ಪ್ರಧಾನ ಸುದ್ದಿ

ನಿವೇಶನ ದುರ್ಬಳಕೆ ಆರೋಪ ತಳ್ಳಿಹಾಕಿದ ಕೆ.ಸಿ. ಕೊಂಡಯ್ಯ

Published On :

ಬೆಂಗಳೂರು: ರಾಜೀವ್ ಗಾಂಧಿ ಸ್ಮಾರಕ ಟ್ರಸ್ಟ್ ನಿವೇಶನದ ದುರ್ಬಳಕೆ ಆರೋಪವನ್ನು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ತಳ್ಳಿಹಾಕಿದ್ದಾರೆ.
ರಾಜೀವ್ ಗಾಂಧಿ ಸ್ಮಾರಕ ಟ್ರಸ್ಟ್‌ಗಾಗಿ ಕಾನೂನು ರೀತಿ ನಿವೇಶನ ಪಡೆಯಲಾಗಿದೆ. ರಾಜ್ಯಸರ್ಕಾರದ ಶಿಫಾರಸ್ಸಿನ ಮೇರೆಗೆ ಟ್ರಸ್ಟ್‌ಗಾಗಿ ನಿವೇಶನ ಮಂಜೂರು ಮಾಡಲಾಗಿತ್ತೆ ಹೊರತು ಕಾಂಗ್ರೆಸ್ ಕಚೇರಿಗಾಗಿ ಯಾವುದೇ ನಿವೇಶನ ಬಳ್ಳಾರಿಯ ಜಿಲ್ಲಾಧಿಕಾರಿಗಳು ಮಂಜೂರು ಮಾಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
2014ರೊಳಗೆ ಕಟ್ಟಡ ಕಟ್ಟದಿದ್ದರೆ ನಿವೇಶನ ಮಂಜೂರಾತಿ ರದ್ದಾಗುವ ಸಂಭವವಿರುವುದರಿಂದ ತ್ವರಿತವಾಗಿ ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಮುಗಿಸಬೇಕಿದೆ. ಆದರೆ ಈ ಸತ್ಯ ಅರಿಯದೇ ಕೆಲವರು ತಮ್ಮ ರಾಜಕೀಯ ತೇಜೋವಧೆಗಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕಟ್ಟಡ ಮತ್ತು ನಿವೇಶನ ರಾಜೀವ್‌ಗಾಂಧಿ ಮೆಮೋರಿಯಲ್ ಟ್ರಸ್ಟ್‌ಗೆ ಸೇರಿದ್ದೇ ಹೊರತು ನನ್ನ ಮತ್ತು ನನ್ನ ಕುಟುಂಬಕ್ಕೆ ಸೇರಿಲ್ಲ ಎಂದರು. ಸದರಿ ಕಟ್ಟಡವನ್ನು ಟ್ರಸ್ಟ್ ಡೀಡ್‌ನಲ್ಲಿ ನಿಗದಿತ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಉದ್ದೇಶಗಳನ್ನು ಉಲ್ಲಂಘಿಸಿದ್ದಲ್ಲಿ ಸರ್ಕಾರ ನಿವೇಶನವನ್ನು ಹಿಂದಕ್ಕೆ ಪಡೆಯಲಿ. 2005ರಲ್ಲಿ ಎಂ.ವೈ.ಘೋರ್ಪಡೆ, ಅಲ್ಲಂ ವೀರಭದ್ರಪ್ಪ, ದಿವಾಕರ್ ಬಾಬು ಮತ್ತು ಸಿರಾಜ್‌ಶೇಖ್ ಟ್ರಸ್ಟ್ ನೋಂದಾಯಿಸಲು ಯಾವುದೇ ಆಸಕ್ತಿ ತೋರದ ಕಾರಣ ತಾವು ಮತ್ತು ತಮ್ಮ ಪತ್ನಿ ಕೆ.ಮೀನಾಕ್ಷಿ ಹಾಗೂ ಪುತ್ರ ಕೆ.ವಿ.ಪ್ರಸಾದ್ ಟ್ರಸ್ಟ್‌ಗೆ ಒಂದು ಲಕ್ಷ ಮೂಲಧನ ನೀಡಿ ನೋಂದಾಯಿಸಿಕೊಳ್ಳಲಾಯಿತು. ಇದರೊಂದಿಗೆ ಖ್ಯಾತ ಆರ್ಥಿಕ ತಜ್ಞ ಡಾ.ಡಿ.ಶೇಷಾದ್ರಿ, ವಾಣಿಜ್ಯೋದ್ಯಮಿ ಸಿ.ಚಂದ್ರಶೇಖರ್, ಆದರ್ಶ ಕೃಷಿಕ ಬಿ.ಎಸ್.ಪ್ರಕಾಶ್‌ರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ನಿರಂಜನನಾಯ್ಡು ಅವರೂ ಸಹ ಟ್ರಸ್ಟ್‌ನ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು. ನನ್ನ ವರ್ಚಸ್ಸನ್ನು ಕುಂದಿಸಲು ಮತ್ತು ತೇಜೋವಧೆ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಂಡಿಲ್ಲ ಎಂದರು.
ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುವುದಾಗಿ ಮತ್ತು ಸಂಬಂಧಪಟ್ಟ ದಾಖಲೆ ಅವರಿಗೆ ಒಪ್ಪಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.