ಪ್ರಧಾನ ಸುದ್ದಿ

ಕೊಲೆ ಕಂಟಕದಿಂದ ಕಂಚಿ ಶ್ರೀಗಳು ಪಾರು

ಕೊಲೆ ಕಂಟಕದಿಂದ ಕಂಚಿ ಶ್ರೀಗಳು ಪಾರು
Published On :

ಪುದುಚೇರಿ: ಒಂಬತ್ತು ವರ್ಷಗಳ ಹಿಂದಿನ ಶಂಕರರಾಮನ್ ಹತ್ಯೆ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ಕಂಚೀಪುರಂ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಮತ್ತು ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳನ್ನು ಪುದುಚೇರಿ ನ್ಯಾಯಾಲಯ ಬುಧವಾರ ದೋಷಮುಕ್ತಗೊಳಿಸಿದೆ. ಸ್ವಾಮೀಜಿಗಳ ಜತೆಗೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 21 ಮಂದಿಯೂ ಖುಲಾಸೆಗೊಂಡಿದ್ದಾರೆ.
2004ರಲ್ಲಿ ನಡೆದ ವರದರಾಜ ಪೆರುಮಾಳ್ ದೇಗುಲದ ಮ್ಯಾನೇಜರ್ ಎ. ಶಂಕರರಾಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಂಚೀಮಠದ ಹಿರಿಯ ಮತ್ತು ಕಿರಿಯ ಸ್ವಾಮೀಜಿ ಸೇರಿ ಒಟ್ಟು 24 ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು(ಒಬ್ಬ ಆರೋಪಿ ವಿಚಾರಣೆ ವೇಳೆ ಕೊಲೆಗೀಡಾಗಿದ್ದ).
ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಜೆ. ಮುರುಗನ್ ಎಲ್ಲಾ 23 ಮಂದಿಯನ್ನು ಖುಲಾಸೆಗೊಳಿಸಿದ್ದಾರೆ. ಈ ಮೂಲಕ ಸ್ವಾಮೀಜಿ ನಿರಾಳರಾಗಿದ್ದಾರೆ.

ತೀರ್ಪಿನಿಂದ ಆಘಾತ
ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿ ಹತ್ಯೆಗೀಡಾದ ಶಂಕರರಾಮನ್ ಅವರ ಕುಟುಂಬ ಆಘಾತ ವ್ಯಕ್ತಪಡಿಸಿದೆ. ತೀರ್ಪಿನ ಪೂರ್ಣಪಾಠ ಪರಿಶೀಲಿಸಿದ ಬಳಿಕ ಮೇಲ್ಮನವಿ ಸಲ್ಲಿಸುವ ಕುರಿತು ನಿರ್ಧರಿಸಲಾಗುವುದು ಎಂದು ಪುತ್ರ ಆನಂದ್ ಶರ್ಮಾ ತಿಳಿಸಿದ್ದಾರೆ. ಈ ನಡುವೆ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಪುದುಚೇರಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸರ್ಕಾರ ಪರ ವಕೀಲ ತಿಳಿಸಿದ್ದಾರೆ.

ತಮಿಳುನಾಡಿಂದ ಪುದುಚೇರಿಗೆ ಪ್ರಕರಣ
ಶಂಕರರಾಮನ್ ಹತ್ಯೆ ಪ್ರಕರಣ ದೇಶಾದ್ಯಂತ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಜಯೇಂದ್ರ ಸರಸ್ವತಿ ಸ್ವಾಮೀಜಿ ಅರ್ಜಿ ಹಿನ್ನೆಲೆಯಲ್ಲಿ 2005ರಲ್ಲಿ ಚೆಂಗಲ್‌ಪೇಟೆ ಕೋರ್ಟ್‌ನಿಂದ ನೆರೆಯ ಪುದುಚೇರಿಗೆ ವರ್ಗಾಯಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.