ಪ್ರಧಾನ ಸುದ್ದಿ

ಕೊಪ್ಪಳದಲ್ಲಿ ನಕಲಿ ವೈದ್ಯರ ಮೇಲೆ ದಾಳಿ: ಇಬ್ಬರು ಪತ್ತೆ

Published On :

ಕೊಪ್ಪಳ: ಆಯುಷ್ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ಎಸ್.ಆರ್. ಹಿರೇಮಠ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಬಸಪ್ಪ ವಾಲಿಕಾರ ಹಾಗೂ ಡಾ. ಬಸವರಾಜ ಕುಂಬಾರ್ ನೇತೃತ್ವದ ತಂಡ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ.
ಭಾಗ್ಯನಗರದಲ್ಲಿ ನಕಲಿ ದಾಖಲೆಯ ಆಧಾರವನ್ನಿಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರ ಅಶೋಕ ರಾಂಪುರ, ಮೂಲವ್ಯಾದಿ ಔಷಧ ನೀಡುತ್ತೇವೆ ಎಂದು ಕ್ಲಿನಿಕ್ ಪ್ರಾರಂಭ ಮಾಡಿಕೊಂಡಿದ್ದ ನಕಲಿ ವೈದ್ಯ ಎಸ್.ಬಿ. ಸೈಯದ್ ಅವರ ಕ್ಲಿನಿಕ್ ಮೇಲೆ ಆಯುಷ್ ವೈದ್ಯರ ತಂಡ ಗುರುವಾರ ಬೆಳಗಿನ ವೇಳೆ ಏಕಾಕಾಕಿ ದಾಳಿ ಮಾಡಿತು. ದಾಳಿ ವಿಷಯ ತಿಳಿದ ಈ ಇಬ್ಬರು ನಕಲಿ ವೈದ್ಯರು ಕಕ್ಕಾಬಿಕ್ಕಿಯಾಗಿದ್ದು, ಅಲ್ಲದೇ ಕ್ಲಿನಿಕ್‌ನಲ್ಲಿಯೇ ಸಿಕ್ಕಿದ್ದಾರೆ. ಈ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು ಎಂದು ದಾಳಿಯ ನೇತೃತ್ವದ ಮುಖ್ಯಸ್ಥ ವೈದ್ಯರು ತಿಳಿಸಿದ್ದಾರೆ.

ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲು: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಮಹಾದೇವಯ್ಯಸ್ವಾಮಿ ಅವರಿಗೆ ಸ್ಥಳೀಯ ಜನರ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್‌ಐ ವೀರಣ್ಣಾ ಮಾಗಿ, ಸ್ಥಳೀಯ ವೈದ್ಯಾಧಿಕಾರಿ ಗುರುರಾಜ ದೇಸಾಯಿ ನೇತೃತ್ವದಲ್ಲಿ ಕನಕಗಿರಿ ಪಟ್ಟಣದ ಪರವಾನಗಿ ಇಲ್ಲದ ವೈದ್ಯರಾದ ಮೌಲಾಹುಸೇನ ಹಾಗೂ ದೇವರಾಜ ಬುಧವಾರ ಅವರ ಕ್ಲಿನಿಕ್ ಮೇಲೆ ಏಕಾಏಕಿ ದಾಳಿ ನಡೆಸಿ ಬೀಗ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.