕ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು 'ಬಾಳು ಜೇನು' ಹಾಗೂ 'ಆಶೀರ್ವಾದ' ಚಿತ್ರಗಳನ್ನು ಸ್ವತಂತ್ರವಾಗಿ ನಿದೇರ್ಶಿಸಿದ್ದರು.
ಸಿಂಹ ಸಂಭಾಷಣೆ: 'ಸಿಂಹ ಜೋಡಿ' ಚಿತ್ರಕ್ಕೆ ಪ್ರಥಮ ಬಾರಿಗೆ ಸಂಭಾಷಣೆ ಬರೆದ ಅವರು ಆ ಮೂಲಕ ಸಂಭಾಷಣಾಕಾರರಾದರು. ಆ ಚಿತ್ರದ ಸಂಭಾಷಣೆಗೆ ಸಿಕ್ಕ ಜನಪ್ರಿಯತೆ ಹಾಗೂ ಯಶಸ್ಸಿನ ಪ್ರೋತ್ಸಾಹದಿಂದ ಪ್ರೇರೇಪಣೆಗೊಂಡ ಅವರು ಮುಂದೆ ಸಂಭಾಷಣಾಕಾರರಾಗಿಯೇ ಮುಂದುವರಿದು 250ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ನಡುವೆ ಸಾಕಷ್ಟು ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದರು.
ಕಾಲು ಕಳೆದುಕೊಂಡಿದ್ದರು: ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದ ನಾಗಭೂಷಣ್ ಅವರ ಕಾಲು ಗ್ಯಾಂಗ್ರಿನ್ಗೆ ಒಳಗಾಗಿದ್ದರಿಂದ ಅದನ್ನು ಕತ್ತರಿಸಲಾಗಿತ್ತು. ಇಳಿವಯಸ್ಸಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆ ಚಿತ್ರರಂಗದ ಕೆಲ ಗಣ್ಯರು ಧನಸಹಾಯ ಮಾಡಿ ಅವರಿಗೆ ನೈತಿಕ, ಆರ್ಥಿಕ ಬೆಂಬಲ ಸೂಚಿಸಿದ್ದರು. ಕಾಲು ಕಳೆದುಕೊಂಡಿದ್ದರೂ ಆರೋಗ್ಯದಲ್ಲಿಸ್ವಲ್ಪ ಚೇತರಿಸಿಕೊಂಡಿದ್ದರು. ಈನಡುವೆ ಹೃದಯಾಘಾತಕ್ಕೀಡಾಗಿ ಅಸುನೀಗಿದ್ದು, ಚಿತ್ರರಂಗ ಒಬ್ಬ ಬಹುಮುಖ ಪ್ರತಿಭೆ, ಸಕಲಕಲಾವಲ್ಲಭನನ್ನು ಕಳೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


