ರಂಭಾಪುರಿ ಶ್ರೀ ಅಡ್ಡಪಲ್ಲಕ್ಕಿಗೆ ಷರತ್ತುಬದ್ಧ ಅನುಮತಿ
ಗುಲ್ಬರ್ಗ: ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಹಾಗೂ ಅಡ್ಡಪಲ್ಲಕಿ ಉತ್ಸವಕ್ಕೆ ಷರತ್ತುಬದ್ಧ ಅನುಮತಿ ದೊರೆತಿದ್ದು, ಮೈಸೂರಿನ ಉರಿಲಿಂಗಪೆದ್ದ ಮಠದ ಜ್ಞಾನಪ್ರಕಾಶಾನಂದ ಸ್ವಾಮೀಜಿ ನಡೆಸಲುದ್ದೇಶಿಸಿದ್ದ ಶ್ವಾನ ಪಲ್ಲಕ್ಕಿಗೆ ಮನ್ನಣೆ ನೀಡಲಾಗಿಲ್ಲ.
ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಗುಲ್ಬರ್ಗ ಜಿಲ್ಲಾಧಿಕಾರಿ ಡಾ.ಪ್ರಸಾದ್ ಗುರುವಾರ ಉಭಯ ಬಣಗಳ ಜತೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಬಿಕ್ಕಟ್ಟು ಶಮನಗೊಳಿಸಿದ್ದಾರೆ.
ದಸರಾ ದರ್ಬಾರ್ ಹಾಗೂ ಶರಣರ ಉಪನ್ಯಾಸ ಮಾಲಿಕೆ ನಡೆಯುವ ಕಾರ್ಯಕ್ರಮ ವೇದಿಕೆ 400 ಮೀಟರ್ ಅಂತರದಲ್ಲಿವೆ. ಹೀಗಾಗಿ ಈಗಾಗಲೇ ಆರಂಭವಾಗಿರುವ ಬಸವ ಬಳಗದ ಶರಣ ದರ್ಶನ ಉಪನ್ಯಾಸ ಮಾಲಿಕೆ ನಿತ್ಯ ಸಂಜೆ 6ರಿಂದ 7.30ರವರೆಗೆ ಮಾತ್ರ ನಡೆಸಬೇಕು. ಅ.5ರಿಂದ ಆರಂಭವಾಗಲಿರುವ ರಂಭಾಪುರಿ ದಸರಾ ದರ್ಬಾರ್ ರಾತ್ರಿ 7.30ರಿಂದ ಶುರುವಾಗಬೇಕು. ಉಭಯ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ, ನಿಂದನಾಪರವಾಗಿರುವ ಭಾಷಣ- ಮಾತುಗಳಿಗೆ ನಿಷೇಧ ಹೇರಬೇಕು. ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಸಾಗುವ ದಾರಿ ಕುರಿತು ಮೊದಲೇ ಮಾಹಿತಿ ಒದಗಿಸಬೇಕು. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗದಂತೆ ಕಾರ್ಯಕ್ರಮ ನಡೆಸುತ್ತೇವೆಂದು ಉಭಯ ಬಣದವರೂ ಅಫಿಡವಿಟ್ ನೀಡಬೇಕು.
ಪ್ರಭಾರ ಜಿಲ್ಲಾಧಿಕಾರಿ, ಹೆಚ್ಚುವರಿ ಎಸ್ಪಿ, ಉಭಯ ಬಣಗಳ ಪ್ರಮುಖರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆ ಮಾಡಲಾಗುವುದು. ಈ ಸಮಿತಿ ಜೇವರ್ಗಿಯಲ್ಲಿ ನಡೆಯುವ ಉಭಯ ಕಾರ್ಯಕ್ರಮಗಳ ಬೆಳವಣಿಗೆ ಮೇಲೆ ನಿಗಾ ಇಡಬೇಕು. ಉಪನ್ಯಾಸ, ದರ್ಬಾರ್ ಕಾರ್ಯಕ್ರಮಗಳ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ಷರತ್ತು ವಿಧಿಸಿದ್ದಾರೆ. ಇದಕ್ಕೆ ಉಭಯ ಬಣಗಳು ಒಪ್ಪಿಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

