ಪತ್ರಕರ್ತರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ 'ಕನ್ನಡಪ್ರಭ'ದ ಕೆ.ವಿ. ಪ್ರಭಾಕರ್ಗೆ ಅತ್ಯಧಿಕ ಮತ
ಕ.ಪ್ರ.ವಾರ್ತೆ ಬೆಂಗಳೂರು ಸೆ. 7
ರಾಜ್ಯ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರ ಹುದ್ದೆಗೆ ಶನಿವಾರ ನಡೆದ ಚುನಾವಣೆಯಲ್ಲಿ 'ಕನ್ನಡಪ್ರಭ' ಮುಖ್ಯ ವರದಿಗಾರ ಕೆ.ವಿ.ಪ್ರಭಾಕರ್ ಅತ್ಯಧಿಕ ಮತ (269)ಗಳಿಂದ ಆಯ್ಕೆಯಾಗಿದ್ದಾರೆ.
ಉಳಿದಂತೆ ಉದಯವಾಣಿ ಪತ್ರಿಕೆಯ ಎಲ್.ಲಕ್ಷ್ಮೀನಾರಾಯಣ (253), ಪ್ರಜಾವಾಣಿಯ ಕೇಶವ ಜಿ. ಝಿಂಗಾಡೆ (234), ವಿಜಯ ವಾಣಿಯ ಮಂಜುನಾಥ್ ಚಾಂದ್(216), ವಿಜಯ ಕರ್ನಾಟಕ ಪತ್ರಿಕೆಯ ಲೋಕೇಶ್ ಕಾಯರ್ಗ(217), ಉದಯವಾಣಿಯ ಅ.ಮ.ಸುರೇಶ್ (228), ಪ್ರಜಾವಾಣಿಯ ರಾಘವೇಂದ್ರ(212), ಹಿರಿಯ ಪತ್ರಕರ್ತ ಜಯರಾಮ ಅಡಿಗ(206), ಟಿವಿ 9 ಸುದ್ದಿವಾಹಿನಿಯ ಉಮಾಶಂಕರ ಕಾರ್ಯ (195) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರ 13 ಸ್ಥಾನಗಳಿಗೆ ಪ್ರೆಸ್ಕ್ಲಬ್ನಲ್ಲಿ ಚುನಾವಣೆ ನಡೆಯಿತು. ಹಿಂದುಳಿದ ವರ್ಗದ ಮೀಸಲು ಸ್ಥಾನದಿಂದ ಸಂಜೆವಾಣಿಯ ದೊಡ್ಡಬೊಮ್ಮಯ್ಯ, ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲು ಸ್ಥಾನದಿಂದ ಪ್ರಜಾವಾಣಿಯ ರಾಜೇಂದ್ರಕುಮಾರ್ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನದಿಂದ ಡಿಎನ್ಎ ಪತ್ರಿಕೆಯ ರಶ್ಮಿ ಬೇಲೂರು ಮತ್ತು ವಿಜಯವಾಣಿಯ ಸುಮನಾ ಲಕ್ಷ್ಮೀಶ ಚುನಾಯಿತರಾಗಿದ್ದಾರೆ. 13 ನಿರ್ದೇಶಕರ ಹುದ್ದೆಗಳಿಗೆ ಒಟ್ಟು 28 ಮಂದಿ ಸ್ಪರ್ಧಿಸಿದ್ದರು. ಚುನಾವಣಾಧಿಕಾರಿಯಾಗಿ ಮುನಿರಾಜು ಕಾರ್ಯ ನಿರ್ವಹಿಸಿದರು. ಪತ್ರಕರ್ತರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜಸ್ವಾಮಿ ಸಹಕಾರ ನೀಡಿದ್ದರು.
ಚುನಾವಣಾ ಆಯೋಗದ ಆದೇಶದಂತೆ ಇದೇ ಮೊದಲ ಬಾರಿಗೆ ನೀತಿ ಸಂಹಿತೆ ಅನ್ವಯ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಸಹಕಾರ ಸಂಘಗಳ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮುನಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

