ಪ್ರಧಾನ ಸುದ್ದಿ

ಇಂದಿನಿಂದ ರೈಲು ಪ್ರಯಾಣ ತುಟ್ಟಿ

Published On :

ನವದೆಹಲಿ: ರೇಲ್ವೆ ಪ್ರಯಾಣ ಈಗ ಮತ್ತಷ್ಟು ದುಬಾರಿಯಾಗಲಿದೆ. ಎಲ್ಲಾ ದರ್ಜೆಗಳ ಪ್ರಯಾಣ ದರ ಸೋಮವಾರದಿಂದ ಶೇ.2ರಷ್ಟು ಏರಿಕೆಯಾಗಲಿದೆ. ಡೀಸೆಲ್ ಹಾಗೂ ವಿದ್ಯುತ್ ವೆಚ್ಚದಲ್ಲಿನ ಏರಿಕೆಯಿಂದಾಗಿ ಉಂಟಾಗಿರುವ 1,200 ಕೋಟಿ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ರೇಲ್ವೆ ಇಲಾಖೆ ದರ ಪರಿಷ್ಕರಿಸಿದೆ.
ಆದರೆ, ಉಪನಗರದ ಎರಡನೇ ದರ್ಜೆ ರೈಲು ಪ್ರಯಾಣದ ಮೇಲೆ ಈ ದರ ಏರಿಕೆ ಅನ್ವಯವಾಗುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ರೇಲ್ವೆ ಇಲಾಖೆ ಈ ಹಿಂದೆ ಜ.15ರಂದು ಪ್ರಯಾಣದರ ಏರಿಕೆ ಮಾಡಿತ್ತು. ಇದಾದ ಬಳಿಕ ಈ ರೀತಿ ದರ ಏರಿಕೆ ಮಾಡುತ್ತಿರುವುದು ಇದೇ ಮೊದಲ ಬಾರಿ. ಪರಿಷ್ಕೃತ ದರವು ಅ.7ರ ಪ್ರಯಾಣಕ್ಕಾಗಿ ಮುಂಗಡವಾಗಿ ಬುಕ್ ಮಾಡಿರುವ ಟಿಕೆಟ್‌ಗಳಿಗೂ ಅನ್ವಯಿಸುತ್ತದೆ ಎಂದೂ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.