ಮೂಢನಂಬಿಕೆ ಕರಡು ರಚನೆ ತಂಡವೇ ಎಡವಟ್ಟು
ಬೆಂಗಳೂರು: ವಿವಾದಕ್ಕೀಡಾಗಿರುವ ಮತ್ತು ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿರುವ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡು ಸಿದ್ಧಪಡಿಸಿದ ತಂಡದ ತುಂಬ ಎಡಪಂಥೀಯರೇ ತುಂಬಿಕೊಂಡಿದ್ದು, ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ ಡಾ. ಎಸ್. ಜಾಫೆಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನಿನ ಕರಡು ರೂಪಿಸಲು ಚರ್ಚೆಗೆ ಕರೆದ ವ್ಯಕ್ತಿಗಳು, ಆಕರ ಗ್ರಂಥಗಳಾಗಿ ಬಳಸಿಕೊಂಡ ಬಹುತೇಕ ಪುಸ್ತಕಗಳು ಕೂಡ ಎಡಪಂಥೀಯರದ್ದೇ ಆಗಿದೆ. ಆಕರ ಗ್ರಂಥಗಳಲ್ಲಿ ಡಾ. ಎಂ. ಚಿದಾನಂದಮೂರ್ತಿ ಅವರ ಪುಸ್ತಕಗಳ ಹೆಸರೂ ಕಾಣಿಸಿಕೊಂಡಿರುವುದು ಅಚ್ಚರಿಯ ಸಂಗತಿ. ಹಾಗೆಯೇ ಲೋಹಿಯಾ ಅವರ ಪುಸ್ತಕವನ್ನೂ ಆಕರ ಗ್ರಂಥವನ್ನಾಗಿ ಬಳಸಲಾಗಿದೆ.
ಕರಡು ರೂಪಿಸಲು ಡಾ.ಕೆ. ಮರುಳಸಿದ್ದಪ್ಪ, ಡಾ. ಸಿದ್ದಲಿಂಗಯ್ಯ, ಡಾ. ಅರವಿಂದ ಮಾಲಗತ್ತಿ, ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘದ ಎ.ಎಸ್. ನಟರಾಜ್, ಪ್ರೊ. ನಗರಗೆರೆ ರಮೇಶ್, ಅಖಿಲಭಾರತ ಜನವಾದಿ ಸಂಘದ ಕೆ.ಎಸ್. ವಿಮಲಾ, ಬಿ.ಟಿ. ಲಲಿತಾ ನಾಯಕ್, ಬರಗೂರು ರಾಮಚಂದ್ರಪ್ಪ, ಜಿ. ರಾಜಶೇಖರ ಇದ್ದಾರೆ.
ಫಣಿರಾಜ, ಅಗ್ನಿ ಶ್ರೀಧರ್, ಗೌರಿ ಲಂಕೇಶ್, ಅಗ್ರಹಾರ ಕೃಷ್ಣಮೂರ್ತಿ, ಡಾ. ಸಿ.ಎಸ್. ದ್ವಾರಕಾನಾಥ, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ಎಲ್. ಹನುಮಂತಯ್ಯ, ರಹಮತ್ ತರೀಕೆರೆ, ಅಬ್ದುಲ್ ರೆಹಮಾನ್ ಪಾಷಾ, ಇಂದೂಧರ ಹೊನ್ನಾಪುರ, ಪ್ರೊ. ಜಿ.ಕೆ. ಗೋವಿಂದರಾವ್, ಮಾವಳ್ಳಿ ಶಂಕರ ಹೀಗೆ ಪಟ್ಟಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಿದ್ದಾರೆ. ಹೆಸರಾಂತ ಸಾಹಿತಿಗಳೂ ಇದ್ದಾರೆ. ಇವರನ್ನೆಲ್ಲ ಬಿಟ್ಟು ಕೇವಲ ಒಂದು ಗುಂಪಿಗೆ ಮಾತ್ರ ಪ್ರಾಶಸ್ತ್ಯ ನೀಡಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿದೆ.
ನಗರಿ ಬಾಬಯ್ಯ: ಖ್ಯಾತ ನಕ್ಸಲ್ ನಾಯಕ ಕೊಂಡಪಲ್ಲಿ ಸೀತಾರಾಮಯ್ಯ ಪೊಲೀಸರಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ್ದ ನಗರಿ ಬಾಬಯ್ಯ ಅವರು ಕೂಡ ಈ ಕರಡು ಸಿದ್ಧಪಡಿಸಿದ ವ್ಯಕ್ತಿಗಳಲ್ಲೊಬ್ಬರು. ಕೊಂಡಪಲ್ಲಿ ಸೀತಾರಾಮಯ್ಯ ಅವರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರಲು ಮತ್ತು ಚಿಕಿತ್ಸೆ ಪಡೆಯಲು ನಗರಿ ಬಾಬಯ್ಯ ಸಹಾಯ ಮಾಡಿದ್ದರು. ಈ ಬಗ್ಗೆ ಅವರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಇಂತಹ ವ್ಯಕ್ತಿಗಳಿಂದ ಸಲಹೆ ಪಡೆದು ಕಾನೂನು ರೂಪಿಸುವ ದೌರ್ಭಾಗ್ಯ ಸರ್ಕಾರಕ್ಕೇನಿದೆ ಎಂದು ಸಾರ್ವಜಿನಕರು ಪ್ರಶ್ನಿಸುವಂತಾಗಿದೆ. ಅಲ್ಲದೆ ಇಂತಹ ವ್ಯಕ್ತಿಗಳ ಸಹಾಯ ಪಡೆದು ಮಸೂದೆಯ ಕರಡು ರೂಪಿಸುವ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡಲು ಸರ್ಕಾರ ಮುಂದಾಗಿದೆ ಎಂಬುದನ್ನೂ ವಿಚಾರ ಮಾಡುವಂತಾಗಿದೆ.
ಜಾಫೆಟ್ ಯಾರು?: ಮಸೂದೆಯ ಕರಡು ಪ್ರತಿ ರೂಪಿಸುವಲ್ಲಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಡಾ.ಎಸ್. ಜಾಫೆಟ್ ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 10 ವರ್ಷದ ಹಿಂದೆ ಸೋಷಿಯಾಲಜಿ ಪ್ರಾಧ್ಯಾಪಕರಾಗಿ ರಾಷ್ಟ್ರೀಯ ಕಾನೂನು ಶಾಲೆ ಸೇರಿದ್ದರು. ನಂತರ ಕಾನೂನು ಪದವಿ ಪಡೆವರು. ಇವರು ದಲಿತ ಕ್ರಿಶ್ಚಿಯನ್. ವಿದೇಶಗಳ ಕಾಲೇಜಿನಲ್ಲೂ ಅತಿಥಿ ಉಪನ್ಯಾಸಕರಾಗಿದ್ದರು. ಈಗ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯ ಸೆಂಟರ್ ಫಾರ್ ಸೋಷಿಯಲ್ ಎಕ್ಸ್ಕ್ಲೂಷನ್ ವಿಭಾಗದಲ್ಲಿ ಫ್ಯಾಕಲ್ಟಿ ಕೋ- ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

