ಪತ್ರಕರ್ತಗೆ ಮಾರಣಾಂತಿಕ ಹಲ್ಲೆ: ಸುದ್ದಿಗಾರರ ಪ್ರತಿಭಟನೆ
ವಿಟ್ಲ: ಪತ್ರಕರ್ತ ವಿ.ಟಿ. ಪ್ರಸಾದ್ ಮೇಲೆ ಬುಧವಾರ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಬಂಟ್ವಾಳ, ಪುತ್ತೂರು, ವಿಟ್ಲ ಕಾರ್ಯನಿರತ ಪತ್ರಕರ್ತರು ಮತ್ತು ಸ್ಥಳೀಯ ನಾಗರಿಕರ ಆಶ್ರಯದಲ್ಲಿ ವಿಟ್ಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ತಕ್ಷಣ ಆರೋಪಿಗಳನ್ನು ಬಂಧಿಸಬೇಕು, ಪ್ರಕರಣ ತಿರುಚುವ ಪ್ರಯತ್ನ ನಡೆಸಿದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗಬಹುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಮಾತನಾಡಿ, ಸಮಾಜಮುಖಿ ಪತ್ರಕರ್ತರಿಗೆ ಜಾತಿ ನೆಪದಲ್ಲಿ ಸಂಘಟನೆ ಹಲ್ಲೆ ನಡೆಸಿದ್ದು ಖಂಡನೀಯ. ಬಡ ಮಹಿಳೆಗೆ ಮನೆ ಕಟ್ಟಿಸಿ ಕೊಡಿಸುವುದಕ್ಕೆ ಪ್ರಯತ್ನಿಸಿದ ಮತ್ತು ಅದಕ್ಕಾಗಿ ಪತ್ರಿಕೆಗಳ ಮೂಲಕ ಲೇಖನ ಬರೆದು ಸಹಾಯ ಯಾಚಿಸಿದ ಪ್ರಸಾದ್‌ಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸ್ ಇಲಾಖೆ ಇನ್ನೂ ಬಂಧಿಸಿಲ್ಲ ಎಂದು ಖಂಡಿಸಿದರು.
ಪತ್ರಕರ್ತ ಸಂತೋಷ್ ಮಾತನಾಡಿ, ಪತ್ರಕರ್ತರನ್ನು ರಕ್ಷಿಸಲಾಗದ ಮತ್ತು ಆರೋಪಿಗಳನ್ನು ರಕ್ಷಿಸುವ ಕಾಣದ ಕೈಗಳ ಬೆಂಬಲ ನೀಡುವ ಜಾಲ ಭೇದಿಸಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಮುಖಂಡ ರಾಮಣ್ಣ ವಿಟ್ಲ, ಕೊಳ್ನಾಡು ಸಾಲೆತ್ತೂರು ಹಿಂದೂ ಹಿತರಕ್ಷಣಾ ಸಮಿತಿಯ ಬಾಲಕೃಷ್ಣ ಸೆರ್ಕಳ, ಪತ್ರಕರ್ತರಾದ ವಿಷ್ಣುಗುಪ್ತ ಪುಣಚ, ಹಮೀದ್ ಕಂದಕ್, ವಿಶ್ವನಾಥ ಬಂಟ್ವಾಳ, ಸಾಮಾಜಿಕ ಮುಖಂಡರಾದ ರಾಜೇಂದ್ರ ರೈ ಬೈಲುಗುತ್ತು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

